ಸಮಗ್ರ ನ್ಯೂಸ್: ಕೊಟ್ಟಿಗೆಹಾರ ಸಮೀಪದ ದೇವನಗುಲ್ ಗ್ರಾಮದಲ್ಲಿ ಮನೆ ಸಮೀಪವೇ ಕಾಡಾನೆ ಬಂದು ದಾಂದಲೆ ನಡೆಸಿರುವ ಘಟನೆ ಮಂಗಳವರ ರಾತ್ರಿ ನಡೆದಿದೆ.

ದೇವನಗುಳಗ್ರಾಮದ ಬೆಳ್ಳಾಚಾರ್ ಮನೆಯ ಸುತ್ತಮುತ್ತ ಇದ್ದ ಬಾಳೆ ತೆಂಗು ಅಡಿಕೆ ಮರಗಳನ್ನು ನಾಶ ಮಾಡಿದೆ ಕೊಟ್ಟಿಗೆ ಹಾರ ಸುತ್ತಮುತ್ತ ಒಂದೆಡೆ ಅತಿಯಾದ ಮಳೆಗೆ ಕಾಫಿ ಮೆಣಸು ಮೊದಲಾದ ಬೆಳೆಗಳು ನೆಲಕಚ್ಚಿದರೆ ಇನ್ನೊಂದೆಡೆ ಕಾಡಾನೆ ಕಾಟಕ್ಕೆ ಜನರು ಬೇಸತ್ತು ಹೋಗಿದ್ದಾರೆ ಕಾಡಿನಲ್ಲಿ ಆನೆಗಳಿಗೆ ಆಹಾರದ ಕೊರತೆ ಇರುವುದರಿಂದ ಊರಿನತ್ತ ಮುಖ ಮಾಡಿದೆ ಅರಣ್ಯ ಇಲಾಖೆ ಶಾಶ್ವತ ಪರಿಹಾರ ಒದಗಿಸಬೇಕೆಂದು ಬೆಳ್ಳಾಚಾರ್ ಆಗ್ರಹಿಸಿದ್ದಾರೆ