ಆಟವಾಡಲು ತೆರಳಿದ್ದಾಗ ಕೆಂಗೇರಿ ಕೆರೆಗೆ ಬಿದ್ದು ಅಣ್ಣಾ ತಂಗಿ ಸಾವು..!

ಸಮಗ್ರ ನ್ಯೂಸ್: ಬೆಂಗಳೂರಿನ ಕೆಂಗೇರಿ ಕೆರೆ ಬಳಿ ನಿನ್ನೆ ಸಂಜೆ ಆಟವಾಡಲು ಹೋಗಿದ್ದ ಅಣ್ಣ-ತಂಗಿ ಮೃತಪಟ್ಟ ಘಟನೆ ಬೆಳಕಿಗೆ ಬಂದಿದೆ. ಜಾನ್ ಸೀನಾ (13), ಮಹಾಲಕ್ಷ್ಮೀ(11) ನಾಪತ್ತೆಯಾದವರು. ಕೆಂಗೇರಿ ಕೆರೆ ಪಕ್ಕದ ಬಡಾವಣೆಯಲ್ಲಿ ವಾಸವಾಗಿರುವ ನಾಗಮ್ಮ ಎಂಬುವರ ಮಕ್ಕಳು ನಿನ್ನೆ ಸಂಜೆ 6 ಗಂಟೆ ಸುಮಾರಿಗೆ ಕೆಂಗೇರಿ ಕೆರೆ ನೀರು ತರಲು ಹೋಗಿದ್ದರು.

Ad Widget ... ..

ಇದೆ ಸಂದರ್ಭದಲ್ಲಿ ನೀರು ತರಲು ಹೋದವರು ಕೆರೆ ಬಳಿ ಆಟವಾಡುತ್ತಿದ್ದರು. ಆಟವಾಡುತ್ತಾ ಆಯತಪ್ಪಿ ಕೆಂಗೇರಿ ಕೆರೆಯಲ್ಲಿ ಬಿದ್ದಿದ್ದು , ಕೆರೆಯ ದಂಡೆ ಮೇಲೆ ಮಕ್ಕಳ ಬಟ್ಟೆ ಮತ್ತು ಬಿಂದಿಗೆ ಪತ್ತೆಯಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ಪೋಲಿಸರು ದೌಡಾಯಿಸಿದ್ದು, ಶೋಧಕಾರ್ಯ ನಡೆಯುತ್ತಿದೆ, ಇದೀಗ ಅಣ್ಣಾ ಜಾನ್ ಸೀನಾ ಮೃತದೇಹ ಪತ್ತೆಯಾಗಿದೆ. ತಂಗಿ ಮಹಾಲಕ್ಷ್ಮೀಗಾಗಿ ಶೋಧಕಾರ್ಯ ಮುಂದುವರೆಯುತ್ತಿದೆ.

Ad Widget

ನಾಗಮ್ಮ ಬಿಬಿಎಂಪಿಯಲ್ಲಿ ಕಸ ವಿಂಗಡಣೆ ಕೆಲಸ ಮಾಡುತ್ತಿದ್ದಾರೆ. ನಾಗಮ್ಮ ತನ್ನ ಇಬ್ಬರು ಮಕ್ಕಳು ಮತ್ತು ಸಹೋದರಿ ಧನಲಕ್ಷ್ಮೀ ಜೊತೆಗೆ ಕೆಂಗೇರಿ ಬಳಿ ವಾಸವಾಗಿದ್ದಾರೆ.

Leave a Comment

Your email address will not be published. Required fields are marked *