ಸಮಗ್ರ ನ್ಯೂಸ್: ಕಜಾನ್‌ನಲ್ಲಿ ಅಕ್ಟೋಬರ್ 22 ಮತ್ತು ಅಕ್ಟೋಬರ್ 24ರಂದು ಬ್ರಿಕ್ಸ್ ಶೃಂಗಸಭೆ ನಡೆಯಲಿದ್ದು, ಈ ಹಿನ್ನಲೆಯಲ್ಲಿ ಬ್ರಿಕ್ಸ್ ಸದಸ್ಯತ್ವಕ್ಕಾಗಿ 34 ದೇಶಗಳು ಅಧಿಕೃತವಾಗಿ ಅರ್ಜಿ ಸಲ್ಲಿಸಿದೆ. ಕಜಾನ್‌ನಲ್ಲಿ ಬ್ರಿಕ್ಸ್ ಶೃಂಗಸಭೆಯಲ್ಲಿ 10 ಹೊಸ ಸದಸ್ಯರು ಮತ್ತು 10 ಪಾಲುದಾರರನ್ನು ಘೋಷಿಸಲಾಗುತ್ತದೆ. ಸಂಘರ್ಷ ಪೀಡಿತ ರಾಷ್ಟ್ರಗಳಾದ ಪ್ಯಾಲೆಸ್ತೀನ್, ಸಿರಿಯಾ ಮತ್ತು ಮ್ಯಾನ್ಮಾರ್ ಕೂಡ ಸದಸ್ಯತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದು ಒಮ್ಮತದ ಅಭಿಪ್ರಾಯ ನಂತರ ಘೋಷಣೆ ಮಾಡಲಾಗುತ್ತದೆ.
ಪ್ರಧಾನಿ ನರೇಂದ್ರ ಮೋದಿ ಅವರು ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದು, ಮೂರು ತಿಂಗಳ ಅವಧಿಯಲ್ಲಿ ರಷ್ಯಾಕ್ಕೆ ಅವರ ಎರಡನೇ ಭೇಟಿಯಾಗಲಿದೆ. ಮೋದಿ ಇತರ ಸದಸ್ಯರ ನಾಯಕರೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸುವ ಸಾಧ್ಯತೆಯಿದೆ.
ಅಕ್ಟೋರಿಯಾ, ಅಜೆರ್ಬೈಜಾನ್, ಬನ್, ಬಾಂಗ್ಲಾದೇಶ, ಬೆಲಾರಸ್, ಬೊಲಿವಿಯಾ, ಕ್ಯೂಬಾ, ಚಾಡ್, ರಿಪಬ್ಲಿಕ್ ಆಫ್ ಕಾಂಗೋ, ಈಕ್ವಟೋರಿಯಲ್ ಗಿನಿಯಾ, ಎರಿಟ್ರಿಯಾ, ಹೊಂಡುರಾಸ್, ಇಂಡೋನೇಷಿಯಾ. ಕಝಾಕಿಸ್ತಾನ್ ಸೇರಿವೆ. ಕುವೈತ್, ಲಾವೋಸ್, ಮಲೇಷ್ಮಾ. ಮ್ಯಾನ್ಮಾರ್, ಮೊರಾಕೊ, ನಿಕರಾಗುವಾ, ನೈಜೀರಿಯಾ, ಪಾಕಿಸ್ತಾನ, ಸೆನೆಗಲ್, ದಕ್ಷಿಣ ಸುಡಾನ್, ಶ್ರೀಲಂಕಾ, ವ್ಯಾಲೆಸ್ಟೈನ್ ರಾಜ್ಯ, ಸಿರಿಯಾ, ಥೈಲ್ಯಾಂಡ್, ಟರ್ಕಿ, ಉಗಾಂಡಾ, ಉದ್ವೇಕಿಸ್ತಾನ್. ವೆನೆಜುವೆಲಾ, ವಿಯಟ್ನಾಂ ಮತ್ತು ಜಿಂಬಾಬೈ ಅರ್ಜಿ ಸಲ್ಲಿಸಿವೆ.