Ad Widget .

ಬೆಳ್ಳಾರೆ: ಪ್ರಸಾದ್ ಟೆಕ್ಸ್ ಟೈಲ್ಸ್ ಮದುವೆ, ಹಬ್ಬಗಳ ಸಂಭ್ರಮಕ್ಕೆ ವಿಶೇಷ ರಿಯಾಯಿತಿ ಮಾರಾಟ

ಸಮಗ್ರ ನ್ಯೂಸ್: ಒಂದೇ ಸೂರಿನಡಿ ಖ್ಯಾತ ಕಂಪನಿಗಳ ಉತ್ಕೃಷ್ಟ ಗುಣಮಟ್ಟದ ಬೃಹತ್ ಮದುವೆ ಜವುಳಿ ಮಳಿಗೆಯೆಂದು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಪ್ರಸಿದ್ಧಿ ಪಡೆದಿರುವ, ಜವುಳಿ ಉದ್ಯಮದಲ್ಲಿ ಸದಾ ಹೊಸ ಸಂಗ್ರಹದ ಅನ್ವೇಷಣೆ ಮತ್ತು ಹೊಸತನ ಪರಿಚಯಿಸುತ್ತಾ ಬೆಳ್ಳಾರೆಯ ಹೃದಯ ಭಾಗದಲ್ಲಿರುವ ಪ್ರತಿಷ್ಟಿತ ಪ್ರಸಾದ್ ಟೆಕ್ಸ್ ಟೈಲ್ಸ್ ನಲ್ಲಿ ಮದುವೆ ಸಂಭ್ರಮ ಮತ್ತು ದಸರಾ, ದೀಪಾವಳಿ ಹಬ್ಬಗಳ ಪ್ರಯುಕ್ತ ಸಂತಸದ ಕ್ಷಣಗಳನ್ನು ಇನ್ನಷ್ಟು ಹೆಚ್ಚಿಸುವ ಸಲುವಾಗಿ 5 ರಿಂದ 10% ವಿಶೇಷ ರಿಯಾಯಿತಿ ಸೇಲ್ ಪ್ರಾರಂಭಗೊಂಡಿದೆ.

Ad Widget . Ad Widget .

1972 ರಲ್ಲಿ ಸ್ಥಾಪನೆಗೊಂಡ ಜವುಳಿ ಮಳಿಗೆ ಇಂದು ನೂತನ ಸುಸಜ್ಜಿತ ವಿಶಾಲವಾದ ಸ್ಥಳದೊಂದಿಗೆ ಕಳೆದ 52 ವರ್ಷಗಳಿಂದ ಉತ್ಕೃಷ್ಟ ಗುಣಮಟ್ಟದ ಸೇವೆಯನ್ನು ನೀಡುತ್ತ ಜನಮನ ಗೆದ್ದಿದೆ. ಪ್ರಸಾದ್ ಟೆಕ್ಸ್ ಟೈಲ್ಸ್ ಗೆ ಸುಳ್ಯ ತಾಲೂಕಿನ ಗ್ರಾಹಕರು ಮಾತ್ರವಲ್ಲದೆ, ಹೊರ ತಾಲೂಕಿನವರೂ ಇಲ್ಲಿಗೆ ಬಂದು ಮದುವೆ ಜವುಳಿ ಖರೀದಿಸುತ್ತಿರುವುದು ಇಲ್ಲಿನ ವೈಶಿಷ್ಟವಾಗಿದೆ.

Ad Widget . Ad Widget .

ಪ್ರಸಾದ್ ಟೆಕ್ಸ್ ಟೈಲ್ಸ್ ನಲ್ಲಿ ನಿಮ್ಮ ಆಕಾಂಕ್ಷೆಯ ಈಡೇರಿಕೆಗಾಗಿ ನೂತನ ಶೈಲಿಯ ಮದುವೆ ಸೀರೆಗಳು, ಫ್ಯಾನ್ಸಿ ಸೀರೆ ಮತ್ತು ಮಹಿಳೆಯರು ಇಷ್ಟಪಡುವ ಕಾಂಚಿ ಸೀರೆ, ಟಿಶ್ಯೂ ಸೀರೆ, ಸಾಪ್ಟ್ ಸಿಲ್ಕ್, ಕಾಟನ್ ಸೀರೆ, ಬಾರ್ಡರ್ ಸೀರೆ, ಹೊಚ್ಚ ಹೊಸ ಸಂಗ್ರಹವಿದ್ದು, ಆಧುನಿಕ ವಿನ್ಯಾಸದ ಗಾಗ್ರ, ಲೆಹೆಂಗಾ, ಗೌನ್, ಕ್ರೇಪ್ ಟಾಪ್, ಜೈಪುರ ಕಾಟನ್ ಸೆಟ್, ಜೀನ್ಸ್, ಕುರ್ತಾ ಟಾಪ್, ಪುರುಷರ ಎಲ್ಲಾ ಬಗೆಯ ವಿಖ್ಯಾತ ಬ್ರಾಂಡ್ ಗಳ ಶರ್ಟ್, ಟ್ರೌಸರ್ಸ್, ಶೇರ್ವಾನಿ, ಸೂಟ್, ದಿನಧಾರಣೆಯ ಟಿ-ಶರ್ಟ್, ಬರ್ಮುಡ, ಮಕ್ಕಳ ಬಟ್ಟೆಗಳು, ಗಂಡು ಮಕ್ಕಳ ಸೂಟ್, ಬಾಬಾಸೂಟ್, ಶರ್ಟ್, ಪ್ಯಾಂಟ್, ಕುರ್ತಾ ಸೆಟ್, ಪುರುಷರ, ಮಹಿಳೆಯರ ಮತ್ತು ಮಕ್ಕಳ ಸಿದ್ಧ ಉಡುಪುಗಳ ವೈವಿಧ್ಯಮಯ ಕಲೆಕ್ಷನ್ ಗಳು ಆಯ್ಕೆಗೆ ಲಭ್ಯವಿರುತ್ತದೆ. ಪ್ರಖ್ಯಾತ ಮಿಲ್ಲುಗಳ ಸೂಟಿಂಗ್ಸ್, ಶರ್ಟಿಂಗ್, ರಾಮರಾಜ್, ಉದಯಮ್, ರೇಮಂಡ್ಸ್, ಸಿಯಾರಾಮ್ಸ್, ಪೋಪಿ, ಸಿರಿ ಮೊದಲಾದ ಕಂಪನಿಗಳ ಅಧಿಕೃತ ಡೀಲರ್ ಆಗಿರುತ್ತಾರೆ. ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆಯೊಂದಿಗೆ ಉತ್ತಮ ಜನಮನ್ನಣೆ ಪಡೆದ ಸಂಸ್ಥೆಯಾಗಿದ್ದು, ಗ್ರಾಹಕರಿಗೆ ವಿಶೇಷ ಕೃತಜ್ಞತೆ ಸಲ್ಲಿಸುತ್ತಾ, ಸಂಸ್ಥೆಯ ಮಾಲಕ ಬಿ. ನರಸಿಂಹ ಜೋಶಿ ತಿಳಿಸಿರುತ್ತಾರೆ.

Leave a Comment

Your email address will not be published. Required fields are marked *