Ad Widget .

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಕ್ರೋಧಿ ನಾಮ ಸಂವತ್ಸರ ದಕ್ಚಿಣಾಯನ ಶರದ್ ಋತು ಆಶ್ವಯುಜ ಮಾಸದ ಶುಕ್ಲಪಕ್ಷ ಏಕಾದಶಿಯಿಂದ ಬಹುಳ ತದಿಗೆಯವರೆಗೆ ಅಂದರೆ 13.10.24 ರಿಂದ 20.10.24 ವರೆಗೆ, ಈ ವಾರದ ಚಂದ್ರನ ಸಂಚಾರ ಧನಿಷ್ಠ ನಕ್ಷತ್ರದಿಂದ ಕೃತ್ತಿಕಾವರೆಗೆ ವಾರಭವಿಷ್ಯ ಹೇಗಿದೆ ಎಂದು ತಿಳಿಯೋಣ…

Ad Widget . Ad Widget .

ಮೇಷರಾಶಿ: . ಏಳನೇ ಮನೆಯಲ್ಲಿ ಬುಧ ಬಹಳ ಒಳ್ಳೆಯ ಫಲ ನೀಡುತ್ತಾನೆ. ಬಹುದಿನಗಳಿಂದ ಕಾಯುತ್ತಿದ್ದ ಒಂದು ಸಂಗತಿ ಈ ವಾರ ನಿಮ್ಮ ಕೈಸೇರುತ್ತದೆ. ಆರನೇ ಮನೆಯ ಕೇತು, ಸೂರ್ಯ ಧನಲಾಭ ಕೊಡುತ್ತಾರೆ. ಮೂರರಲ್ಲಿ ಮಂಗಳ ಶಕ್ತಿಯನ್ನು ಕೊಡುತ್ತಾನೆ.‌ ಎರಡನೇ ಮನೆಯ ಗುರು ರಕ್ಷೆ ನೀಡುತ್ತಾನೆ. ಸಮಯ ಬಹಳ ಚೆನ್ನಾಗಿದೆ.

Ad Widget . Ad Widget .

ವೃಷಭರಾಶಿ:
ರಾಶಿಯಲ್ಲಿ ಗುರು ಇರುವುದು ಏನೂ ಹೆಚ್ವಿನ ತೊಂದರೆ ಇಲ್ಲವಾದರೂ ಒತ್ತಡಗಳನ್ನು ಕೊಡುತ್ತದೆ. ಐದನೇ ಮನೆಯ ಸೂರ್ಯನಿಂದ ಎಂಬಿಎ, ವಕೀಲಿ, ಆಡಳಿತ ವಿದ್ಯಾರ್ಥಿಗಳಿಗೆ ಶುಭ.‌ ಆರನೇ ಮನೆಯಲ್ಲಿ ಬುಧ, ಏಳನೇ ಮನೆಯಲ್ಲಿ ಶುಕ್ರ ಶುಭಫಲಗಳನ್ನು ಕೊಡುತ್ತಾರೆ. ಆದರೆ ಲಾಭ ಸ್ಥಾನದ ರಾಹುವಿನಿಂದ ನಿಮಗೆ ಹೆಚ್ಚಿನ ಉಪಯೋಗ ಇದೆ. ರಾಹು ಹಣಬಲ, ದೇಹಬಲ, ಹೆಚ್ಚಿಸುತ್ತಾನೆ. ಧೈರ್ಯವನ್ನೂ ಕೊಡುತ್ತಾನೆ.‌ ಎರಡನೇ ಮನೆಯ ಕುಜ ಮೂರನೇ ಮನೆಗೆ ಬಂದಾಗ ನಿನಗೆ ಇನ್ನೂ ಹೆಚ್ಚಿನ ಶುಭಫಲಗಳು ಸಿಗುತ್ತವೆ.

ಮಿಥುನರಾಶಿ:
ಐದನೇ ಮನೆಯಲ್ಲಿ ನಿಮ್ಮ ರಾಶಿಯ ಅಧಿಪತಿ ಬುಧ ಇರುವುದು ನಿಮಗೆ ಬಹಳ ಶುಭಫಲಗಳನ್ನು ಕೊಡುತ್ತದೆ. ಈ ವಾರ ನೀವು ಬುಧನಿಂದ ಬಹಳಷ್ಟು ಅನುಗ್ರಹಗಳನ್ನು‌ ಪಡೆಯುತ್ತೀರಿ. ಆರನೇ ಮನೆಯಲ್ಲಿ ಶುಕ್ರ ಸಹ ಶುಭಫಲಗಳನ್ನು ನಿಡುತ್ತಾನೆ. 12 ರಲ್ಲಿ ಗುರು ಇದ್ದು ಕೊಂಚ ಒತ್ತಡಗಳು ಇರುತ್ತದೆ. ಆದರೂ ನೀವು ಅವನ್ನೆಲ್ಲ ಸಂಭಾಳಿಸಿಕೊಂಡು ಮುಂದೆ ಸಾಗಬಲ್ಲಿರಿ.

ಕಟಕರಾಶಿ:
ಗುರು ಹನ್ನೊಂದನೇ ಮನೆಯಲ್ಲಿ ಇದ್ದು ನಿಮಗೆ ಲಾಭ ಕೊಡುತ್ತಾನೆ. ಇದು ನಿಮಗೆ ಬಹಳ‌ದೊಡ್ಡ ಶಕ್ತಿ.‌ದೊಡ್ಡವರ ದೃಷ್ಡಿ ನಿಮ್ಮ ಮೇಲೆ ಬೀಳುವುದು ಯಶಸ್ಸು ಅಭಿವೃದ್ಧಿ ತೋರಿಸುತ್ತದೆ. ಮೂರರಲ್ಲಿ ಸೂರ್ಯ ಕೇತು ಧನಲಾಭ ಕೊಡುತ್ತಾರೆ. ನಾಲ್ಕನೇ ಮನೆಯಲ್ಲಿ ಬುಧ ಐದನೇ ಮನೆಯಲ್ಲಿ ಶುಕ್ರ ಸಮಯ ನಿಮಗೆ ಬಹಳ ಅನುಕೂಲ ವಾಗಿದೆ. ಏನಾದರೂ ಸಾಧಿಸುವ ಸಮಯ ಇದು. ಮುಂದುವರೆಯಿರಿ. ಯಶಸ್ಸು ನಿಮ್ಮದಾಗಲಿ

ಸಿಂಹರಾಶಿ:
ಹತ್ತನೇ ಮನೆಯಲ್ಲಿ ಗುರು ಏಳನೇ ಮನೆಯಲ್ಲಿ ಶನಿ‌ ಇದ್ದು ಬಹಳ ಒತ್ತಡಗಳನ್ನು ಎದುರಿಸಬೇಕಾಗುತ್ತದೆ. ಹಣಕಾಸಿನ ಪರಿಸ್ಥಿತಿ ಗಂಭೀರವಾಗಿದೆ. ಹಣದ ಹರಿವು ಇದ್ದರೂ‌ ಖರ್ಚುಗಳು ಅಧಿಕವಾಗಿದೆ.‌ ಮೂರನೇ ಮನೆಯಲ್ಲಿ ಬುಧ, ನಾಲ್ಕನೇ ಮನೆಯಲ್ಲಿ ಶುಕ್ರ ಇಬ್ಬರೂ ಹಣದ ಹರಿವನ್ನು ಉತ್ತಮಪಡಿಸುತ್ತಾರೆ. ಆರೋಗ್ಯ ದಲ್ಲಿ ಕೂಡ ಜಾಗ್ರತೆ ವಹಿಸಬೇಕು.

ಕನ್ಯಾರಾಶಿ:
ಹಣದ ಹರಿವು ಬಹಳ ಚೆನ್ನಾಗಿದೆ. ಎರಡನೇ ಮನೆಯಲ್ಲಿ ಬುಧ ಮೂರನೇ ಮನೆಯಲ್ಲಿ ಶುಕ್ರ ಒಂಬತ್ತನೇ ಮನೆಯಲ್ಲಿ ಗುರು ಆರನೇ ಮನೆಯಲ್ಲಿ ರಾಹು ಸಮಯ ಬಹಳ ಚೆನ್ನಾಗಿದೆ. ನಾಲ್ಕೂ ದಿಕ್ಕಿನಿಂದಲೂ ಹಣ ಬರುವ ಯೋಗ ಇದೆ. ಅಡಚಣೆಯಿಂದ ನಿಂತಿರುವ ಕೆಲಸಗಳೆಲ್ಲ ಈಗ ಚಾಲನೆ ಪಡೆದುಕೊಳ್ಳುತ್ತದೆ. ಸರ್ಕಾರಿ ಸಂಸ್ಥೆಗಳಲ್ಲಿ ಲೋನ್ ಸಿಗುತ್ತದೆ. ವೃತ್ತಿಯಲ್ಲಿ ಯಶಸ್ಸು ಇದೆ. ಬಡ್ತಿ ಸಿಗುತ್ತದೆ. ವಿವಾಹ ಯೋಗ ಇದೆ.

ತುಲಾರಾಶಿ:
ಈಗ ಗುರುಬಲ ಇಲ್ಲದಿರುವುದರಿಂದ ಏನೋ ಒಂದು ರೀತಿಯ ಭಯ ಅನಿಶ್ಚಿತ ಮನೋಭಾವ ಇರುತ್ತದೆ. ಎಲ್ಲವನ್ನೂ ಸಂದೇಹಿಸಿ ನೋಡುವಂತಾಗುತ್ತದೆ. ಯಾವುದರಲ್ಲೂ ಅತಿ ನಂಬಿಕೆ ಮತ್ತು ಆತುರ ಎರಡೂ ಬೇಡ. ಏನು ಮಾಡಬೇಕೆಂದು ಇದ್ದರೂ ಒಂದೆರಡು ಬಾರಿ ಯೋಚಿಸಿ ಮುಂದುವರೆಯಿರಿ. ಎರಡನೇ ಮನೆಯಲ್ಲಿ ಶುಕ್ರ ಆರನೇ ಮನೆಯ ರಾಹು ಧನಲಾಭ ಕೊಡುತ್ತಾರೆ. ನಿಮ್ಮ ರಾಶಿಯಲ್ಲೇ ಬುಧ ಇದ್ದಾನೆ ನಿಮಗೆ ರಕ್ಷಣೆ ಕೊಡುತ್ತಾನೆ. ಪಂಚಮ ಶನಿಯ ಪ್ರಭಾವ ಕಡಿಮೆ ಆಗುತ್ತಿದೆ. ಮುಂದಿನ ದಿನಗಳು ಶುಭ ವನ್ನು ತರುತ್ತದೆ.

ವೃಶ್ಚಿಕ ರಾಶಿ:
ಈಗ ನಿಮ್ಮ ಭಾಗ್ಯದ ಬಾಗಿಲು ತೆರೆದಿದೆ. ನೀವು ನೆನೆಸಿದ ಕಾರ್ಯ ಗಳೆಲ್ಲ ಈಗ ನೆರವೇರುವ ಸಮಯ. ಗುರು ಏಳನೇನೆಯಲ್ಲಿ ಇದ್ದು ನಿಮ್ಮ ರಾಶಿಯನ್ನು ನೋಡುತ್ತಾನೆ. ಶುಕ್ರ ನಿಮ್ಮ ರಾಶಿಯಲ್ಲೇ ಇದ್ದಾನೆ. ‌ಎರಡೂ ನಿಮಗೆ ಶುಭಯೋಗ ತರುತ್ತದೆ. ಐದನೇ ಮನೆಯಲ್ಲಿ ರಾಹು ಇರುವುದು ಕೊಂಚ ದೋಷಕಾರಕ. ರಾಹುಶಾಂತಿ ಮಾಡಿಸಿಕೊಳ್ಳಿ. ಲಾಭಸ್ಥಾನದಲ್ಲಿ ಕೇತು ಧನಲಾಭ ಕೊಡುತ್ತಾನೆ. ಈಗ ನೀವು ಭಾಗ್ಯವಂತರಾಗುವ ಸಮಯ.

ಧನಸ್ಸುರಾಶಿ:
ಆರನೇ ಮನೆಯಲ್ಲಿ ಗುರು ಕೊಂಚ ದೋಷಕಾರಕ.‌ ಮನದಲ್ಲಿ ಅನಿಶ್ಚಿಂತೆ ಭಯ ಕಳವಳ ಉಂಟು ಮಾಡುತ್ತಾನೆ. ‌ನಿಮ್ಮ ವ್ಯಕ್ತಿತ್ವಕ್ಕೆ ಮಸಿ ಬಳಿಯುವಂತ ಘಟನೆಗಳು ನಡೆಯಬಹುದು ಜಾಗ್ರತೆಯಿಂದ ಇರಿ. ಹನ್ನೊಂದನೇ ಮನೆಯಲ್ಲಿ ಬುಧ ಇದ್ದು ಧನಲಾಭ ಕೊಡುತ್ತಾನೆ. ಬಂಧುಗಳನ್ನು ಭೇಟಿ ಮಾಡುವ ಸಂಭವ ಇದೆ. ಮೂರರಲ್ಲಿ ಶನಿ ಧನಲಾಭ ಕೊಡುತ್ತಾನೆ. ಮಾತೃಸಮಾನರೊಡನೆ ಮನಸ್ಸಿಗೆ ಕಿರಿಕಿರಿ ಆಗುತ್ತದೆ. ವೃತ್ತಿಯಲ್ಲಿ ಯಶಸ್ಸು ಇದೆ ಹಾಗೆಯೇ ಒತ್ತಡಗಳೂ ಇವೆ. ಎಲ್ಲ ಸಂಗತಿಗಳಲ್ಲೂ ಜಾಗರೂಕತೆ ಇರಲಿ.

ಮಕರರಾಶಿ:
ಈಗ ನಿಮಗೆ ಬಂಗಾರದಂತ ಸಮಯ. ನಿಮ್ಮ ಕಷ್ಟಗಳೆಲ್ಲ ತೀರಿದೆ. ಶನಿಯ ಪ್ರಭಾವ ಕಡಿಮೆ ಆಗಿದೆ. ಶುಕ್ರ ಲಾಭಸ್ಥಾನದಲ್ಲಿ, ಗುರು ಐದನೇ ಮನೆಯಲ್ಲಿ, ರಾಹು ಮೂರನೇ ಮನೆಯಲ್ಲಿ ಸಮಯ ಬಹಳ ಚೆನ್ನಾಗಿದೆ. ನೀವು ಅಂದುಕೊಂಡ ಕೆಲಸಗಲಕೆಲ್ಲ ಕಾರ್ಯರೂಪಕ್ಕೆ ಬರಲು ಇದು ಸುಸಮಯ. ಒಂದು ಒಳ್ಳೆಯ ಬದಲಾವಣೆ ಇದೆ. ಇದರಿಂದ ನಿಮಗೆ ಬಹಳ ಒಳ್ಳೆಯ ದಾಗುತ್ತದೆ

ಕುಂಭರಾಶಿ:
ಈಗ ನಿಮ್ಮ ಸಮಯ ಅಷ್ಡೊಂದು ಅನುಕೂಲಕರವಾಗಿಲ್ಲ. ಗುರು ನಾಲ್ಕನೇ ಮನೆಯಲ್ಲಿ ಬಹಳ ಪರೀಕ್ಷೆಗಳನ್ನು ಒಡ್ಡುತ್ತಾನೆ. ಎರಡನೇ ಮನೆಯಲ್ಲಿ ರಾಹು ಕುಟುಂಬದಲ್ಲಿ ಅಶಾಂತಿ ತೋರಿಸುತ್ತಿದ್ದಾನೆ. ಎಂಟನೇ ಮನೆಯಲ್ಲಿ ಕೇತು ಅನಾರೋಗ್ಯ ತೋರಿಸುತ್ತಾನೆ. ನೀವು ನಿಮ್ಮ ಮನೆದೇವರ ಮೇಲೆ ನಂಬಿಕೆ ಇಡಿ. ಗುರು ಪ್ರಾರ್ಥನೆ ಮಾಡಿ. ಸತ್ಯ ಮತ್ತು ಪ್ರಾಮಾಣಿಕತೆಯಿಂದ ಮುನ್ನಡೆಯಿರಿ.

ಮೀನರಾಶಿ:
ನೀವು ಸಾಡೆಸಾತಿ ಶನಿಯ ಮೊದಲಭಾಗದಲ್ಲಿ ಇದ್ದೀರಿ. ಕಷ್ಡಗಳು ಸಹಜ. ಅಂದುಕೊಂಡ ಕೆಲಸಗಳು ಮುಂದುವರೆಯುವ ದಾರಿ ಕಾಣದೆ ಕಂಗಾಲಾಗುತ್ತೀರಿ.‌ ಮನೆಯಲ್ಲಿ ಅಶಾಂತಿ ಅನಾರೋಗ್ಯ ಹಣಕಾಸಿನ ಖರ್ಚು ಇರುತ್ತದೆ. ಸುಬ್ರಹ್ಮಣ್ಯ ನ ಪ್ರಾರ್ಥನೆ ಮಾಡಿ. ದುರ್ಗಾಪರಮೇಶ್ವರಿ ಯನ್ನು ಪೂಜಿಸಿ.

Leave a Comment

Your email address will not be published. Required fields are marked *