ಸಮಗ್ರ ನ್ಯೂಸ್: ವಿಪರೀತ ಬೆಲೆ ಏರಿಕೆ ಪರಿಣಾಮ ಕಳ್ಳದಾರಿಯ ಮೂಲಕ ಬರುತ್ತಿದೆ ಚೀನದ ಬೆಳ್ಳುಳ್ಳಿ ನಿಷೇಧಿಸಲಾಗಿತ್ತು. ಇದೀಗ ಚೀನದ ಬೆಳ್ಳುಳ್ಳಿ ಉಡುಪಿ ಎಪಿಎಂಸಿ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಉಡುಪಿ ನಗರಸಭೆ ಅಧಿಕಾರಿಗಳು ದಾಳಿ ನಡೆಸಿ ಗುಣಮಟ್ಟದ ಶಂಕೆ ಹಿನ್ನೆಲೆಯಲ್ಲಿ 12 ಟನ್ ಬೆಳ್ಳುಳ್ಳಿ ವಶಪಡಿಸಿಕೊಂಡಿದ್ದಾರೆ.
ಚೀನದಿಂದ ಬೆಳ್ಳುಳ್ಳಿಯನ್ನು ಕಳ್ಳದಾರಿಯ ಮೂಲಕ ತರಿಸಿ ದೇಶಿ ಬೆಳ್ಳುಳ್ಳಿ ಜೊತೆ ಬೆರಕೆ ಮಾಡಿ ಮಾಡುತ್ತಿರುವ ದಂಧೆ ವ್ಯಾಪಕವಾಗಿ ನಡೆಯುತ್ತಿದೆ.ಉಡುಪಿ ಎಪಿಎಂಸಿ ಮಾರುಕಟ್ಟೆಗೂ ಚೀನ ಬೆಳ್ಳುಳ್ಳಿ ಪ್ರವೇಶಿಸಿದ ಕುರಿತು ಮಾಹಿತಿ ಸಿಕ್ಕಿದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಲಾಗಿತ್ತು. ಚೀನದ ಬೆಳ್ಳುಳ್ಳಿ ಹೋಲುವ ಬೆಳ್ಳುಳ್ಳಿ ದಾಸ್ತಾನಿನಲ್ಲಿ ಕಂಡುಬಂದು.ಬೆಳ್ಳುಳ್ಳಿಯ ಗುಣಮಟ್ಟ ಅನುಮಾನಾಸ್ಪದವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉಡುಪಿಯ ಎಪಿಎಂಸಿ ಮಾರುಕಟ್ಟೆಗೆ ಸರಬರಾಜಾಗಿದ್ದ ಬೆಳ್ಳುಳ್ಳಿಯ ಸಂಪೂರ್ಣ ದಾಸ್ತಾನನ್ನು ತಂಡವು ವಶಪಡಿಸಿಕೊಂಡಿದ್ದು, ಚೀನದ ಬೆಳ್ಳುಳ್ಳಿಯೇ ಎಂಬುದನ್ನು ಪರೀಕ್ಷಿಸಲು ಮಂಗಳೂರಿನ ಪ್ರಯೋಗಾಲಯಕ್ಕೆ ಮಾದರಿಗಳನ್ನು ಕಳುಹಿಸಲಾಗಿದೆ. ಪರೀಕ್ಷಾ ವರದಿ ಬಂದ ನಂತರ ಪಾಲಿಕೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆ ಆಯುಕ್ತ ರಾಯಪ್ಪ ತಿಳಿಸಿದ್ದಾರೆ.