Ad Widget .

ಕನ್ನಡದ ನಟನ ಮೇಲೆ ಚಿತ್ರಮಂದಿರದಲ್ಲಿ ಮಹಿಳೆಯಿಂದ ಹಲ್ಲೆ

ಸಮಗ್ರ ನ್ಯೂಸ್: ಹೈ ದರಾಬಾದ್‌ನ ಚಿತ್ರಮಂದಿರದಲ್ಲಿ ಕನ್ನಡದ ಖ್ಯಾತ ನಟ ಎನ್.ಟಿ. ರಾಮಸ್ವಾಮಿ ಅವರ ಮೇಲೆ ಮಹಿಳೆಯೊಬ್ಬರು ಓಡಿ ಬಂದು ನಟನಿಗೆ ಹೊಡೆದಿದ್ದಾರೆ.’ಲವ್ ರೆಡ್ಡಿ’ ಸಿನಿಮಾ ಪ್ರದರ್ಶನ ಆಗುತ್ತಿದ್ದ ಚಿತ್ರಮಂದಿರದಲ್ಲಿ ಈ ಘಟನೆ ನಡೆದಿದೆ.

Ad Widget . Ad Widget .

ತೆಲುಗಿನ ‘ಲವ್ ರೆಡ್ಡಿ’ ಸಿನಿಮಾದಲ್ಲಿ ರಾಮಸ್ವಾಮಿ ಅವರು ಒಂದು ಮುಖ್ಯವಾದ ಪಾತ್ರ ಮಾಡಿದ್ದಾರೆ. ಅ.18 ರಂದು ಈ ಸಿನಿಮಾ ಬಿಡುಗಡೆ ಆಯಿತು.’ಲವ್‌ ರೆಡ್ಡಿ’ ಪ್ರದರ್ಶನ ಕಾಣುತ್ತಿದ್ದ ಚಿತ್ರಮಂದಿರವೊಂದಕ್ಕೆ ಸಿನಿಮಾ ತಂಡದವರು ಭೇಟಿ ನೀಡಿದ್ದಾರೆ. ಸಿನಿಮಾಗೆ ಎಲ್ಲ ಕಡೆಗಳಲ್ಲಿ ಪಾಸಿಟಿವ್ ಪ್ರತಿಕ್ರಿಯೆ ಸಿಗುತ್ತಿರುವುದರಿಂದ ಅವರು ಪ್ರೇಕ್ಷಕರ ಎದುರು ಬಂದಿದ್ದಾರೆ. ಆದರೆ ಸಿನಿಮಾ ಮುಗಿದ ಬಳಿಕ ಮಹಿಳೆಯೊಬ್ಬರು ಎನ್‌.ಟಿ. ರಾಮಸ್ವಾಮಿ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ.

Ad Widget . Ad Widget .

ಸಿನಿಮಾ ಪ್ರದರ್ಶನ ಮುಗಿದ ನಂತರ ಚಿತ್ರತಂಡದವರು ಪ್ರೇಕ್ಷಕರ ಬಳಿ ಸಂವಾದ ಮಾಡುತ್ತಿದ್ದರು. ಆಗ ಮಹಿಳೆಯು ಕೂಗಾಡುತ್ತಾ ಓಡಿ ಬಂದು ರಾಮಸ್ವಾಮಿ ಅವರ ಕೆನ್ನೆಗೆ ಬಾರಿಸಲು ಪ್ರಯತ್ನಿಸಿದ್ದಾರೆ. ಅಲ್ಲದೇ, ನಟನ ಬಟ್ಟೆ ಹಿಡಿದುಕೊಂಡು ಹೊಡೆಯಲು ಪ್ರಯತ್ನಿಸಿದ್ದಾರೆ. ಏನು ನಡೆಯುತ್ತಿದೆ ಎಂಬುದು ತಿಳಿಯದೇ ರಾಮಸ್ವಾಮಿ ಅವರು ಕಂಗಾಲಾಗಿದ್ದಾರೆ. ಕೂಡಲೇ ಅಕ್ಕಪಕ್ಕದಲ್ಲಿ ಇದ್ದ ಎಲ್ಲರೂ ಬಂದು ಮಹಿಳೆಯನ್ನು ತಡೆದಿದ್ದಾರೆ. ಹಾಗಿದ್ದರೂ ಕೂಡ ಆ ಮಹಿಳೆಯ ಆಕ್ರೋಶ ಕಡಿಮೆ ಆಗಿಲ್ಲ.

‘ಲವ್ ರೆಡ್ಡಿ’ ಸಿನಿಮಾದಲ್ಲಿ ರಾಮಸ್ವಾಮಿ ಅವರು ವಿಲನ್ ಪಾತ್ರ ಮಾಡಿದ್ದಾರೆ. ಆ ಪಾತ್ರದ ಇಂಪ್ಯಾಕ್ಟ್ ಎಷ್ಟರಮಟ್ಟಿಗೆ ಇದೆ ಎಂದರೆ ಸಿನಿಮಾ ನೋಡಿದ ಮಹಿಳೆಗೆ ಇದೆಲ್ಲ ನಿಜ ಎನಿಸಿದೆ. ಹಾಗಾಗಿ ಆಕೆಗೆ ರಾಮಸ್ವಾಮಿ ಅವರ ಮೇಲೆ ಕೋಪ ಬಂದಿದೆ. ಕೋಪ ತಡೆಯಲಾಗದೇ ಅವರು ನಟನಿಗೆ ಹೊಡೆಯಲು ಬಂದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ.

Leave a Comment

Your email address will not be published. Required fields are marked *