Ad Widget .

ಬಾಬಾ ಸಿದ್ದಿಕಿಯ ಭೀಕರ ಮರ್ಡರ್..! ಹತ್ಯೆ ಹೊಣೆ ಹೊತ್ತುಕೊಂಡ ಬೀಷ್ಣೋಯ್ ಗ್ಯಾಂಗ್

ಸಮಗ್ರ ನ್ಯೂಸ್: ಮಹಾರಾಷ್ಟ್ರ NCP ನಾಯಕ ಬಾಬಾ ಸಿದ್ದಿಕಿಯನ್ನ ಮುಂಬೈನಲ್ಲಿ ಗುಂಡಿಕ್ಕಿ ಹತ್ಯೆಗೈಯಲಾಗಿತ್ತು. ಡಿಸಿಎಂ ಅಜಿತ್ ಪವಾರ್ ಬಣದಲ್ಲಿ ಗುರುತಿಸಿಕೊಂಡ ಬಾಬಾ ಸಿಧ್ಧಿಕಿಯನ್ನು ಕಚೇರಿ ಸಮೀಪದ ರಾಮಮಂದಿರ ಬಳಿ ಶೂಟ್ ಮಾಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹರ್ಯಾಣದ ಕರ್ನೈಲ್ ಸಿಂಗ್ ಮತ್ತು ಉತ್ತರ ಪ್ರದೇಶದ ಧರ್ಮರಾಜ್ ಕಶ್ಯಪ್ ಎಂಬ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದ್ದು, ಮೂರನೆಯವರು ಪರಾರಿಯಾಗಿದ್ದಾರೆ.

Ad Widget . Ad Widget .

ದಾಳಿಗೂ ಮುನ್ನಾ ಮೂವರು ಆರೋಪಿಗಳು ರಾತ್ರಿ ಆಟೋ ರಿಕ್ಷಾದಲ್ಲಿ ಬಂದಿದ್ದು, ಸ್ವಲ್ಪ ಸಮಯ ಕಾಯುತ್ತಿದ್ದರು ಎಂದು ಮೂಲಗಳು ತಿಳಿಸಿವೆ. ಪೊಲೀಸರು ಎರಡು ಆಯಮಾಗಳಿಂದ ಪ್ರಕರಣದ ತನಿಖೆ ಮಾಡುತ್ತಿದ್ದಾರೆ. ಒಂದು ಬಿಷ್ಣೋಯ್ ಗ್ಯಾಂಗ್ ಮತ್ತು ಇನ್ನೊಂದು ಸ್ಲಂ ಪುನರ್ವಸತಿ ಪ್ರಕರಣಕ್ಕೆ ಸಂಬಂಧಿಸಿದೆ.

Ad Widget . Ad Widget .

ಇನ್ನೂ ಹತ್ಯೆ ಮಾಡಿರುವುದು ತಾವೇ ಎಂದು ಬಿಷ್ಣೊಯ್ ಗ್ಯಾಂಗ್ ಹೇಳಿದೆ. ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಸಿದ್ದಿಕಿ ಆಪ್ತರಾಗಿದ್ದರಿಂದ ಹತ್ಯೆಯಲ್ಲಿ ಬಿಷ್ಣೋಯ್ ಗ್ಯಾಂಗ್‌ ಭಾಗಿಯಾಗಿರುವುದು ಬಲವಾಗಿದೆ. ಸಿದ್ದಿಕ್ ಅವರಿಗೆ 15 ದಿನಗಳ ಹಿಂದೆ ಜೀವ ಬೆದರಿಕೆ ಕರೆ ಬಂದಿದ್ದರಿಂದ ಅವರಿಗೆ ‘ವೈ’ ವರ್ಗದ ಭದ್ರತೆ ನೀಡಲಾಗಿತ್ತು ಎಂದು ಬಲ್ಲ ಮೂಲಗಳು ತಿಳಿಸಿವೆ.

Leave a Comment

Your email address will not be published. Required fields are marked *