ಸಮಗ್ರ ನ್ಯೂಸ್: ಪ್ಯಾರಿಸ್ ಒಲಿಂಪಿಕ್ಸ್‌ನಿಂದ ಅನರ್ಹಗೊಂಡ ನಂತರ ಪ್ರಧಾನಿ ನರೇಂದ್ರ ಮೋದಿ ನನಗೆ ಫೋನ್ ಕರೆ ಮಾಡಿದ್ದರು. ಆದರೆ ನಾನು ಅವರ ಕರೆ ಸ್ವೀಕರಿಸಲಿಲ್ಲ.ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಫೈನಲ್ ಪ್ರವೇಶಿಸಿದ್ದ ಕುಸ್ತಿಪಟು ವಿನೇಶ್ ಫೋಗಟ್ ಅಧಿಕ ತೂಕದ ಕಾರಣಕ್ಕಾಗಿ ಮಹಿಳೆಯರ 50 ಕೆಜಿ ಕುಸ್ತಿಯಿಂದ ಅನರ್ಹಗೊಂಡಿದ್ದರು.
ಈಗ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಜೂಲಾನಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಫೋಗಟ್, ಪ್ರಧಾನಿಯಿಂದ ಕರೆ ಬಂದಿತ್ತು ಆದರೆ ನಾನು ಮಾತನಾಡಲು ನಿರಾಕರಿಸಿದೆ ಎಂದು ಲಾಲನ್‌ಟಾಪ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.ಕರೆ ನೇರವಾಗಿ ನನಗೆ ಬಂದಿರಲಿಲ್ಲ ಆದರೆ ಅಲ್ಲಿದ್ದ ಭಾರತೀಯ ಅಧಿಕಾರಿಗಳು ಅವರು (ಪಿಎಂ ಮೋದಿ) ಮಾತನಾಡಲು ಬಯಸಿದ್ದಾರೆ ಎಂದು ನನಗೆ ತಿಳಿಸಿದರು. ನಾನು ಸಿದ್ಧಳಾಗಿದ್ದೆ.
ಆದಾಗ್ಯೂ, ಅವರು ಷರತ್ತುಗಳನ್ನು ಹಾಕಿದರು. ಅದೇನೆಂದರೆ ನನ್ನ ತಂಡದಿಂದ ಯಾರೂ ಅಲ್ಲಿರಬಾರದು. ಆದರೆ ಅವರ ಕಡೆಯಿಂದ ಇಬ್ಬರು ಸಾಮಾಜಿಕ ಮಾಧ್ಯಮಕ್ಕಾಗಿ ಸಂಭಾಷಣೆಯನ್ನು ರೆಕಾರ್ಡ್ ಮಾಡುತ್ತಾರೆ ಎಂದು ನನಗೆ ಹೇಳಿದರು. ಹಾಗಾಗಿ ನಾನು ಆ ಕರೆ ಸ್ವೀಕರಿಸಲು ನಿರಾಕರಿಸಿದೆ.ನನ್ನ ಭಾವನೆಗಳು ಮತ್ತು ಕಠಿಣ ಪರಿಶ್ರಮವನ್ನು ಸಾಮಾಜಿಕ ಮಾಧ್ಯಮದಲ್ಲಿ ಗೇಲಿ ಮಾಡುವುದು ನನಗೆ ಇಷ್ಟವಿರಲಿಲ್ಲ.
ಅವರು ನಿಜವಾಗಿಯೂ ಕ್ರೀಡಾಪಟುಗಳ ಬಗ್ಗೆ ಕಾಳಜಿ ವಹಿಸಿದ್ದರೆ, ಅದನ್ನು ರೆಕಾರ್ಡ್ ಮಾಡದೆಯೇ ಕರೆ ಮಾಡಬಹುದಿತ್ತು ನಾನು ಕೃತಜ್ಞಳಾಗಿರುತ್ತಿದ್ದೆ.ನಾನು ವಿನೇಶ್ ಜೊತೆ ಮಾತನಾಡಿದರೆ ಅವಳು ಕಳೆದ ಎರಡು ವರ್ಷಗಳ ಬಗ್ಗೆ ಕೇಳುತ್ತಾಳೆ ಎಂದು ಅವರಿಗೆ ತಿಳಿದಿರಬಹುದು.
ಬಹುಶಃ ಅದಕ್ಕಾಗಿಯೇ ನನ್ನ ಕಡೆಯಿಂದ ಯಾವುದೇ ಫೋನ್ ಇರುವುದಿಲ್ಲ ಎಂದು ನನಗೆ ಸೂಚಿಸಲಾಗಿತ್ತು. ಏಕೆಂದರೆ ಕೊನೆಯಲ್ಲಿ ಅವರು ಎಡಿಟ್ ಮಾಡಬಹುದಿತ್ತು. ಆದರೆ ನಾನು ಎಡಿಟ್ ಮಾಡಲ್ಲ, ನಾನು ಮೂಲ ವಿಡಿಯೊವನ್ನು ಪೋಸ್ಟ್ ಮಾಡುತ್ತೇನೆ. ಹೀಗಾಗಿ ಪ್ರಧಾನಿ ಜೊತೆಗೆ ಮಾತನಾಡಲು ನಿರಾಕರಿಸಿದೆ.