Ad Widget .

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಇದು ಅಕ್ಟೋಬರ್ ತಿಂಗಳ ಎರಡನೇ ವಾರ. 06 ರಿಂದ 12 ರವರೆಗೆ ಇರಲಿದೆ. ಶುಕ್ರನು ಈ ವಾರದಲ್ಲಿ ಸ್ವಕ್ಷೇತ್ರ ಹಾಗೂ ಬುಧನು ಶುಕ್ರನ ಜೊತೆ ಯೋಗವನ್ನು ಪಡೆಯುವ ಕಾರಣ ಒಳ್ಳೆಯ ಯೋಗವಿದೆ. ಇದೇ ಸಂದರ್ಭದಲ್ಲಿ ನವರಾತ್ರವೂ ಬಂದಿರುವ ಕಾರಣ ಮಹಾಕಾಳಿ, ಮಹಾಲಕ್ಷ್ಮಿ, ‌ಮಹಾಸರಸ್ವತಿಯರನ್ನೂ ಶ್ರದ್ಧಾ ಭಕ್ತಿಯಿಂದ ಆರಾಧಿಸಿದರೆ ಚಿಂತಿತ ಕಾಮನೆಯನ್ನು ಪೂರೈಸುತ್ತಾರೆ. ಒಳ್ಳೆಯ ಮನಸ್ಸಿನಿಂದ ಒಳ್ಳೆಯದನ್ನು ಕೇಳಿಕೊಂಡು, ಒಳ್ಳೆಯ ರೀತಿಯಿಂದ‌ ಬಾಳಿರಿ.

Ad Widget . Ad Widget .

ಮೇಷ ರಾಶಿ : ಮೊದಲ ರಾಶಿಯವರಿಗೆ ಬುಧನ ಸಂಚಾರದಿಂದ ಬಂಧುಗಳ ನಡುವೆ ಉತ್ತಮ‌ ಬಾಂಧವ್ಯ ಬರುವುದು. ಸಂಗಾತಿಯ ಮಾತುಗಳನ್ನು ಕೇಳುವಿರಿ. ವಾದಗಳಲ್ಲಿ ಜಯವನ್ನು ಸಾಧಿಸುವಿರಿ. ತಂದೆಯ ವಿಚಾರದಲ್ಲಿ ಸ್ವಲ್ಪ ಅಸಮಾಧಾನವಿರುವುದು. ವಿವಾಹಕ್ಕೆ ಒಪ್ಪಿಕೊಂಡು ಮುನ್ನಡೆಯುವುದು ಸೂಕ್ತ.‌ ಕಾಲ ಕಳೆದಮೇಲೆ ಕಷ್ಟವಾಗುವುದು.‌ ಶುಭ ಕಾಲವನ್ನು ಸದುಪಯೋಗ ಮಾಡಿಕೊಳ್ಳಿ. ವಿವಿಧ ರೀತಿಯಲ್ಲಿ ದೇವಿಯ ಸೇವೆಯನ್ನು ಮಾಡಿ.

Ad Widget . Ad Widget .

ವೃಷಭ ರಾಶಿ : ಎರಡನೇ ರಾಶಿಯವರಿಗೆ ಬುಧನ ಸಂಚಾರದಿಂದ ಕಷ್ಟ. ಷಷ್ಠದಲ್ಲಿ ಬುಧನಿರುವ ಕಾರಣ ಬಂಧುಗಳಿಂದಲೇ ನಿಮಗೆ ಕಿರಿಕಿರಿ ಆಗುವುದು. ನಿಮ್ಮ ಮಾತು ಸರಿಯಾಗಿ ಅರ್ಥವಾಗುವಂತೆ ಇರಲಿ. ಮಧುರವಾದ ಮಾತುಗಳು ನಿಮ್ಮ ಪ್ರಯೋಜನಕ್ಕೆ ಬಾರದು. ನಿಮ್ಮ ಸಂತೋಷವನ್ನು ಸಂಭ್ರಮಿಸಲು ಅವಕಾಶವು ಇರದು. ಈ ವಾರ ಯಾವುದನ್ನೂ ಅತಿರೇಕ ಮಾಡಿಕೊಳ್ಳದೇ ಶಾಂತರೀತಿಯಿಂದ ವರ್ತಿಸಿ. ನಿಮ್ಮ‌ ಸುರಕ್ಷತೆಯ ಬಗ್ಗೆ ಗಮನವಿರಲಿ. ವಾರವಿಡೀ ದುರ್ಗತಿಪರಿಹಾರಿಣಿಯನ್ನು ಆರಾಧಿಸಿ.

ಮಿಥುನ ರಾಶಿ : ರಾಶಿ ಚಕ್ರದ ಮೂರನೇ ರಾಶಿಯವರಿಗೆ ಎರಡನೇ ವಾರದಲ್ಲಿ ಬುಧನ ಸಂಚಾರದಿಂದ ಸಕಾರತ್ಮಕ‌ ಬದಲಾವಣೆ ಆಗಲಿದೆ. ಶುಕ್ರನ ಜೊತೆ ಬುಧನ ಯೋಗವು ಮಕ್ಕಳ‌ ವಿಚಾರದಲ್ಲಿ ವಿದ್ಯಾಭ್ಯಾಸದ ವಿಷಯಕ್ಕೆ ಪೂರಕ ವಾತಾವರಣ ಇರಲಿದೆ. ನಿಮಗೆ ಮುಂಗೋಪವು ಹೆಚ್ಚಾಗಲಿದ್ದು, ಇದು ನಿಮ್ಮ‌ ಬೆಳವಣಿಗೆಗೆ ಮಾರಕವಾಗಲಿದೆ. ನಿರಾಶೆಯನ್ನು ಇಟ್ಟುಕೊಳ್ಳದೇ ಎಲ್ಲವನ್ನೂ ಶುಭದಂತೆ ಸ್ವೀಕರಿಸಿ. ದುರ್ಬಲನಾದ ಗುರುವು ನಿಮಗೆ ಮುಂದೆ ಶುಭವನ್ನೇ ಕೊಡುವನು. ಸಮಯವನ್ನು ಮಾಡಿಕೊಂಡು ಜಗನ್ಮಾತೆಯನ್ನು ದಿನದಲ್ಲಿ ಸ್ವಲ್ಪ ಸಮಯ ಆರಾಧಿಸಿ.

ಕರ್ಕಾಟಕ ರಾಶಿ : ಇದು ಅಕ್ಟೋಬರ್ ತಿಂಗಳ ಎರಡನೇ ವಾರವಾಗಿದ್ದು ಈ ರಾಶಿಯವರಿಗೆ ಬುಧನ ಸಂಚಾರದಿಂದ ಅನುಕೂಲತೆಗಳು ಇರಲಿವೆ. ಚತುರ್ಥ ಸ್ಥಾನಕ್ಕೆ ಬುಧನ ಪ್ರವೇಶವಾಗಿವ ಕಾರಣ ತಾಯಿಯ ಬಗೆಗೆ ಹೆಚ್ಚು ಪ್ರೀತಿ ಬರುವುದು. ಸುಖವನ್ನು ಬಂಧುಗಳಿಂದ ಪಡೆಯುವಿರಿ. ಈ ವಾರ ನೀವು ಮಹತ್ತ್ವದ ಉದ್ದೇಶಕ್ಕಾಗಿ ವಿದೇಶ ಪ್ರಯಾಣವನ್ನು ಮಾಡುವಿರಿ. ಹಿರಿಯರ ಬಗ್ಗೆ ನಿಮಗೆ ಯಾವುದೇ ಗೌರವ ಇರದು. ಕುಲದೇವರಾದ ದುರ್ಗಾಮಾತೆಯನ್ನು ಪೂಜಿಸಿ.

ಸಿಂಹ ರಾಶಿ : ರಾಶಿ ಚಕ್ರದ ಐದನೇ ರಾಶಿಯವರಿಗೆ ಈ ವಾರ ಬುಧನ ಸಂಚಾರದಿಂದ ಕೆಲವು ವ್ಯತ್ಯಯಗಳಾಗುವುದು. ತೃತೀಯ ಸ್ಥಾನಕ್ಕೆ ಹೋಗುವುದು ಸಹೋದರ ಕಲಹವು ತಪ್ಪುವುದು. ನಿಮ್ಮ ಪ್ರಭಾವವನ್ನು ಕಡಿಮೆ ಅಂದಾಜಿಸಬೇಡ. ನಿಮ್ಮ ಬಳಿ ಯಶಸ್ಸಿಗೆ ಬೇಕಾದ ಎಲ್ಲ ಸಾಧನಗಳು ಇರಲಿವೆ. ಹೊಸ ವ್ಯವಹಾರಗಳಲ್ಲಿ ನಿಮ್ಮದು ಪ್ರಮುಖ ಪಾತ್ರವಿರುತ್ತದೆ. ನಿಮ್ಮ ಪ್ರತಿಭೆಗೆ ಸೂಕ್ತ ಸ್ಥಾನ ಸಿಗುವುದು. ಕಳೆದುಕೊಂಡಿದ್ದನ್ನು ಮರಳಿ‌ಪಡೆಯುವ ಅವಕಾಶವಿದೆ. ತಪ್ಪಿಗೆ ನೀವು ದುರ್ಗಾಮಾತೆಯಲ್ಲಿಯೇ ಶರಣಾಗಿ.

ಕನ್ಯಾ ರಾಶಿ : ಇದು ರಾಶಿ ಚಕ್ರದ ಆರನೇ ರಾಶಿಯಾಗಿದ್ದು ಈ ತಿಂಗಳ ಎರಡನೇ ವಾರದಲ್ಲಿ ಬುಧನ ಸಂಚಾರದಿಂದ ಮತ್ತೊಂದು ರೀತಿಯಲ್ಲಿ ಲಾಭವಿದೆ. ಕೌಟುಂಬಿಕ ಕಲಹಗಳನ್ನು ಸರಿಮಾಡುವ ಯೋಚನೆ ಬರುವುದು. ಈ ವಾರ ನಿಮ್ಮ ಮಾತು ಬಹಳ ಮನೋಹರವಾಗಿ ಇರಲಿದೆ. ವಿವಾಹ ಸಂಬಂಧವಾದ ಬಹಳ ಜಾಗರೂಕತೆಯಿಂದ ನಿರ್ವಹಿಸಬೇಕು. ಸಿಗುವ ಗೌರವವನ್ನು ಕಾಪಾಡಿಕೊಂಡು ಹೋಗುವಿರಿ. ಧಾರ್ಮಿಕ ಕಾರ್ಯಗಳ ಕಡೆ ಪ್ರೀತಿ ಅಧಿಕವಾಗುವುದು. ರೋಗಹರಣದಿಂದ ನಿಮಗೆ ಆರೋಗ್ಯ ಸಿಗಲು ದೇವೀಸ್ತೋತ್ರವನ್ನು ಪಠಿಸಿ.

ತುಲಾ ರಾಶಿ : ಅಕ್ಟೋಬರ್ ಮಾಸದ ಎರಡನೇ ವಾರದಲ್ಲಿ ನಿಮಗೆ ಬುಧನ ಸಂಚಾರದಿಂದ ಮಾನಸಿಕ ಸಮಾಧಾನವು ಇರುವುದು. ಶುಕ್ರನೂ ಜೊತೆಗಿರುವುದು ಎಂತಹ ಸಂದರ್ಭವನ್ನೂ ನೀವು ನಿಭಾಯಿಸುವಿರಿ. ಗುರುಬಲವು ಸದ್ಯಕ್ಕೆ ನಿಮಗೆ ಇರಲ್ಲದ ಕಾರಣ ಎಲ್ಲವು ಅಸ್ತವ್ಯಸ್ತದಂತೆ ಕಾಣಿಸುವುದು. ಕಲಾಕೃತಿಗಳನ್ನು ಸೂಕ್ತ ಸ್ಥಳಗಳಲ್ಲಿ ಸೇರಿಸಿ ನಿಮ್ಮ ಮನೆಯನ್ನು ಸುಂದರಗೊಳಿಸುತ್ತೀರಿ. ಅಲಂಕಾರದ ವಿಚಾರಕ್ಕೆ ನಿಮ್ಮ ಯೋಚನೆ ಹೆಚ್ಚಿರುವುದು. ಸಂಗಾತಿಯಿಂದ ಗೌರವ ಸಿಗುವುದು. ಪಾಪಗಳನ್ನು ಕಳೆಯುವಂತೆ ದೇವಿಯಲ್ಲಿ ಪ್ರಾರ್ಥಿಸಿ.

ವೃಶ್ಚಿಕ ರಾಶಿ : ರಾಶಿ ಚಕ್ರದ ಎಂಟನೇ ರಾಶಿಯವರಿಗೆ ಬುಧನು ದ್ವಾದಶ ಸ್ಥಾನಕ್ಕೆ ಬಂದಿರುವುದು ಅಲ್ಪ ಹಿನ್ನಡೆ ಎನಿಸಬಹುದು. ನವಮ ಹಾಗೂ ಏಕಾದಶಾಧಿಪತಿಯಾದ ಬುಧನು ನಿಮ್ಮ ಮುಖ್ಯ ಅಂಶವನ್ನು ಕಳೆಯಬಹುದು. ಮಾತಿಗೆ ಬೆಂಬಲವು ಸಿಗದು. ನೀವು ಸುಧಾರಣೆ ಮಾಡಿಕೊಳ್ಳುವ ಮನಃಸ್ಥಿತಿಯಲ್ಲಿ ಇರುವಿರಿ. ಉದ್ಯೋಗಿಗಳು ವ್ಯಾಪಾರದಲ್ಲಿ ಉತ್ತಮ ಲಾಭಗಳನ್ನು ನಿರೀಕ್ಷೆ ಇದೆ. ಕೆಲಸವನ್ನು ಹೆಚ್ಚು ವೆಚ್ಚ ಮಾಡಿಕೊಂಡಾದರೂ ಮಾಡುವಿರಿ. ದೇವಿಯ ಸನ್ನಿಧಿಯಲ್ಲಿ ಯಾವುದಾದರೂ ಸ್ತೋತ್ರವನ್ನು ಮಾಡಿ.

ಧನು ರಾಶಿ : ಈ ತಿಂಗಳ ಎರಡನೇ ವಾರದಲ್ಲಿ ಬುಧನು ದಶಮ ಸ್ಥಾನದಿಂದ ಏಕಾದಶಕ್ಕೆ ಬರಲಿದ್ದಾ‌ನೆ. ಸಾಹಿತ್ಯದಲ್ಲಿ ಕಲೆಗಳಲ್ಲಿ ಅಭಿರುಚಿ ಇರುವವರಿಗೆ ಶುಭವಿದೆ. ಅವಕಾಶದ ಸದುಪಯೋಗ ಮಾಡಿಕೊಳ್ಳಬೇಕು. ನಿಮ್ಮ ವೃತ್ತಿಯನ್ನು ಮುಂದುವರಿಸಲು ನಿಮ್ಮೊಳಗೇ ತಾಕಲಾಟವು ಕಾಣಿಸುವುದು. ನಿಮ್ಮ ಕಾರ್ಯವು ಹಲವರಿಗೆ ಉಪಯೋಗವಾಗುವಂತೆ ಇರಲಿ. ಬಾರದ ಅಂತ್ಯಕ್ಕೆ ನಿಮ್ಮ ಆಕಾಂಕ್ಷೆಯನ್ನು ಹೆಚ್ಚು ಪೋಷಿಸುತ್ತೀರಿ ಮತ್ತು ಮುಕ್ತ ಭಾವವನ್ನು ಅನುಭವಿಸುತ್ತೀರಿ. ಕೆಲವು ಅಡಡತಡೆಗಳನ್ನು ಗಂಭೀರವಾಗಿ ಪರಿಗಣಿಸುವುದು ಬೇಡ. ಈ ವಾರ ನಿಮಗೆ ದೇವಿಯ ಆರಾಧನೆಯೇ ಸೂಕ್ತ.

ಮಕರ ರಾಶಿ : ಅಕ್ಟೋಬರ್ ತಿಂಗಳ ಎರಡನೇ ವಾರದಲ್ಲಿ ಬುಧನ ಸಂಚಾರದಿಂದ ಶುಭವಿದೆ. ದಶಮಸ್ಥಾನಕ್ಕೆ ಪ್ರವೇಶ‌ಮಾಡಿದ ಬುಧನು ಔದ್ಯೋಗಿಕ ಬಿಕ್ಕಟ್ಟನ್ನು ಬಗೆಡಹರಿಸುವನು. ಈ ವಾರ ನಿಮ್ಮ ಕುಟುಂಬದ ಸದಸ್ಯರ ಬೆಂಬಲಕ್ಕಿಂತ ಬೇರೆ ಯಾರೂ ಸಾಂತ್ವನ ಹೇಳಲು ಸಾಧ್ಯವಾಗದು. ಎಲ್ಲವೂ ನಿಮ್ಮ ಪರವಾಗಿಯೇ ಇದ್ದರೂ ಯಾವುದನ್ನೂ ಕೂಡಲೇ ನಿರ್ಧರಿಸದೇ ಸಮಯಕ್ಕಾಗಿ ಕಾಯಿರಿ. ಈ ವಾರ ದೇವೀ ಆರಾಧನೆಯೇ ಪ್ರಶಸ್ತವಾದುದು. ಆಕೆಗೆ ವಿವಿಧ ಸೇವೆಯನ್ನು ಮಾಡಿಸಿ.

ಕುಂಭ ರಾಶಿ : ರಾಶಿ ಚಕ್ರದ ಹನ್ನೊಂದನೇ ರಾಶಿಯರಿಗೆ ಬುಧನು ನವಮ ರಾಶಿಗೆ ಬಂದಿರುವ ಕಾರಣ ಉತ್ತಮ‌ ಫಲವನ್ನು ನೀವು ನಿರೀಕ್ಷಿಸಬಹುದು. ಯಾವುದಾದರೂ ಗೆಲುವಿಗೆ ಹಂಬಲಿಸುತ್ತಿದ್ದರೆ ಅದು ಸಿಗುವುದು. ಇಂದು ನಿಮಗೆ ಅದೃಷ್ಟ ದೊರೆಯುತ್ತದೆ. ಈ ವಾರ ನಿಮಗೆ ಪುರಸ್ಕಾರದ ಜೊತೆ ನೀವು ಮತ್ತಷ್ಟು ಸಾಧನೆ ಮಾಡಲು ಉತ್ತೇಜನ ದೊರೆಯುತ್ತದೆ. ನಿಮ್ಮ ಮೇಲಧಿಕಾರಿಗಳು ಸಂತೋಷಗೊಂಡು ನಿಮ್ಮ ಶ್ರಮಕ್ಕೆ ತಕ್ಕ ಆದಾಯವನ್ನು ಹೆಚ್ಚಿಸುವರು. ಜಗಜ್ಜನನಿಯನ್ನು ಅನನ್ಯ ಮನಸ್ಸಿನಿಂದ ಪೂಜಿಸಿ. ಎಲ್ಲವೂ ಸರಳವಾಗಿ ಮುಗಿಯುವುದು.

ಮೀನ ರಾಶಿ : ಇದು ಅಕ್ಟೋಬರ್ ತಿಂಗಳ ಎರಡನೇ ವಾರ.‌ ಈ ವಾರದಲ್ಲಿ ಬುಧನು ರಾಶಿಯನ್ನು ಬದಲಿಸಿ ಅಷ್ಟಮ ಸ್ಥಾನಕ್ಕೆ ಬರಲಿದ್ದಾನೆ. ಆರೋಗ್ಯದ ತೊಂದರೆ ಕಾಣಿಸುವುದು. ಈ ವಾರ ನಿಮ್ಮ ಕುಟುಂಬದ ಜೊತೆ ಸಂತೋಷಪಡುವ ಸುದ್ದಿಯ ನಿರೀಕ್ಷೆಯಲ್ಲಿ ಇರುವಿರಿ. ಮುಖ್ಯವಾದ ವ್ಯವಹಾರದ ಮಾತುಕತೆಗಳನ್ನು ಈ ವಾರದಲ್ಲಿ ಮುಗಿಸಿಕೊಳ್ಳಿ. ನಿಮಗೆ ಬಂದ ಕಾರ್ಯವನ್ನು ವೇಗವಾಗಿ ಮಾಡಲಾರಿರಿ.‌ ನಿಮಗೆ ಬದಲಾವಣೆ ಬೇಕೆನಿಸುವುದು. ದುರ್ಗಾಮಾತೆಯ ಯಾವ ಸ್ವರೂಪವನ್ನೂ ಶ್ರದ್ಧೆಯಿಂದ ಪೂಜಿಸಿ.

Leave a Comment

Your email address will not be published. Required fields are marked *