Ad Widget .

ಹೊಸ ಲೋಗೋ ಹೊಸ ಪ್ಲಾನ್‌ಗಳು/ ಖಾಸಗಿ ಸಂಸ್ಥೆಗಳಿಗೆ ನಡುಕ ಹುಟ್ಟಿಸುತ್ತಿರುವ ಬಿಎಸ್‌ಎನ್‌ಎಲ್‌

ಸಮಗ್ರ ನ್ಯೂಸ್‌: ಬಳಕೆದಾರ ಸ್ನೇಹಿ ಮೊಬೈಲ್ ರಿಚಾರ್ಜ್ ಪ್ಲಾನ್‌ಗಳನ್ನು ಘೋಷಿಸುತ್ತಿರುವ ಬಿಎಸ್‌ಎನ್‌ಎಲ್, ಇದೀಗ ಲೋಗೋ ಬದಲಿಸಿಕೊಳ್ಳುವ ಮೂಲಕ ಜನರಿಗೆ ಮತ್ತಷ್ಟು ಹತ್ತಿರವಾಗಲು ಪ್ರಯತ್ನಿಸಿದೆ. ಖಾಸಗಿ ಸಂಸ್ಥೆಗಳಿಗೆ ಟಕ್ಕರ್ ಕೊಡುತ್ತಿರುವ ಭಾರತ್ ಸಂಚಾ‌ರ್ ನಿಗಮ್ ಲಿಮಿಟೆಡ್’ ತನ್ನ ಲೋಗೋ ಅನ್ನು ಬದಲಾಯಿಸಿಕೊಂಡು, ಹೊಸ ಚೈತನ್ಯದೊಂದಿಗೆ ಗ್ರಾಹಕರ ಮುಂದೆ ಬಂದಿದೆ.

Ad Widget . Ad Widget .

ಈ ಹೊಸ ಲೋಗೋದಲ್ಲಿ ದೇಶ ಐಕ್ಯತೆ ಸಾರುವ ಭಾರತದ ತ್ರಿವರ್ಣ ಧ್ವಜದ ಮೂರು ಬಣ್ಣಗಳಿವೆ. ಬಿಎಸ್‌ಎನ್‌ಎಲ್ ಕನೆಕ್ಕಿಂಗ್ ಪೀಪಲ್ ಹಾಗೇ ಉಳಿಸಿಕೊಳ್ಳಲಾಗಿದೆ. ಅದರೊಂದಿಗೆ ‘ಸುರಕ್ಷಿತ, ವಿಶ್ವಾಸಾರ್ಹ, ಕೈಗೆಟುಕುವ ಘೋಷವಾಕ್ಯದೊಂದಿಗೆ ಹೊಸ ವಿನ್ಯಾಸದಲ್ಲಿ ಕಂಗೊಳಿಸುತ್ತಿದೆ. ವ್ಯತ್ತಾಕಾರದ ಕೇಸರಿ ಬಣ್ಣದಲ್ಲಿ ಭಾರತದ ನಕಾಶ ಇದೆ. ಟೆಲಿಕಾಂ ತರಂಗಗಳು ಸುತ್ತುವರಿದಿರುವಂತೆ ಎರಡು ಬಾಣದ ಗುರುತುಗಳಿದ್ದು, ಅದರಲ್ಲಿ ಒಂದು ಬಿಳಿ ಬಣ್ಣ, ಮತ್ತೊಂದು ಹಸಿರು ಬಣ್ಣದಲ್ಲಿದೆ. ಒಟ್ಟಾರೆ ಈ ಮೂರ ಬಣ್ಣಗಳು ರಾಷ್ಟ್ರಧ್ವಜವನ್ನು ಪ್ರತಿನಿಧಿಸುವಂತೆ ಲೋಗೋ ವಿನ್ಯಾಸ ಮಾಡಲಾಗಿದೆ.

Ad Widget . Ad Widget .

ಬಿಎಸ್‌ಎನ್‌ಎಲ್‌ನಲ್ಲಿ ಈಗ ಆಟೋಮೇಟೆಡ್ ಸಿಮ್ ಕಿಯೋಸ್ ಕೂಡ ಸೇರಿದೆ. ಇಲ್ಲಿ ದಿನದ 24 ಗಂಟೆಯೂ ಹೊಸ ಸಿಮ್ ಖರೀದಿಸಬಹುದು. ಅಪ್‌ ಗ್ರೇಡ್ ಮಾಡಬಹುದು. ಪೋರ್ಟ್ ಮಾಡಬಹುದು. ಕ್ಯುಆರ್ ಕೋಡ್‌ನಲ್ಲಿ ಪೇಮೆಂಟ್ ಮಾಡಬಹುದು. ಸದ್ಯ 1.8 ಕೋಟಿ ಗ್ರಾಹಕರು ಬಿಎಸ್‌ಎನ್‌ಎಲ್‌ಗೆ ಸೇರಿದ್ದಾರೆ. ಜಿಯೋ, ಏರ್‌ಟೆಲ್ ಇನ್ನಿತರ ಖಾಸಗಿ ಟೆಲಿಕಾಂ ಸಂಸ್ಥೆಗಳು ಮೊಬೈಲ್ ರಿಚಾರ್ಜ್ ದರಗಳನ್ನು ದುಬಾರಿ ಮಾಡಿಕೊಂಡಿವ. ಆದರೆ ಬಿಎಸ್‌ಎನ್‌ಎಲ್ 1ದಿನ, 28, 85, 365 ದಿನಗಳ ಮೊಬೈಲ್ ರಿಚಾರ್ಜ್ ಪ್ಲಾನ್‌ಗಳು ಇತರ ಕಂಪನಿಗಳ ಪ್ಲಾನ್‌ಗಿಂತ ಕಡಿಮೆ ಇದೆ.

Leave a Comment

Your email address will not be published. Required fields are marked *