ಇಲ್ಲಿದೆ ಸಂಪೂರ್ಣ ಮಾಹಿತಿ
ಸಮಗ್ರ ನ್ಯೂಸ್ :ದ್ರಾಕ್ಷಿ ಹಣ್ಣುಗಳ ಸೇವನೆ ಮಾಡುವುದು ಆರೋಗ್ಯಕ್ಕೆ ಹಿತಕರ. ಅಲ್ಲದೇ ಇದು ಹೃದಯದ ಆರೋಗ್ಯವನ್ನು ಅಚ್ಚುಕಟ್ಟಾಗಿ ಕಾಪಾಡುತ್ತದೆ.ವ್ಯಾಯಾಮ ಮಾಡಿದ ನಂತರ ಒಂದು ಲೋಟ ದ್ರಾಕ್ಷಿ ಹಣ್ಣಿನ ರಸವನ್ನು ಪ್ರತಿ ದಿನ ಕುಡಿಯುವುದರಿಂದ ಸೊಂಟದ ಭಾಗದಲ್ಲಿರುವ ಬೊಜ್ಜು ಕಡಿಮೆಯಾಗಿ ದೇಹದ ತೂಕ ನಿಯಂತ್ರಣಕ್ಕೆ ಬರುತ್ತದೆ.
ಆರೋಗ್ಯ ತಜ್ಞರು ಹೇಳುವ ಹಾಗೆ, ಅನಾರೋಗ್ಯ ಸಮಸ್ಯೆಯಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಪರೋಕ್ಷವಾಗಿ ನಮಗೆ ಸಹಾಯ ಮಾಡುವುದು ನಮ್ಮ ದೇಹದ ರೋಗನಿರೋಧಕ ಶಕ್ತಿ ಒಂದೇ.ಹಾಗಾಗಿ ರೋಗನಿರೋಧಕ ಶಕ್ತಿ ಹೆಚ್ಚಾಗಬೇಕೆಂದರೆ ಅತಿ ಹೆಚ್ಚು ವಿಟಮಿನ್ ಸಿ ಅಂಶವನ್ನು ಒಳಗೊಂಡ ಹಣ್ಣುಗಳು, ಹಾಗೂ ಆಹಾರಗಳನ್ನು ಸೇವನೆ ಮಾಡಬೇಕು.
ಅದರಲ್ಲೂ ಈ ದ್ರಾಕ್ಷಿ ಹಣ್ಣುಗಳಲ್ಲಿ ವಿಟಮಿನ್ ಸಿ ಅಂಶ ಹೆಚ್ಚಾಗಿ ಕಂಡು ಬರುತ್ತದೆ.ಹಾಗಾಗಿ ಈ ದ್ರಾಕ್ಷ ಹಣ್ಣನ್ನು ನಿಯಮಿತವಾಗಿ ಸೇವಿಸದರ ಒಳ್ಳೆದು.ತನ್ನಲ್ಲಿ ಅಧಿಕ ಪ್ರಮಾಣದ ನಾರಿನಾಂಶ ಹಾಗೂ ಖನಿಜಾಂಶ ಗಳನ್ನು ಒದಗಿಸುವ ಸಾಮರ್ಥ್ಯ ಇದೆ.ಇದರಿಂದಾಗಿ ದೇಹದ ತೂಕವನ್ನು ನಿಯಂತ್ರಣ ಮಾಡುವಲ್ಲಿ ಹಾಗೂ ಜೀರ್ಣಶಕ್ತಿಯನ್ನು ಸರಿಯಾಗಿ ನಡೆಸುವಲ್ಲಿ ಸಹಕಾರಿಯಾಗಲಿದೆ.
ದ್ರಾಕ್ಷಿ ಹಣ್ಣುಗಳಲ್ಲಿ ನೀರಿನ ಅಂಶದ ಪ್ರಮಾಣ ಅಗಾಧ ಪ್ರಮಾಣದಲ್ಲಿದ್ದು, ನಮ್ಮ ದೇಹದ ಪೌಷ್ಟಿಕ ಸತ್ವಗಳ ಪ್ರಮಾಣವನ್ನು ಹೆಚ್ಚು ಮಾಡುತ್ತದೆ ಮತ್ತು ತನ್ನದೇ ಆದ ರೀತಿಯಲ್ಲಿ ನಮ್ಮ ದೇಹದ ನರಮಂಡಲಗಳ ತೊಂದರೆಯನ್ನು ಕಡಿಮೆ ಮಾಡುತ್ತದೆ.ಮುಖ್ಯವಾಗಿ ನಮ್ಮ ದೇಹದಿಂದ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ.