Ad Widget .

SSLC ಅಥವಾ PUC ಪಾಸಾಗಿದ್ದೀರಾ? KPTCL ನಲ್ಲಿದೆ ಭರ್ಜರಿ ಉದ್ಯೋಗಾವಕಾಶ

ಸಮಗ್ರ ನ್ಯೂಸ್: ಇಂಧನ ಇಲಾಖೆಯ ಪ್ರಮುಖ ನಿಗಮವಾಗಿರುವ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮವು (KPTCL) ಹಲವು ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. 2975 ಕಿರಿಯ ಸ್ಟೇಶನ್ ಅಟೆಂಡಂಟ್, ಕಿರಿಯ ಪವರ್‌ಮ್ಯಾನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.

Ad Widget . Ad Widget .

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕಿರಿಯ ಸ್ಟೇಶನ್ ಅಟೆಂಡಂಟ್, ಕಿರಿಯ ಪವರ್‌ಮ್ಯಾನ್ ಹುದ್ದೆಗಳ ಭರ್ತಿಗಾಗಿ ಅಧಿಕೃತ ಅಧಿಸೂಚನೆಯ ಮೂಲಕ 2024 ಅಕ್ಟೋಬರ್‌ನಲ್ಲಿ ಅರ್ಜಿಗಳನ್ನು ಆಹ್ವಾನಿಸಿದ್ದು, ಅಕ್ಟೋಬರ್21 ರಂದು ಅರ್ಜಿ ಸಲ್ಲಿಸುವ ಚಟುವಟಿಕೆಯು ಶುರುವಾಗಲಿದೆ. ಅಭ್ಯರ್ಥಿಗಳು ಅಗತ್ಯವಿರುವ ವಿದ್ಯಾರ್ಹತೆ, ವಯೋಮಿತಿ ಹಾಗೂ ವೇತನ ಶ್ರೇಣಿಯ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಲು ಅವಕಾಶ ನೀಡಲಾಗಿದ್ದು. ನವೆಂಬರ್‌ 20 ಒಳಗಾಗಿ ಅರ್ಜಿಗಳನ್ನು ಸಲ್ಲಿಸಬೇಕು ಎಂದು ಕೆಪಿಟಿಸಿಎಲ್‌ ಆಡಳಿತ ಮತ್ತು ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕರು ತಿಳಿಸಿದ್ದಾರೆ.

Ad Widget . Ad Widget .

ಹುದ್ದೆಗಳ ವರ್ಗೀಕರಣ,ಮೀಸಲಾತಿ ವಿವರ, ಕಲ್ಯಾಣ ಕರ್ನಾಟಕ ಪ್ರದೇಶ ಮೀಸಲಾತಿ, ವಯೋಮಿತಿ, ನೇಮಕಾತಿ ವಿಧಾನ, ಪರೀಕ್ಷಾ ವಿಧಾನ,ಅರ್ಜಿಯ ನಮೂನೆ ಹಾಗೂ ಇತರೆ ವಿವರಗಳನ್ನು ಒಳಗೊಂಡ ಉದ್ಯೋಗ ಪ್ರಕಟಣೆಯನ್ನು ನಿಗಮದ ವೆಬ್‌ಸೈಟ್‌ಗಳಲ್ಲಿ ಪ್ರಕಟಿಸಲಾಗಿದೆ ಎಂದು ಹೇಳಿದ್ದಾರೆ.

ವಿದ್ಯಾರ್ಹತೆ,ಅರ್ಜಿ ಸಲ್ಲಿಕೆ ಹೇಗೆ

ಒಟ್ಟು ಹುದ್ದೆಗಳು 2975. ಇದರಲ್ಲಿ 433 ಕಿರಿಯ ಸ್ಟೇಶನ್ ಅಟೆಂಡಂಟ್ ಹಾಗೂ 2542 ಕಿರಿಯ ಪವರ್‌ಮ್ಯಾನ್ ಹುದ್ದೆಗಳು.
10ನೇ, 12ನೇ ತರಗತಿ ಪಾಸಾಗಿರಬೇಕು. ಡಿಪ್ಲೋಮಾ, ಬಿ.ಇ ಅಥವಾ ಬಿ.ಟೆಕ್ ತೇರ್ಗಡೆಯಾಗಿರಬೇಕು.
ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಶನ್ ಲಿಮಿಟೆಡ್ ನೇಮಕಾತಿ ಅಧಿಸೂಚನೆಯ ಪ್ರಕಾರ 2024 ನವೆಂಬರ್ 20ರಂತೆ ಅಭ್ಯರ್ಥಿಯ ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 35 ವರ್ಷವಾಗಿರಬೇಕು.
ಎಸ್‌ಸಿ/ಎಸ್‌ಟಿ/ಕ್ಯಾಟಗರಿ-I ಅಭ್ಯರ್ಥಿಗಳು: 05 ವರ್ಷ ಸಡಿಲಿಕೆ. ಪ್ರವರ್ಗ -2ಎ/2ಬಿ/3ಎ & 3ಬಿ ಅಭ್ಯರ್ಥಿಗಳು: 03 ವರ್ಷ ಸಡಿಲಿಕೆ ನೀಡಲಾಗಿದೆ.

ವಿಶೇಷಚೇತನ ಅಭ್ಯರ್ಥಿಗಳು ಶೂನ್ಯ ಶುಲ್ಕ. ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳು: ರೂ. 378 ಶುಲ್ಕ ಸಾಮಾನ್ಯ/ಪ್ರವರ್ಗ -2ಎ/2ಬಿ/3ಎ & 3ಬಿ ಅಭ್ಯರ್ಥಿಗಳು: ರೂ. 614 ಶುಲ್ಕ ಕಟ್ಟಬೇಕು
ಅಭ್ಯರ್ಥಿಗಳಿಗೆ ಮೆರಿಟ್ ಪಟ್ಟಿ, ಕನ್ನಡ ಭಾಷಾ ಪರೀಕ್ಷೆ, ಆಪ್ಟಿಟ್ಯೂಡ್ ಪರೀಕ್ಷೆ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
1ನೇ ವರ್ಷ: ರೂ. 17,000/- 2ನೇ ವರ್ಷ: ರೂ. 19,000/- 3ನೇ ವರ್ಷ: ರೂ. 21,000/- ವೇತನ ಶ್ರೇಣಿಯನ್ನು ನಿಗದಿಪಡಿಸಲಾಗಿದೆ.

ಆನ್‌ಲೈನ್‌ ಅರ್ಜಿ ಸಲ್ಲಿಕೆ ಹೇಗೆ

ಕೆಪಿಟಿಸಿಎಲ್‌ ವೆಬ್‌ಸೈಟ್‌ ಇಲ್ಲವೇ ಕರ್ನಾಟಕದ ವಿದ್ಯುತ್‌ ವಿತರಣಾ ಸಂಸ್ಥೆಗಳಾ ಬೆಸ್ಕಾಂ, ಸೆಸ್ಕ್‌, ಗೆಸ್ಕಾಂ, ಹೆಸ್ಕಾಂ, ಮೆಸ್ಕಾಂ ವೆಬ್‌ಸೈಟ್‌ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು.

ವೆಬ್‌ಸೈಟ್‌ ತೆರೆದರೆ ಅದರಲ್ಲಿ ಎರಡೂ ಹುದ್ದೆಯ ಲಿಂಕ್‌ ಸಿಗಲಿದೆ. ಅಲ್ಲಿ ಮಾಹಿತಿಯನ್ನು ನೀಡಿ ಕೆಲವು ದಾಖಲೆ ಅಪ್‌ಲೋಡ್‌ ಮಾಡಬೇಕು. ಆನಂತರ ಪರೀಕ್ಷಾ ದಿನಾಂಕ ತಿಳಿಸಿ ಪ್ರವೇಶ ಪತ್ರ ನೀಡಲಾಗುತ್ತದೆ.

ವೆಬ್‌ಸೈಟ್‌ನಲ್ಲಿಯೇ ಮಾಹಿತಿಗಳನ್ನು ನೀಡಲಾಗಿದ್ದು. ಅದನ್ನು ನಿಖರವಾಗಿ ಪಡೆದುಕೊಳ್ಳಬಹುದು.

ವೆಬ್‌ಸೈಟ್‌ ವಿವರ

https://kptcl.karnataka.gov.in

https://bescom.karnataka.gov.in

https://cescmysore.karnataka.gov.in

https://hescom.karnataka.gov.in

https://mecom.karnataka.gov.in

https://gescom.karnataka.gov.in

Leave a Comment

Your email address will not be published. Required fields are marked *