ಸಮಗ್ರ ನ್ಯೂಸ್:ಹಸಿರು ಎಲೆ ತರಕಾರಿಗಳನ್ನು ಮೀರಿಸುವಂತಹ ಸತ್ವಗಳು ಬಸಳೆ ಸೊಪ್ಪಿನಲ್ಲಿ ಅಡಗಿವೆ.ಕಡಿಮೆ ಕ್ಯಾಲೋರಿ ಅಂಶವಿದ್ದು,ವಿಟಮಿನ್ ‘ಎ’, ವಿಟಮಿನ್ ‘ಸಿ ‘,ವಿಟಮಿನ್ ‘ಬಿ9 ‘, ಕಬ್ಬಿಣ,ಕ್ಯಾಲ್ಸಿಯಂ,ತಾಮ್ರ,ಮೆಗ್ನಿಷಿಯಂ,ಪೋಸ್ಪ್ಯಾರಸ್,ಪೊಟ್ಯಾಸಿಯಂ ಸೇರಿವೆ.
ಜೊತೆಗೆ ಲ್ಯೂಟೀನ್ ಮತ್ತು ಬೀಟಾ – ಕೆರೋಟಿನ್ ಎಂಬ ಎರಡು ಆಂಟಿ -ಓಕ್ಸಿಡೆಂಟ್ ಗಳು ಬಾಯಿಯಲ್ಲಿ ಉಂಟಾಗುವ ಹುಣ್ಣಿನಿಂದ ಹಿಡಿದು ಸರ್ವರೋಗಕ್ಕೂ ಮದ್ದು ಎಂಬ ಖ್ಯಾತಿ ಬಸಳೆ ಸೊಪ್ಪಿಗಿದೆ.ಬಸಳೆ ಸೊಪ್ಪಿನಲ್ಲಿ ಫೋಲೇಟ್ ಅಂಶ ಅಧಿಕವಾಗಿದೆ. ಇದು ಸಾಮಾನ್ಯವಾಗಿ ರಕ್ತದಲ್ಲಿನ ಹಿಮೋಸಿಸ್ಟಿನ್ ಮಟ್ಟವನ್ನು ತಗ್ಗಿಸುತ್ತದೆ.
ಗರ್ಭಿಣಿ ಮಹಿಳೆಯರು ತಮ್ಮ ಗರ್ಭಾವಸ್ಥೆಯ ಸಮಯದಲ್ಲಿ ನಿತ ನಿಯಮಿತವಾಗಿ ವೈದ್ಯರ ಸೂಚನೆಯ ಮೇರೆಗೆ ಮನುಷ್ಯನ ದೇಹದಲ್ಲಿ ಕಬ್ಬಿಣದ ಅಂಶದ ಕೊರತೆ ಉಂಟಾದರೆ ಹಲವಾರು ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ.ಇದರಿಂದ ದೇಹದಲ್ಲಿ ಕಡಿಮೆ ಪ್ರಮಾಣದ ಹಿಮೋಗ್ಲೋಬಿನ್ ಉಂಟಾಗಿ ಸರಿಯಾದ ಪ್ರಮಾಣದ ಆಮ್ಲಜನಕ ದೇಹದ ಎಲ್ಲಾ ಕೋಶಗಳಿಗೆ ಪೂರೈಕೆ ಆಗಲು ಸಾಧ್ಯವಾಗುವುದಿಲ್ಲ.
ಇದರಿಂದ ಮಾನಸಿಕ ತೊಂದರೆ ದೇಹದಲ್ಲಿ ನಿಶ್ಯಕ್ತಿ ಸಮಸ್ಯೆಗಳು ಹೆಚ್ಚಾಗುತ್ತವೆ. ಮಕ್ಕಳು ಮತ್ತು ಮಹಿಳೆಯರಿಗೆ ಹೆಚ್ಚು ತೊಂದರೆ ಕಾಣಿಸುವ ಸಾಧ್ಯತೆ ಇರುತ್ತದೆ. ಆದರೆ ಹಿರಿಯರು ಹೇಳುವಂತೆ ಬಸಳೆ ಸೊಪ್ಪಿನಲ್ಲಿ ಈ ಎಲ್ಲಾ ಸಮಸ್ಯೆಗಳಿಗೆ ಸುಲಭವಾ ಪರಿಹಾರ ಸಿಗುತ್ತದೆ.