Ad Widget .

ಮುಲ್ತಾಜ್ ಅಲಿ ಆತ್ಮಹತ್ಯೆ ಪ್ರಕರಣ : A1 ಆರೋಪಿ ಆಯಿಷಾ ಅರೆಸ್ಟ್

ಸಮಗ್ರ ನ್ಯೂಸ್: ಮಾಜಿ ಶಾಸಕ ಮೊಯಿದ್ದೀನ್ ಬಾವ ಅವರ ಸೋದರ ಮುಲ್ತಾಜ್ ಅಲಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಸೇರಿ ಆರು ಮಂದಿಯ ವಿರುದ್ಧ ಕಾವೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆ‌ರ್ ದಾಖಲಾಗಿತ್ತು.ಇದೀಗ ಈ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಎ ಒನ್ ಆರೋಪಿ ಆಗಿರುವ ರೆಹಮದ್ ಅಲಿಯಾಸ್ ಆಯೀಷಳನ್ನು ಪೊಲೀಸರು ಬಂಧಿಸಿದ್ದಾರೆ.

Ad Widget . Ad Widget .

ರೆಹಮತ್, ಅಬ್ದುಲ್ ಸತ್ತಾರ್, ಶಾಫಿ, ಮುಸ್ತಫಾ, ಶೋಯೆಬ್‌ ಹಾಗೂ ಸಿರಾಜ್ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಘಟನೆ ಬಳಿಕ ಎ ಒನ್ ಆರೋಪಿಯಾಗಿರುವ ಆಯೀಷಾ ಮೊಬೈಲ್‌ ಸ್ವಿಚ್ ಆಫ್ ಮಾಡಿಕೊಂಡು ಕೇರಳಕ್ಕೆ ಪರಾರಿಯಾಗಿದ್ದಳು. ಇದೀಗ ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ.

Ad Widget . Ad Widget .

ರಹಮತ್ ಅಲಿಯಾಸ್ ಆಯೀಷಾ ಎಂಬ ಮಹಿಳೆಯಿಂದ ಬ್ಲಾಕ್ ಮೇಲ್ ಮಾಡಲಾಗಿತ್ತು. ಇದಕ್ಕೆ ಆಕೆಯ ಪತಿ ಕೂಡ ಬ್ಲಾಕ್ ಮೇಲ್ ಮಾಡಲು ಸಹಕರಿಸಿದ್ದಾನೆ.ಆಯೀಷಾ ಪತಿ ಶೋಯೆಬ್ ಎಂಬಾತ A5 ಆರೋಪಿ ಆಗಿದ್ದಾನೆ. ಆಯೇಷಾಳ ಮಗುವಿನ ಜೊತೆಗೆ ಮುಲ್ತಾಜ್ ಅಲಿ ಆಟ ಆಡುತ್ತಿರುವ ವಿಡಿಯೋವನ್ನು ಆಯೀಷಾ ವಾಟ್ಸಪ್ ಸ್ಟೇಟಸ್ ಹಾಕಿದ್ದಳು. ಇದರಿಂದ ಮಲ್ತಾಜ್ ಅಲಿ ಮನೆಯಲ್ಲಿ ರಾತ್ರಿಯವರೆಗೂ ಗಲಾಟೆ ನಡೆದಿತ್ತು ಎನ್ನಲಾಗಿದೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಮುಮ್ರಾಜ್ ಅಲಿ ಆತ್ಮಹತ್ಯೆಗೆ ಸಂಬಂಧಪಟ್ಟ ಆರೋಪಿಗಳು ದೇಶ ಬಿಟ್ಟು ಹೋಗದಂತೆ ಎಲ್ ಓ ಸಿ ಜಾರಿ ಮಾಡಿದ್ದೇವೆ.ಹನಿಟ್ರ್ಯಾಪ್ ಮಾಡಿ ಹಣಕ್ಕಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ ಸೆಕ್ಸ್ ವೀಡಿಯೊ ಆಧಾರದಲ್ಲಿ ಮುಲ್ತಾಜ್ ಗೆ ಬೆದರಿಕೆ ಹಾಕಿದ ಬಗ್ಗೆ ದೂರು ಸಲ್ಲಿಕೆಯಾಗಿದೆ.

Leave a Comment

Your email address will not be published. Required fields are marked *