ಬೆಳ್ತಂಗಡಿ: ರಿವರ್ಸ್ ತೆಗೆಯುವ ವೇಳೆ ಕಾರಿನಡಿಗೆ ಬಿದ್ದು ಬಾಲಕ‌ ಸಾವು

ಸಮಗ್ರ ನ್ಯೂಸ್: ಕಾರು ರಿವರ್ಸ್ ತೆಗೆಯುತ್ತಿದ್ದಾಗ ಕಾರಿನಡಿಗೆ ಬಿದ್ದು ಬಾಲಕ ಸಾವನ್ನಪ್ಪಿರುವ ಘಟನೆ ಬೆಳ್ತಂಗಡಿ ತಾಲೂಕಿನ ಕೊಕ್ಕಡದಲ್ಲಿ ಹಮೀದ್ ಎಂಬವರ ಮನೆಯ ಅಂಗಳದಲ್ಲಿ ನಡೆದಿದೆ.

Ad Widget ... ..

ಕೊಕ್ಕಡದ ಹಮೀದ್ ಎಂಬವರ ಪುತ್ರ ನವಾಫ್ (10) ಮೃತ ಬಾಲಕ. ಹಮೀದ್ ಅವರ ಮನೆಗೆ ಬಂದಿದ್ದ ಸಂಬಂಧಿಕರು ಮನೆಯಂಗಳದಲ್ಲಿ ಕಾರನ್ನು ಹಿಂದಕ್ಕೆ ಚಲಾಯಿಸಿದಾಗ ಕಾರಿನ ಹಿಂಬದಿ ನಿಂತಿದ್ದ ನವಾಫ್ ಅವರು ಕಾರಿನಡಿಗೆ ಬಿದ್ದಿದ್ದಾನೆ ಎನ್ನಲಾಗಿದೆ. ಅವರ ಮೇಲೆಯೇ ಕಾರು ಹರಿದ ಪರಿಣಾಮ ತಲೆ ಮತ್ತು ಕಾಲಿಗೆ ಗಂಭೀರ ಗಾಯಗಳಾಗಿ ಮೃತಪಟ್ಟಿದ್ದಾನೆ.

Ad Widget

ನವಾಫ್ ಕಾರಿನ ಹಿಂಬದಿ ನಿಂತಿದ್ದದ್ದು ಅರಿವಿಗೆ ಬಾರದೆ ಈ ದುರ್ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

Leave a Comment

Your email address will not be published. Required fields are marked *