Ad Widget .

ಹಣಕ್ಕಾಗಿ ಬ್ಲ್ಯಾಕ್ ಮೇಲ್| ಪವರ್ ಟಿವಿ ವಾಹಿನಿ ಮುಖ್ಯಸ್ಥ ರಾಕೇಶ್ ಶೆಟ್ಟಿ ಹಾಗೂ ಮಹಿಳೆ ವಿರುದ್ಧ ಶಾಸಕ‌ ವಿನಯ್ ಕುಲಕರ್ಣಿ ದೂರು

ಸಮಗ್ರ ನ್ಯೂಸ್: ‘ನನ್ನ ವಿರುದ್ಧ ಮಹಿಳೆಯೊಬ್ಬರು ಕಿರುಕುಳ ಆರೋಪ ಹೊರಿಸಿದ್ದಾರೆ ಮತ್ತು ಖಾಸಗಿ ಸುದ್ದಿ ವಾಹಿನಿಯ ಮುಖ್ಯಸ್ಥರೊಬ್ಬರು 2 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದಾರೆʼ, ಎಂದು ಮಾಜಿ ಸಚಿವ, ಹಾಲಿ ಶಾಸಕ ವಿನಯ್ ಕುಲಕರ್ಣಿ ಇಲ್ಲಿನ ಸಂಜಯನಗರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.

Ad Widget . Ad Widget .

ಈ ಬೆಳವಣಿಗೆಗಳ ಮಧ್ಯೆ ಆ ಮಹಿಳೆಯು ಮಂಗಳವಾರ ಪ್ರತಿ ದೂರು ನೀಡಿದ್ದು, ಎಫ್‍ಐಆರ್ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ. ‘2022ರಲ್ಲಿ ಹಾವೇರಿ ಜಿಲ್ಲೆಯ ರೈತ ಹೋರಾಟಗಾರ್ತಿಯೊಬ್ಬರು ಎಂದು ಹೇಳಿಕೊಂಡು ಕರೆ ಮಾಡಿ ಮಾತನಾಡಿದ್ದರು. ಇದೀಗ ಅವರು ತನಗೆ ವಂಚನೆ ಮಾಡಲಾಗಿದೆ. ನೀವು ಮಾತನಾಡಿರುವ ವಿಡಿಯೊ ಕಾಲ್, ಮೊಬೈಲ್ ಸಂಭಾಷಣೆ ಪ್ರಸಾರ ಮಾಡಲಾಗುವುದು ಎಂದು ಷಂಡ್ಯಂತ್ರ ರೂಪಿಸಿದ್ದರು’ ಎಂದು ವಿನಯ್ ಕುಲಕರ್ಣಿ ದೂರಿದ್ದಾರೆ.

Ad Widget . Ad Widget .

‘ಈ ಸಂಬಂಧ ಸೆ.24ರಂದು ಖಾಸಗಿ ಸುದ್ದಿ ವಾಹಿನಿ ಪವರ್ ಟಿವಿಯ ಮುಖ್ಯಸ್ಥ ಕರೆ ಮಾಡಿ 2 ಕೋಟಿ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು. ಹಣ ನೀಡಲಿಲ್ಲ ಎಂದರೆ ‘ಕಾಂಗ್ರೆಸ್ ಶಾಸಕನ ಅತ್ಯಾಚಾರ ಪ್ರಕರಣ’ ಎಂದು ಪ್ರೊಮೋ ಕಳುಹಿಸಿದ್ದರು. ಕಲ್ಪಿತ ಸುದ್ದಿ ಪ್ರಸಾರ ಮಾಡದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ಹೇರಿತು. ಆ ಹಿನ್ನೆಲೆಯಲ್ಲಿ ನಾನು ನೀಡಿದ್ದ ದೂರನ್ನು ಆಧರಿಸಿ ಕಲಂ 157 ಸಿಆರ್‍ಪಿ(ಎ) ಮತ್ತು (ಬಿ), 176 ಬಿಎನ್‍ಎಸ್ ಕಾಯ್ದೆಡಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *