Ad Widget .

ಕಡಬ: 5 ಜನರ ಮೇಲಿನ ರೌಡಿ ಶೀಟರ್ ಹೈಕೋರ್ಟ್ ನಲ್ಲಿ ರದ್ದು

ಸಮಗ್ರ ನ್ಯೂಸ್: ಕಡಬ ತಾಲೂಕಿನ 5 ಜನರ ಮೇಲೆ ಆಗಿನ ಕಡಬ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ರವರು ಸೆಕ್ಷನ್ 143,147,323,326,307,395 ಹಾಗೂ 149 IPC ಅಡಿಯಲ್ಲಿ ಕ್ಷುಲ್ಲಕ ಕಾರಣಗಳಿಗೆ ದೊಂಬಿ, ಗಲಾಟೆಗಳನ್ನು ಮಾಡುತ್ತಾ ಸಾರ್ವಜನಿಕ ಅಶಾಂತಿಯನ್ನು ಉಂಟು ಮಾಡುವ ಸಲುವಾಗಿ 2017 ರಲ್ಲಿ ರೌಡಿ ಶೀಟರ್ ದಾಖಲಿಸಿರುವುದು ಹೈಕೋರ್ಟ್ ನಲ್ಲಿ ರದ್ದುಗೊಂಡಿದೆ.

Ad Widget . Ad Widget .

ತಮ್ಮ ಮೇಲಿನ ರೌಡಿ ಶೀಟರ್ ಅನ್ನು ರದ್ದುಗೊಳಿಸುವಂತೆ ಕೋರಿ ಮಾನ್ಯ ಉಚ್ಚನ್ಯಾಯಾಲಯದ ಮೊರೆ ಹೋಗಿದ್ದ ಆರೋಪಿಗಳವಾದವನ್ನು ಆಲಿಸಿದ ಉಚ್ಚನ್ಯಾಯಾಲಯದ ನ್ಯಾಯಮೂರ್ತಿ ಹೇಮಂತ್ ಚಂದನ್ ಗೌಡರ್ ಅವರಿದ್ದ ಏಕ ಸದಸ್ಯ ಪೀಠ ಅರ್ಜಿ ಯನ್ನು ಪುರಸ್ಕರಿಸಿ ಆರೋಪಿಗಳ ಮೇಲಿನ ರೌಡಿ ಶೀಟರ್ ಅನ್ನು ರದ್ದುಗೊಳಿಸಿ ಆದೇಶ ನೀಡಿದರು.

Ad Widget . Ad Widget .

ಆರೋಪಿಗಳ ಪರವಾಗಿ ಕರ್ನಾಟಕ ಉಚ್ಚನ್ಯಾಯಾಲಯದ ನ್ಯಾಯವಾದಿಗಳಾದ ಪಿ. ಕರುಣಾಕರ್ ಪಾಂಬೆಲ್, ಪ್ರದೀಪ್ ಬೊಳ್ಳೂರು , ಶ್ರೀಕಾಂತ್ ಆಚಳ್ಳಿ ಗುತ್ತಿಗಾರು, ಹಾಗೂ ಆದರ್ಶ ಗೌಡ ಕಟ್ಟ ಇವರುಗಳು ವಾದಿಸಿರುತ್ತಾರೆ.

Leave a Comment

Your email address will not be published. Required fields are marked *