Ad Widget .

ಬೇಸಿಗೆಯಲ್ಲಿ ಕರ್ಬೂಜ ಹಣ್ಣು ತಿನ್ನೋದು ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಗೊತ್ತಾ?

ಇಲ್ಲಿದೆ ಸಂಪೂರ್ಣ ಮಾಹಿತಿ

Ad Widget . Ad Widget .

ಸಮಗ್ರ ನ್ಯೂಸ್:ಕಲ್ಲಂಗಡಿ ಹಣ್ಣಿನಂತೆಯೇ ಕರ್ಬೂಜವೂ 90% ಕ್ಕೂ ಹೆಚ್ಚು ನೀರಿನಂಶವನ್ನು ಹೊಂದಿರುವ ಫಲವಾಗಿದೆ. ದೇಹದಲ್ಲಿ ನೀರಿನ ಅಂಶ ಉತ್ತಮವಾಗಿದ್ದಾಗ ತಾಪಮಾನವನ್ನು ನಿಯಂತ್ರಿಸಲು, ಜೀರ್ಣಕ್ರಿಯೆ ಉತ್ತಮಗೊಳಿಸಲು ಹಾಗೂ ಪೋಷಕಾಂಶಗಳನ್ನು ದೇಹದ ಎಲ್ಲಾ ಭಾಗಗಳಿಗೆ ಸಾಗಿಸಲು ಸಾಧ್ಯವಾಗುತ್ತದೆ.

Ad Widget . Ad Widget .

ಕರ್ಬೂಜದಲ್ಲಿ ವಿವಿಧ ಅವಶ್ಯಕ ವಿಟಮಿನ್ನುಗಳು, ಖನಿಜಗಳು ಹಾಗೂ ವಿಟಮಿನ್ ಸಿ, ಪೊಟ್ಯಾಶಿಯಂ ಹಾಗೂ ಬಿ-ವಿಟಮಿನ್ನುಗಳು ಸಮೃದ್ಧವಾಗಿವೆ. ವಿಟಮಿನ್ ಸಿ ನಮ್ಮ ದೇಹದ ಅಂಗಾಂಶಗಳ ದುರಸ್ತಿಗಾಗಿ ಅವಶ್ಯವಾಗಿದೆ. ಅಲ್ಲದೇ ಇದು ಆಂಟಿ ಆಕ್ಸಿಡೆಂಟ್‌ನಂತೆಯೂ ಕಾರ್ಯನಿರ್ವಹಿಸುತ್ತದೆ ಹಾಗೂ ರೋಗ ನಿರೋಧಕ ಶಕ್ತಿಗೆ ನೆರವನ್ನು ನೀಡುತ್ತದೆ.

ಪೊಟ್ಯಾಶಿಸಿಯಮ್ ಆರೋಗ್ಯಕರ ರಕ್ತದೊತ್ತಡವನ್ನು ಕಾಪಾಡಿಕೊಳ್ಳಲು ನೆರವಾಗುತ್ತದೆ ಮತ್ತು ಹೃದಂ ಸ್ನಾಯುಗಳು ಸರಿಯಾಗಿ ಕಾರ್ಯ ನಿರ್ವಹಿಸುವುದನ್ನು ಖಚಿತಪಡಿಸುತ್ತದೆ.ಕರ್ಬೂಜದಲ್ಲಿ ಕರಗುವ ನಾರಿನಂಶ ಉತ್ತಮವಾಗಿದೆ ಹಾಗೂ ಇವು ಜಠರ ಮತ್ತು ಕರುಳುಗಳಲ್ಲಿ ಆಹಾರ ಸುಗಮವಾಗಿ ಚಲಿಸಲು ನೆರವಾಗುತ್ತವೆ.

ಆಹಾರದಲ್ಲಿ ಸಾಕಷ್ಟು ನಾರಿನಂಶ ಇರುವುದು ಜೀರ್ಣಾಂಗಗಳ ಆರೋಗ್ಯಕ್ಕೆ ಅಗತ್ಯವಾಗಿದೆ.ಕರಬೂಜದಲ್ಲಿರುವ ಆಂಟಿ ಆಕ್ಸಿಡೆಂಟುಗಳು ತ್ವಚೆಯನ್ನು ಫ್ರೀ ರ್ಯಾಡಿಕಲ್ ಎಂಬ ಕ್ಯಾನ್ಸರ್‌ಕಾರಕ ಕಣಗಳ ಧಾಳಿಯಿಂದ ರಕ್ಷಿಸುತ್ತವೆ ಹಾಗೂ ವೃದ್ದಾಪ್ಯದ ಲಕ್ಷಣಗಳು ಕಾಣಿಸಿಕೊಳ್ಳುವುದನ್ನು ತಡವಾಗಿಸುತ್ತವೆ.

Leave a Comment

Your email address will not be published. Required fields are marked *