Ad Widget .

ಬಿಎಂಟಿಸಿ ಕಂಡಕ್ಟ‌ರ್ ಹತ್ಯೆಗೆ ಯತ್ನಿಸಿದ ಪ್ರಯಾಣಿಕ

ಸಮಗ್ರ ನ್ಯೂಸ್: ಕಲ್ಲಿನಿಂದ ಬಿಎಂಟಿಸಿ ಕಂಡಕ್ಟರ್ ತಲೆ ಜಜ್ಜಲು ಪ್ರಯಾಣಿಕ ಬಂದಿದ್ದ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ನಡೆದಿದೆ.ಸಂಗಪ್ಪ ಪ್ರಾಣಾಪಾಯದಿಂದ ಪಾರಾದ ಕಂಡಕ್ಟರ್ ಹಾಗೂ ಹೇಮಂತ್ ಆರೋಪಿ.

Ad Widget . Ad Widget .

ಕಳೆದ ಶುಕ್ರವಾರ ಟಿನ್ ಫ್ಯಾಕ್ಟರಿ ಬಳಿ ಈ ಘಟನೆ ನಡೆದಿದೆ.ಮೂರು ದಿನದ ಹಿಂದೆ ಪಾಸ್ ತೋರಿಸುವ ವಿಚಾರಕ್ಕೆ ಕಂಡಕ್ಟ‌ರ್ ಮತ್ತು ಪ್ರಯಾಣಿಕನ ನಡುವೆ ಕಿರಿಕ್ ಆಗಿತ್ತು.ಆ ವೇಳೆ ಕಂಡಕ್ಟ‌ರ್ ಸಂಗಪ್ಪನ ಹೊಟ್ಟೆಗೆ ಗುದ್ದಿ ಆರೋಪಿ ಹೇಮಂತ್ ಎಸ್ಕೆಪ್ ಆಗಿದ್ದ.ಅದಾದ ಬಳಿಕ ಮೂರು ದಿನಗಳಿಂದ ಕಂಡಕ್ಟರ್ ಮೇಲೆ ಹಲ್ಲೆ ಮಾಡಲು ಹೇಮಂತ್ ಹೊಂಚು ಹಾಕಿದ್ದ.

Ad Widget . Ad Widget .

ಅದರಂತೆ ಕಳೆದ 18ರ ಮಧ್ಯಾನ್ಹ ಟಿನ್ ಫ್ಯಾಕ್ಟರಿ ಬಸ್‌ ಸ್ಟ್ಯಾಂಡ್‌ನಲ್ಲಿ ಬಸ್‌ನಲ್ಲಿ ಕುಳಿತು ಊಟ ಮಾಡುತ್ತಿರುವ ವೇಳೆ ಈ ಘಟನೆ ನಡೆದಿದೆ.ಆರೋಪಿ ಹೇಮಂತ್ ದೊಡ್ಡದಾದ ಕಲ್ಲಿನಿಂದ ಕಂಡಕ್ಟ‌ರ್ ಸಂಗಪ್ಪನ ತಲೆಗೆ ಹೊಡೆದು ಎಸ್ಕೆಪ್ ಆಗಿದ್ದಾನೆ. ನಂತರ ಪ್ರಯಾಣಿಕರು ಆತನನ್ನು ಹಿಡಿದು ಪೋಲಿಸರ ವಶಕ್ಕೆ ನೀಡಿದ್ದಾರೆ. ಇದು ಕಳೆದ 2 ತಿಂಗಳಲ್ಲಿ ಮೂರನೇ ಘಟನೆಯಾಗಿದೆ.

ಮೊದಲನೇ ಘಟನೆ ಸೆಪ್ಟೆಂಬರ್ 8 ರಂದು ಅತ್ತಿಬೆಲೆ ಟು ಮೆಜೆಸ್ಟಿಕ್ ಬರುತ್ತಿದ್ದ ವೋಲ್ಲೋ ಬಸ್‌ನಲ್ಲಿ ಹೊಸ ರೋಡ್ ಬಸ್‌ ಸ್ಟಾಪ್‌ನಲ್ಲಿ ಕಂಡಕ್ಟರ್‌ಗೆ ಸ್ಕೂ ಡ್ರೈವರ್‌ನಿಂದ ಚುಚ್ಚಲು ಕಿಡಿಗೇಡಿಯೊಬ್ಬ ಮುಂದಾಗಿದ್ದ.

ಎರಡನೇ ಘಟನೆಯಲ್ಲಿ ಅಕ್ಟೋಬರ್ 1ರಂದು ವೈಟ್ ಫೀಲ್ಡ್ ಬಳಿಯ ಐಟಿಪಿಎಲ್ ಬಸ್‌ ಸ್ಟಾಪ್‌ನಲ್ಲಿ ಬಿಎಂಟಿಸಿ ವೋಲ್ಲೋ ಬಸ್ ಕಂಡಕ್ಟರ್ ಯೋಗೇಶ್‌ಗೆ ಹರ್ಷ ಸಿನ್ಹಾ ಎನ್ನುವ ಯುವಕ ಯೋಗೇಶ್‌ಗೆ ಹರ್ಷ ಸಿನ್ಹಾ ಎನ್ನುವ ಯುವಕ ಎರಡೂರು ಬಾರಿ ಚಾಕುವಿನಿಂದ ಚುಚ್ಚಿ ಕೊಲ್ಲಲು ಯತ್ನಿಸಿದ್ದ.

Leave a Comment

Your email address will not be published. Required fields are marked *