ಚಿಕ್ಕಮಗಳೂರು: ಪ್ರವಾಸಿಗರನ್ನು ಕರೆತಂದಿದ್ದ ಬೆಂಗಳೂರು ಮೂಲದ ಚಾಲಕ ಹೃದಯಾಘಾತದಿಂದ ಮೃತ್ಯು

ಸಮಗ್ರ ನ್ಯೂಸ್: ಚಿಕ್ಕಮಗಳೂರು ಜಿಲ್ಲೆಯ ಹೋಮ್ ಸ್ಟೇವೊಂದಕ್ಕೆ ಬೆಂಗಳೂರಿನ ಪ್ರವಾಸಿಗರನ್ನು ಕರೆ ತಂದಿದ್ದ ಟಿಟಿ ವಾಹನದ ಚಾಲಕ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಅ.06 ರಂದು ವರದಿಯಾಗಿದೆ.

Ad Widget ... ..

ಬೆಂಗಳೂರಿನ ಸೋಮನಹಳ್ಳಿ ನಿವಾಸಿಯಾಗಿರುವ ಅವಿನಾಶ್(25) ರವರು ಅ.06 ರಂದು ಬೆಳಗ್ಗೆ ಬೆಂಗಳೂರಿನ ಪ್ರವಾಸಿಗರನ್ನು ಚಿಕ್ಕಮಗಳೂರಿಗೆ ಟಿಟಿ ವಾಹನದಲ್ಲಿ ಕರೆ ತಂದಿದ್ದಾನೆ.ಪ್ರವಾಸಿಗರನ್ನು ನಗರ ಸಮೀಪದ ಹೋಮ್ ಸ್ಟೇವೊಂದಕ್ಕೆ ಬಿಟ್ಟಿದ್ದು, ಕೆಲವೇ ಹೊತ್ತಿನಲ್ಲಿ ಚಾಲಕ ಹೃದಯಾಘಾತಕ್ಕೊಳಗಾಗಿದ್ದಾನೆ.

Ad Widget

ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆಂದು ತಿಳಿದು ಬಂದಿದೆ. ಘಟನೆ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *