Ad Widget .

ಶಿಗ್ಗಾಂವಿ: ಬಂಡಾಯ ಶಮನಕ್ಕೆ ತೆರಳಿದ್ದ ಸಚಿವ ಜಮೀರ್ ಕಾರಿಗೆ ಕಲ್ಲೇಟು

ಸಮಗ್ರ ನ್ಯೂಸ್: ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಮುಖಂಡರ ನಡುವೆ ತಿಕ್ಕಾಟ ಶುರುವಾಗಿದ್ದು, ಸಚಿವ ಝಮೀರ್ ಅಹ್ಮದ್ ಖಾನ್ ಅವರ ಕಾರಿನ ಮೇಲೆ ಕೆಲ ಕಾರ್ಯಕರ್ತರು ಹುಲಗೂರಿನಲ್ಲಿ ಕಲ್ಲು ತೂರಾಟ ನಡೆಸಿದ್ದಾರೆ.

Ad Widget . Ad Widget .

ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿರುವ ಸೈಯದ್ ಅಜ್ಜಂಪೀರ್ ಖಾದ್ರಿ ಅವರ ಮನವೋಲಿಸಲು ಝಮೀರ್ ಅಹ್ಮದ್ ಅವರು ಮನೆಗೆ ಹೋಗಿದ್ದರು. ಇದೇ ಸಂದರ್ಭದಲ್ಲಿ ಅವರು ಅಭ್ಯರ್ಥಿ ಯಾಸೀರ್ ಅಹ್ಮದ್ ಖಾನ್ ಅವರ ಕಾರಿನಲ್ಲಿ ಹೋಗಿದ್ದರು.

Ad Widget . Ad Widget .

ಟಿಕೆಟ್ ಕೈ ತಪ್ಪಿದ್ದರಿಂದ ಆಕ್ರೋಶಗೊಂಡಿರುವ ಸೈಯದ್ ಖಾದ್ರಿ ಪರ ಬೆಂಬಲಿಗರು, ಕಾರಿನ ಮೇಲೆ ಏಕಾಏಕಿ ಕಲ್ಲು ತೂರಾಟ ನಡೆಸಿದ್ದಾರೆ. ಸ್ಥಳೀಯ ಮುಖಂಡರು ಜಮೀರ್ ಅವರನ್ನು ಪಾರು ಮಾಡಿ ವಾಪಸು ಕಳುಹಿಸಿದ್ದಾರೆ.

Leave a Comment

Your email address will not be published. Required fields are marked *