Ad Widget .

ಸನ್ಯಾಸತ್ವ ಸ್ವೀಕಾರ ಮಾಡಿದ ಯುವತಿಯರು- ದಾವಣಗೆರೆಯಲ್ಲಿ ಅದ್ಧೂರಿ ಸಮಾರಂಭ

ಸಮಗ್ರ ನ್ಯೂಸ್: ಮದುವೆ ವಯಸ್ಸಿಗೆ ಬಂದ ಯುವತಿಯರಿಬ್ಬರು ಸನ್ಯಾಸತ್ವ ಸ್ವೀಕಾರ ಮಾಡಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ.ಮಾನಸಿ ಕುಮಾರಿ, ಭಕ್ತಿ ಕುಮಾರಿ ಈ ಇಬ್ಬರು ಜೈನ ದೀಕ್ಷೆ ಪಡೆಯಲು ನಿರ್ಧಾರ ಮಾಡಿದ್ದಾರೆ. ಮಾನಸಿ ಕುಮಾರಿ MA ಸೈಕಾಲಜಿ ಹಾಗೂ ಗೋಕಾಕ್‌ನ ಭಕ್ತಿ ಕುಮಾರಿ ಬಿಎ, ಎಲ್‌ಎಲ್‌ಬಿ ಮಾಡಿದ್ದಾರೆ.

Ad Widget . Ad Widget .

ಇವರೊಬ್ಬರು ಜೈನ ದೀಕ್ಷೆ ಪಡೆಯುವ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿ ಅದ್ಧೂರಿ ಸಮಾರಂಭ ಆಯೋಜಿಸಲಾಗಿತ್ತು. ಸಂಭ್ರಮದಲ್ಲಿ ಭಾಗಿಯಾದ ಇಬ್ಬರ ಕುಟುಂಬಸ್ಥರು ಅಭಿನಂದನೆ ತಿಳಿಸಿದರು.ಇವರಿಬ್ಬರ ಸನ್ಯಾಸತ್ವ ಸ್ವೀಕಾರ ಕಾರ್ಯಕ್ರಮವು ನವೆಂಬರ್ 17ಕ್ಕೆ ಜಾರ್ಖಂಡ್‌ನಲ್ಲಿ ನಡೆಯಲಿದೆ.

Ad Widget . Ad Widget .

ಪರಮಪೂಜ್ಯ ಆಚಾರ್ಯ ಶ್ರೀ ಮುಕ್ತಿ ಪ್ರಭು ಸುರೀಶ್ವರ್ ಜೀ ಮಹಾರಾಜರ ಹಾಗೂ ಪರಮ ಪೂಜ್ಯ ಸಾಧವಿ ಶ್ರೀ ಪೂರ್ಣಪ್ರಜ್ಞ ಶ್ರೀ ಜಿ ಮಹಾರಾಜ ಸಾಹೇಬ ಸಮ್ಮುಖದಲ್ಲಿ ರುಜುಬಾಲಿಕಾ ತೀರ್ಥಕ್ಷೇತ್ರದಲ್ಲಿ ಇಬ್ಬರೂ ಜೈನ ಸನ್ಯಾಸತ್ವ ದೀಕ್ಷೆಯನ್ನು ಸ್ವೀಕರಿಸಲಿದ್ದಾರೆ.

Leave a Comment

Your email address will not be published. Required fields are marked *