Ad Widget .

ವೈಟ್ ಬೋರ್ಡ್ ವಾಹನಗಳಿಗೆ ಬ್ರೇಕ್ ಹಾಕಲು ಮುಂದಾದ ಸಾರಿಗೆ ಇಲಾಖೆ

ಸಮಗ್ರ ನ್ಯೂಸ್:ನೀವೇನಾದರೂ ರೀಲ್ಸ್ ಮಾಡಿ ವೈಟ್ ಬೋರ್ಡ್ ಟ್ರಾವಲ್ಸ್ ಆ್ಯಪ್ ಗಳಿಗೆ ಪ್ರಮೋಷನ್ ಮಾಡ್ತೀರಾ. ಅನಧಿಕೃತ ಆಯಪ್‌ಗಳಿಗೆ ರೀಲ್ ಮಾಡುವ ವ್ಯಕ್ತಿಗಳ ವಿರುದ್ಧ ಸಾರಿಗೆ ಇಲಾಖೆ ಸಮರ ಸಾರಿದ್ದು, ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.ಅನಧಿಕೃತ ಆ್ಯಪ್ ಗಳಿಗೆ ಪ್ರಮೋಷನ್‌ಗಾಗಿ ರೀಲ್ಸ್ ಮಾಡುವ ವ್ಯಕ್ತಿಗಳ ಮೇಲೆ ಹದ್ದಿನ ಕಣ್ಣಿಡಲಾಗುತ್ತಿದೆ.

Ad Widget . Ad Widget .

ಬೆಂಗಳೂರು, ಅ.09 ಈ ಸರ್ಕಾರದ ಬೊಕ್ಕಸಕ್ಕೆ ವೈಟ್ ಭಾರೀ ನಷ್ಟ ಉಂಟು ಮಾಡ್ತಿದ್ದಾರೆ. ಅನುಮತಿ ತೆಗೆದುಕೊಂಡಿದ್ದು ವೈಟ್ ಬೋರ್ಡ್ ಗೆ ಆದ್ರೆ ಬಳಕೆ ಮಾಡ್ತಿರೊದು ಮಾತ್ರ ವಾಣಿಜ್ಯಕ್ಕೆ. ಹೀಗಾಗಿ ಯೆಲೋ ಬೋರ್ಡ್ ಚಾಲಕರು ಸಾರಿಗೆ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

Ad Widget . Ad Widget .

ನಿಯಮದ ಪ್ರಕಾರ ವೈಟ್ ಬೋರ್ಡ್ ವಾಹನಗಳನ್ನು ವಾಣಿಜ್ಯ ಬಳಕೆಗೆ ಬಳಸುವಂತಿಲ್ಲ. ಆದರೂ ಬೆಂಗಳೂರಿನಲ್ಲಿ ಎಗ್ಗಿಲ್ಲದೆ ಟ್ರಾನ್ಸ್ ಪೋರ್ಟ್ ರೂಲ್ಸ್ ಉಲ್ಲಂಘನೆ ಆಗ್ತಿದೆ. ಈ ಬಗ್ಗೆ ಸಾಲು ಸಾಲು ದೂರು ಬಂದಿದ್ದು ಇದೀಗ ಇಲಾಖೆ ಆರ್ಲಟ್ ಆಗಿದೆ.

ಹಲವು ಆ್ಯಪ್ ಮೂಲಕ ವೈಟ್ ಬೋರ್ಡ್ ವಾಹನವನ್ನು ವಾಣಿಜ್ಯ ಬಳಕೆಗೆ ಬುಕಿಂಗ್ ಆಗ್ತಿದೆ. ಕೆಲ ಆಪ್ ಗಳನ್ನ ನಿಷೇಧ ಮಾಡಿದ್ರು ಸಹ ಅನಧಿಕೃತವಾಗಿ ರನ್ ಆಗ್ತಿದ್ದು, ರೀಲ್ ಮುಖಾಂತರ ಪ್ರಮೋಷನ್ ಸಹ ವೈಟ್ ಬೋರ್ಡ್ ಮಾಲೀಕರು ಮಾಡಿಸುತ್ತಿದ್ದಾರೆ.

ರೀಲ್ ಮಾಡುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಜೊತೆಗೆ ವಾಹನದ ಆರ್ ಸಿ, ಡಿಎಲ್ ರದ್ದು ಮಾಡುವ ಎಚ್ಚರಿಕೆ ನೀಡಿದ್ದಾರೆ.ಒಟ್ನಲ್ಲಿ ಸಾರಿಗೆ ಅಧಿಕಾರಿಗಳು ಸುಮ್ಮನೆ ಹೇಳಿಕೆಗೆ ಮಾತ್ರ ಕಾರ್ಯಾಚರಣೆ ಅಂತ ಆಗಬಾರದು, ಸರ್ಕಾರಕ್ಕೆ ನಷ್ಟ ಉಂಟು ಮಾಡ್ತಿರುವ ವೈಟ್ ಬೋರ್ಡ್ ಮಾಲೀಕರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಬೇಕಾಗಿದೆ.

Leave a Comment

Your email address will not be published. Required fields are marked *