Ad Widget .

ಕರಾಳ ದಿನ ಆಚರಣೆಗೆ ಅನುಮತಿ ನೀಡಲ್ಲ ಕಡ್ಡಿಮುರಿದಂತೆ ಎಂಇಎಸ್‌ಗೆ ಮುಖಭಂಗ ಮಾಡಿದ ಡಿಸಿ ರೋಷನ್

ಸಮಗ್ರ ನ್ಯೂಸ್: ರಾಜ್ಯೋತ್ಸವ ದಿನವೇ ಕರಾಳ ದಿನಕ್ಕೆ ಅನುಮತಿ ಕೋರಿ ಎಂಇಎಸ್ ನಿಂದ ಡಿಸಿಗೆ ಮನವಿ ಮಾಡಲಾಗಿತ್ತು. ಆದರೆ ಡಿಸಿ ಮೊಹಮ್ಮದ್ ರೋಷನ್ ಅವರು ನವೆಂಬರ್ 1 ರಂದು ಎಂಇಎಸ್ ಕರಾಳ ದಿನಾಚರಣೆಗೆ ಅನುಮತಿ ಇಲ್ಲ ಎಂದು ಕಡ್ಡಿಮುರಿದಂತೆ ಹೇಳಿದ್ದಾರೆ.

Ad Widget . Ad Widget .

ಯಾವುದೇ ರೀತಿಯ ಕರ್ನಾಟಕದ ಐಕ್ಯತೆ ಧಕ್ಕೆ ತರುವ ಹೋರಾಟ, ಪ್ರತಿಭಟನೆಗೆ ಅವಕಾಶ ಕೊಡುವುದಿಲ್ಲ ಎಂದಿದ್ದಾರೆ.ಬೆಳಗಾವಿಯಲ್ಲಿ ಮತ್ತೆ ಎಂಇಎಸ್‌ ಮುಖಂಡರಿಗೆ ಮುಖಭಂಗವಾಗಿದೆ. ಮೊನ್ನೆಯಷ್ಟೇ ಬೆಳಗಾವಿಯ ಮರಾಠಾ ಮಂಡಲ ಕಾರ್ಯಾಲಯದಲ್ಲಿ ಎಂಇಎಸ್ (MES) ಮುಖಂಡರು ಸಭೆ ನಡೆಸಿ ಕನ್ನಡ ರಾಜ್ಯೋತ್ಸವಕ್ಕೆ ಪ್ರತಿಯಾಗಿ ಕರಾಳ ದಿನ ಆಚರಣೆಗೆ ನಿರ್ಧಾರ ಮಾಡಿದ್ದರು.

Ad Widget . Ad Widget .

ರಾಜ್ಯೋತ್ಸವ ದಿನವೇ ಕರಾಳ ದಿನಕ್ಕೆ ಅನುಮತಿ ಕೋರಿ ಎಂಇಎಸ್‌ ನಿಂದ ಡಿಸಿಗೆ ಮನವಿ ಮಾಡಲಾಗಿತ್ತು. ಆದರೆ ಡಿಸಿ ಮೊಹಮ್ಮದ್ ರೋಷನ್ ಅವರು ನವೆಂಬರ್ 1 ರಂದು ಎಂಇಎಸ್‌ ಕರಾಳ ದಿನಾಚರಣೆಗೆ ಅನುಮತಿ ಇಲ್ಲ ಬೆಳಗಾವಿ ಡಿಸಿ ಕಚೇರಿಯಲ್ಲಿ ಎಂಇಎಸ್ ಮುಖಂಡರಿಗೆ ಬುದ್ದಿವಾದ ಹೇಳಿದ್ದಾರೆ.ರಾಜ್ಯೋತ್ಸವ ದಿನ ಬಿಟ್ಟು ಬೇರೆ ದಿನ ಹೋರಾಟ ಮಾಡಿ ಎಂದು ಡಿಸಿ ಮೊಹಮ್ಮದ್ ರೋಷನ್ ಬುದ್ಧಿ ಹೇಳಿದ್ದಾರೆ.

ಇದಕ್ಕೆ ಎಂಇಎಸ್‌ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದು ಡಿಸಿ ಗರಂ ಆಗಿದ್ದಾರೆ. ನಾನು ತೆಗೆದುಕೊಳ್ಳುವ ನಿರ್ಧಾರಕ್ಕೆ ಒಪ್ಪಿಕೊಳ್ಳಬೇಕೆಂದು ಹೇಳಿ ಡಿಸಿ ರೋಷನ್ ಅವರು ಎಂಇಎಸ್ ಪುಂಡರಿ ಕಡ್ಡಿ ಮುರಿದಂತೆ ಖಡಕ್ ಆಗಿ ಹೇಳಿ ಕಳಿಸಿದ್ದಾರೆ.

Leave a Comment

Your email address will not be published. Required fields are marked *