Ad Widget .

ಬಿಗ್ ಬಾಸ್ ಮನೆಯಲ್ಲಿ ಎಮರ್ಜೆನ್ಸಿ ಸೈರನ್|ಬದಲಾಯಿತು ಸ್ವರ್ಗ- ನರಕ ಆಟದ ಶೈಲಿ

ಸಮಗ್ರ ನ್ಯೂಸ್: ಬಿಗ್ ಬಾಸ್ ಮನೆಯಲ್ಲಿ ಇದೀಗ ಎಮರ್ಜೆನ್ಸಿ ಸೈರನ್ ಮೊಳಗಿದೆ. ಈ ಸೈರನ್ ಗೆ ಒಂದು ಕ್ಷಣಕ್ಕೆ ಎಲ್ಲಾ ಸ್ಪರ್ಧಿಗಳು ಬೆಚ್ಚಿಬಿದ್ದಿದ್ದು, ಮನೆಯಲ್ಲಿ ಏನಾಗ್ತಿದೆ ಅನ್ನೋ ಆತಂಕದಿಂದ ಕಿರುಚಾಡಿದ್ದಾರೆ. ಹೌದು, ಇಂದು ಬೆಳ್ಳಂಬೆಳಗ್ಗೆ ಪ್ರೊಮೋ ಬಿಟ್ಟಿದ್ದು ಈ
ಮೂಲಕ ಬಿಗ್ಬಾಸ್ ವೀಕ್ಷಕರ ಕುತೂಹಲವನ್ನು ಹೆಚ್ಚಿಸಿದ್ದಾರೆ.

Ad Widget . Ad Widget .

ಪ್ರೋಮೊದಲ್ಲೇನಿದೆ..?

Ad Widget . Ad Widget .

ಬಿಗ್ಬಾಸ್ ಮನೆಯಲ್ಲಿ ಸೈರನ್ ಆಗಿದೆ. ಇದರಿಂದ ಸ್ಪರ್ಧಿಗಳು ಬೆಚ್ಚಿ ಬಿದ್ದು ಓಡಿ ಬಂದು ಎಲ್ಲರೂ ಒಟ್ಟಾಗಿ ನಿಂತಿದ್ದಾರೆ. ಕ್ರೇನ್ನಿಂದ ಏನೋ ತೆಗಿತಾ ಇದ್ದಾರೆ, ಏಯ್ ಯಾರು? ಏನಿದು’ ಅಂತಾ ಆತಂಕದಿಂದ ಮಾತನಾಡಿಕೊಂಡಿದ್ದಾರೆ. ಅಷ್ಟರಲ್ಲೇ ಬಿಗ್ಬಾಸ್ ಮನೆಗೆ ಎಂಟ್ರಿಯಾಗಿರುವ ಮುಸುಕುಧಾರಿಗಳು ಮನೆಯಲ್ಲಿದ್ದ ಕೆಲವು ವಸ್ತುಗಳನ್ನು ಹಾನಿ ಮಾಡಿದ್ದಾರೆ. ನಂತರ ಸ್ವರ್ಗ-ನರಕ ಎಂದು ವಿಭಾಗ ಮಾಡಿದ್ದ ಗೇಟ್ಗಳನ್ನು ಬೇಧಿಸಿದ್ದಾರೆ. ನಂತರ ಬಿಗ್ಬಾಸ್ನ ಧ್ವನಿ ಮೊಳಗಿದೆ. 11ನೇ ವೇದಿಕೆಯಲ್ಲಿ ನೀವೆಲ್ಲರೂ ಎರಡು ವಾರ ಜೀವಿಸಿದ್ದೀರಿ. ಇಲ್ಲಿನ ಪ್ರತಿ ಕ್ಷಣವನ್ನೂ ಅನುಭವಿಸಿದ್ದೀರಿ ಎಂಬ ಧ್ವನಿ ಬಂದು ಹೋಗಿದೆ. ಸ್ವರ್ಗ-ನರಕ ಇಂದಿಗೆ ಕೊನೆಗೊಂಡಿದೆ ಎಂದು ಎಲ್ಲರೂ ಮಾತನಾಡಿಕೊಳ್ತಿದ್ದಾರೆ.

Leave a Comment

Your email address will not be published. Required fields are marked *