ಸಮಗ್ರ ನ್ಯೂಸ್: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಸಮೀಪದ ಕುಮಾರ ಪರ್ವತ ಚಾರಣ ಪಥವು ಅ.3 (ಗುರುವಾರ)ರಂದು ಮರು ಪ್ರಾರಂಭವಾಗಲಿದೆ. ಜ. 26 ಹಾಗೂ 27ರಂದು ಮಿತಿಗೂ ಮೀರಿದ ಚಾರಣಿಗರು ಆಗಮಿಸಿದ್ದ ಕಾರಣ ಜನದಟ್ಟಣೆ ಉಂಟಾಗಿತ್ತು.
ಆದ್ದರಿಂದ, ನಿರ್ದಿಷ್ಟ ಸಂಖ್ಯೆಯ ಚಾರಣಿಗರಿಗೆ ಮಾತ್ರವೇ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಫೆ.1ರಿಂದ ಚಾರಣ ಪಥವನ್ನು ಸ್ಥಗಿತಗೊಳಿಸಲಾಗಿತ್ತು.
ಕುಮಾರ ಪರ್ವತಕ್ಕೆ ನಿರ್ದಿಷ್ಟ ಸಂಖ್ಯೆಯ ಚಾರಣಿಗರಿಗೆ ಮಾತ್ರವೇ ಅವಕಾಶ ಕಲ್ಪಿಸಲು ಸ್ಥಗಿತಗೊಳಿಸಲಾಗಿದ್ದ ಚಾರಣ ನಾಳೆಯಿಂದ ಆರಂಭವಾಗಲಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಪ್ರಕಟಿಸಿದ್ದಾರೆ.
ಅರಣ್ಯ ಇಲಾಖೆಯ ಅಡಿ ಬರುವ ರಾಜ್ಯ ವ್ಯಾಪ್ತಿಯಲ್ಲಿನ ಸುಮಾರು 43 ಚಾರಣ ಸ್ಥಳಗಳನ್ನು ಪಟ್ಟಿ ಮಾಡಲಾಗಿದ್ದು, ಇಂದಿನಿಂದ (ಗುರುವಾರ) ಎಲ್ಲ ಚಾರಣ ಪಥಗಳು ಪ್ರಾರಂಭವಾಗಲಿವೆ. ಚಾರಣಿಗರು ತಮ್ಮ ಹಿತದೃಷ್ಟಿಯಿಂದ ಅಧಿಕೃತ ವೆಬ್‌ಸೈಟ್ ಮೂಲಕ ಮುಂಗಡವಾಗಿ ಟಿಕೆಟ್ ಖರೀದಿಸಿ ಚಾರಣಕ್ಕೆ ಹೋಗಬೇಕು. ವೆಬ್‌ಸೈಟ್ ಬಗ್ಗೆ ತಿಳಿಯದೇ ಹೋದಂತಹ ಶೇ.10ರಷ್ಟು ಚಾರಣಿಗರಿಗೆ ಮಾತ್ರ ಸ್ಥಳದಲ್ಲಿಯೇ ಟಿಕೆಟ್ ನೀಡಲಾಗುತ್ತದೆ ಎಂದು ಹೇಳಿದರು.