Ad Widget .

‘ಮತ್ಸ್ಯವಾಹಿನಿ’ ಯೋಜನೆಯಡಿ‌ ತ್ರಿಚಕ್ರ ವಾಹನ ಪಡೆಯಲು ಮೀನು ಮಾರಾಟಗಾರರಿಂದ ಅರ್ಜಿ ಆಹ್ವಾನ

ಸಮಗ್ರ ನ್ಯೂಸ್: ಸ್ಥಳೀಯವಾಗಿ ಮೀನು ಸೇವನೆಯನ್ನು ಪ್ರೋತ್ಸಾಹಿಸಲು ಹಾಗೂ ತಾಜಾ ಮೀನು ಮತ್ತು ಮೀನು ಉತ್ಪನ್ನಗಳ ಮಾರಾಟಕ್ಕಾಗಿ “ಮತ್ಸ್ಯವಾಹಿನಿ” ಯೋಜನೆಯಡಿ ತ್ರಿಚಕ್ರ ವಾಹನ ಗಳನ್ನು ಪರವಾನಿಗೆ ಆಧಾರದಲ್ಲಿ ಪಡೆಯಲು ಆಸಕ್ತ ಮೀನು ಮಾರಾಟಗಾರರಿಂದ ಅರ್ಜಿ ಆಹ್ವಾನಿಸಲಾಗಿದೆ.

Ad Widget . Ad Widget .

ದಕ್ಷಿಣ ಕನ್ನಡ ಜಿಲ್ಲೆಗೆ ಒಟ್ಟು 10 ವಾಹನಗಳನ್ನು ನೀಡುವ ಗುರಿ ಇದೆ. ಆಯ್ಕೆಯಾಗುವ ಸಾಮಾನ್ಯ ವರ್ಗದ ಅರ್ಜಿದಾರರು ಇಲಾಖೆಗೆ ಭದ್ರತಾ ಠೇವಣಿಯಾಗಿ ರೂ 1 ಲಕ್ಷ ಹಾಗೂ ಪರಿಶಿಷ್ಟ ಜಾತಿ/ಪಂಗಡ/ಮಹಿಳೆಯರು ರೂ. 50 ಸಾವಿರ ನೀಡಬೇಕು ಹಾಗೂ ಮಾಸಿಕ ರೂ. 3,000/- ಬಾಡಿಗೆ ಮೊತ್ತವನ್ನು ಪಾವತಿಸಬೇಕು. ಅರ್ಜಿ ಸಲ್ಲಿಸಲು ನವೆಂಬರ್ 15 ಕೊನೆಯ ದಿನ.

Ad Widget . Ad Widget .

ಹೆಚ್ಚಿನ ಮಾಹಿತಿಗೆ ಮೀನುಗಾರಿಕೆ ಸಹಾಯಕ ನಿರ್ದೇಶಕರು, ಮಂಗಳೂರು ಜಿಲ್ಲಾ ಪಂಚಾಯತ್ ಕಚೇರಿ ಆವರಣ, ಕೊಟ್ಟಾರ, ಮಂಗಳೂರು ಅಥವಾ ಮೀನುಗಾರಿಕೆ ಸಹಾಯಕ ನಿರ್ದೇಶಕರು, ತಾಲೂಕು ಪಂಚಾಯತ್ ಕಟ್ಟಡ, ಪುತ್ತೂರು ಇವರನ್ನು ಸಂಪರ್ಕಿಸುವಂತೆ ಮೀನುಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment

Your email address will not be published. Required fields are marked *