Ad Widget .

ಮುಂದಿನ ಐದು ವರ್ಷದಲ್ಲಿ ಐದು ಲಕ್ಷ ಉದ್ಯೋಗ ಸೃಷ್ಟಿ/ ಟಾಟಾ ಸನ್ಸ್ ಅಧ್ಯಕ್ಷ ಎನ್.ಚಂದ್ರಶೇಖರನ್

ಸಮಗ್ರ ನ್ಯೂಸ್‌: ಮುಂದಿನ ಐದು ವರ್ಷದಲ್ಲಿ ಟಾಟಾ ಸಮೂಹವು ದೇಶದ ತಯಾರಿಕಾ ವಲಯದಲ್ಲಿ ಐದು ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲಿದೆ. ಇದಕ್ಕಾಗಿ ಎಲ್ಲ ಪೂರಕ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ತಯಾರಿಕಾ ವಲಯದಲ್ಲಿ ಹೊಸದಾಗಿ ಉದ್ಯೋಗಗಳನ್ನು ಸೃಷ್ಟಿಸದ ಹೊರತು ವಿಕಸಿತ ಭಾರತದ ಆಶಯ ಈಡೇರಿಕೆ ಕಷ್ಟಸಾಧ್ಯ’ ಎಂದು ಟಾಟಾ ಸನ್ಸ್ ಅಧ್ಯಕ್ಷ ಎನ್.ಚಂದ್ರಶೇಖರನ್ ಹೇಳಿದ್ದಾರೆ.

Ad Widget . Ad Widget .

ಟಾಟಾ ಸಮೂಹವು ಸೆಮಿಕಂಡಕ್ಟರ್‌ನ ತಯಾರಿಕೆ ಮತ್ತು ಜೋಡಣೆ, ವಿದ್ಯುತ್‌ಚಾಲಿತ ವಾಹನಗಳು, ಬ್ಯಾಟರಿಗಳು ಹಾಗೂ ಅದಕ್ಕೆ ಸಂಬಂಧಿಸಿದ ಕೈಗಾರಿಕೆಗಳಲ್ಲಿ ಹೆಚ್ಚಿನ ಹೂಡಿಕೆ ಮಾಡಲಿದೆ. ಇದರಿಂದ ಉದ್ಯೋಗಗಳು ಸೃಷ್ಟಿ ಆಗಲಿವೆ. ದೇಶದಲ್ಲಿ ಉದ್ಯೋಗಾಕಾಂಕ್ಷಿಗಳ ಸಂಖ್ಯೆ ಹೆಚ್ಚುತ್ತಿದೆ. ಹಾಗಾಗಿ, ನಾವು ವರ್ಷಕ್ಕೆ 10 ಕೋಟಿ ಉದ್ಯೋಗಗಳನ್ನು ಸೃಷ್ಟಿಸುವ ಅಗತ್ಯವಿದೆ ಎಂದು ಇಂಡಿಯನ್ ಫೌಂಡೇಷನ್ ಫಾರ್ ಕ್ಯಾಲಿಟಿ ಮ್ಯಾನೇಜ್‌ಮೆಂಟ್‌ನಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಹೇಳಿದರು.

Ad Widget . Ad Widget .

Leave a Comment

Your email address will not be published. Required fields are marked *