ಮಂಗಳೂರು: ಪಿಕಪ್ – ಆಟೋ ನಡುವೆ ಭೀಕರ ಅಪಘಾತ| ಶಾಲಾ ಬಾಲಕಿ ದುರ್ಮರಣ

ಸಮಗ್ರ ನ್ಯೂಸ್: ಶಾಲಾ ಮಕ್ಕಳ ಪಿಕಪ್ ವಾಹನ ಹಾಗೂ ಆಟೋ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಓರ್ವ ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಕಲ್ಲಪಾದೆ ಬಳಿ ನಡೆದಿದೆ. ದೇರಳಕಟ್ಟೆ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಆಯಿಷಾ ವಹಿದಾ (10) ಮೃತ ವಿದ್ಯಾರ್ಥಿನಿ.

Ad Widget ... ..

ಬಡಕಬೈಲು ಮೊಹಮ್ಮದ್ ಮುನ್ಸಿಯಾ ದಂಪತಿಯ ಪುತ್ರಿ ಮೃತ ಬಾಲಕಿ. ಮದಕ ಕಡೆಯಿಂದ ದೇರಳಕಟ್ಟೆ ಕಡೆಗೆ ಬರುತ್ತಿದ್ದ ಆಟೋ ಕಲ್ಲಪಾದೆ ಬಳಿ ವೇಗವಾಗಿ ಬಂದ ಪಿಕಪ್ ವಾಹನಕ್ಕೆ ಡಿಕ್ಕಿಯಾಗಿದೆ. ಅಪಘಾತದಲ್ಲಿ ಸ್ಥಳದಲ್ಲೇ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಪೊಲಿಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.

Ad Widget

Leave a Comment

Your email address will not be published. Required fields are marked *