September 2024

ವೇಶ್ಯಾವಾಟಿಕೆ ಅಡ್ಡೆ ಮೇಲೆ ಸಿಸಿಬಿ ದಾಳಿ| ಬೆಳ್ತಂಗಡಿ ಮೂಲದ ಟೆಕ್ಕಿ ಸೇರಿ ಮೂವರು ಅರೆಸ್ಟ್| ನಿಶ್ಚಿತಾರ್ಥ ನಿಗದಿಯಾಗಿದ್ದವನ ಕಂಬಿ ಹಿಂದೆ ತಳ್ಳಿದ ಪೊಲೀಸರು

ಸಮಗ್ರ ನ್ಯೂಸ್: ಕೆಲವೇ ದಿನಗಳಲ್ಲಿ ಮದುವೆ ನಿಶ್ಚಿತಾರ್ಥವಾಗಬೇಕಿದ್ದ ಟೆಕ್ಕಿಯೊಬ್ಬ ಸಿಸಿಬಿ ಪೊಲೀಸರು ವೇಶ್ಯಾವಾಟಿಕೆ ದಂಧೆ ಮೇಲೆ ದಾಳಿ ನಡೆಸಿದ್ದಾಗ ಸಿಕ್ಕಿಬಿದ್ದಿದ್ದು, ಆತನ ನಿಶ್ಚಿತಾರ್ಥ ರದ್ದಾಗಿದೆ. ಪ್ರಕರಣದ ಸಂಬಂಧ ಟೆಕ್ಕಿ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಹೊಂಗಸಂದ್ರದ ಕರಿಷ್ಮಾಶೇಖ್ ಅಲಿಯಾಸ್ ಮುಸ್ಕಾನ್, ಶಾಂತಿಪುರದ ಸೂರಜ್ ಶಾಹಜೀ ಹಾಗೂ ಬೆಳ್ತಂಗಡಿ ಮೂಲದ ಎಲೆಕ್ಟ್ರಾನಿಕ್ ಸಿಟಿಯಲ್ಲಿ ವಾಸವಾಗಿದ್ದ ಟೆಕ್ಕಿ ಸುಬ್ರಮಣ್ಯ ಶಾಸ್ತ್ರಿ ಬಂಧಿತರು. ಬಾಂಗ್ಲಾದೇಶ ಮೂಲದ ಅಪ್ರಾಪ್ತೆಯರನ್ನು ಕಳ್ಳಸಾಗಣೆ ಮೂಲಕ ನಗರಕ್ಕೆ ಕರೆತಂದು ವೇಶ್ಯಾವಾಟಿಕೆ ದಂಧೆಗೆ ದೂಡಿರುವ ಮಾಹಿತಿ ಮೇರೆಗೆ ಇತ್ತೀಚೆಗೆ […]

ವೇಶ್ಯಾವಾಟಿಕೆ ಅಡ್ಡೆ ಮೇಲೆ ಸಿಸಿಬಿ ದಾಳಿ| ಬೆಳ್ತಂಗಡಿ ಮೂಲದ ಟೆಕ್ಕಿ ಸೇರಿ ಮೂವರು ಅರೆಸ್ಟ್| ನಿಶ್ಚಿತಾರ್ಥ ನಿಗದಿಯಾಗಿದ್ದವನ ಕಂಬಿ ಹಿಂದೆ ತಳ್ಳಿದ ಪೊಲೀಸರು Read More »

ಗಣೇಶೋತ್ಸವ, ಈದ್ ಮಿಲಾದ್ ವೇಳೆ ಡಿಜೆ ನಿಷೇಧಿಸಿ ರಾಜ್ಯ ಸರ್ಕಾರ ಖಡಕ್ ಆದೇಶ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಗೌರಿ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಆಚರಣೆ ಪೂರ್ಣಗೊಳ್ಳುವವರೆಗೆ ರಾಜ್ಯದಲ್ಲಿ ಡಿಜೆ ಸಿಸ್ಟಂ ಬಳಕೆ ನಿಷೇಧಗೊಳಿಸುವಂತೆ ರಾಜ್ಯ ಸರ್ಕಾರ ಖಡಕ್ ಆದೇಶ ಹೊರಡಿಸಿದೆ. ರಾಜ್ಯದಲ್ಲಿ ದಿನಾಂಕ: 07.09.2024 ರಂದು ಗಣೇಶ ಹಬ್ಬದ ಪ್ರಯುಕ್ತ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ನಂತರ, ವಿವಿಧ ದಿನಗಳಂದು ವಿಸರ್ಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದು, ಹಾಗೂ ದಿನಾಂಕ: 16.09.2024 ರಂದು ರಾಜ್ಯಾದ್ಯಂತ ಮುಸ್ಲಿಂ ಬಾಂದವರು ಈದ್ ಮಿಲಾದ್ ಹಬ್ಬವನ್ನು ಆಚರಿಸಲಿದ್ದು, ಈ ಸಂಬಂಧ ಗಣೇಶ ಮತ್ತು ಈದ್

ಗಣೇಶೋತ್ಸವ, ಈದ್ ಮಿಲಾದ್ ವೇಳೆ ಡಿಜೆ ನಿಷೇಧಿಸಿ ರಾಜ್ಯ ಸರ್ಕಾರ ಖಡಕ್ ಆದೇಶ Read More »

ಪುತ್ತೂರು: ಮಾಡಿಲಿಂಗ್ ಜಗತ್ತಿಗೆ ಪ್ರಪ್ರಥಮ ಬಾರಿಗೆ ಸ್ಥಳೀಯ ಸುಂದರಿಯರನ್ನ ನೂತನ ರೂಪದರ್ಶಿಗಳಾಗಿ ಪರಿಚಯಿಸುವ- ಫೇಸಸ್ ಆಫ್ ಮುಳಿಯ

ಸಮಗ್ರ ನ್ಯೂಸ್: ಪುತ್ತೂರಿನ ಮುಳಿಯ ಚಿನ್ನಾಭರಣ ಮಳಿಗೆ ಕಳೆದ 80 ವರ್ಷಗಳಿಂದ ನಂಬಿಕೆಯ ಆಭರಣ ಮಳಿಗೆಯಾಗಿರುತ್ತದೆ. ಹಾಗೆಯೇ ಸ್ಥಳೀಯರಿಗೆ ಅವಕಾಶಕ್ಕಾಗಿ ಗಾನರಥ ಗಾಯನ ಸ್ಪರ್ಧೆ, ಕೃಷಿಯನ್ನು ಉದ್ಯಮವಾಗಿ ನೋಡಬೇಕು ಅನ್ನುವ ಕೃಷಿಕೋದ್ಯಮ ಸೆಮಿನಾರ್, ಕಾಡುಬೆಳೆಸಲು ಲಕ್ಷಕ್ಕೂಮಿಕ್ಕಿ ಸೀಡ್ ಬಾಲ್ ಎಸೆತ, ದೇಶದಲ್ಲೇ ಮೊದಲ ಬಾರಿ ಸ್ವಚ್ಛಪುತ್ತೂರು ಕಾರ್ಯಕ್ರಮ ಹೀಗೆ ಸದಾ ಹಲವು ಹೊಸತನವನ್ನು ಪರಿಚಯಿಸುವ ಕೆಲಸ ಮಾಡಿಕೊಂಡು ಬಂದಿದೆ. ಈ ಹೊಸತನಕ್ಕೆ ಈಗ ಇನ್ನೊಂದು ಆಯಾಮವೇ “ಫೇಸಸ್ ಆಫ್ ಮುಳಿಯ”ನಮ್ಮ ಶಾಖೆಗಳಿರುವ ಕೊಡಗು ಪುತ್ತೂರು ಬೆಳ್ತಂಗಡಿ ಬೆಂಗಳೂರು

ಪುತ್ತೂರು: ಮಾಡಿಲಿಂಗ್ ಜಗತ್ತಿಗೆ ಪ್ರಪ್ರಥಮ ಬಾರಿಗೆ ಸ್ಥಳೀಯ ಸುಂದರಿಯರನ್ನ ನೂತನ ರೂಪದರ್ಶಿಗಳಾಗಿ ಪರಿಚಯಿಸುವ- ಫೇಸಸ್ ಆಫ್ ಮುಳಿಯ Read More »

ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ‌ಚಾಮುಂಡೇಶ್ವರಿ‌ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಸಭೆ| ಬೆಟ್ಟದಲ್ಲಿ ಧೂಮಪಾನ, ಗುಟ್ಕಾ, ಮೊಬೈಲ್, ಮದ್ಯಪಾನ ನಿಷೇಧ

ಸಮಗ್ರ ನ್ಯೂಸ್: ಮುಖ್ಯಮಂತ್ರಿ ಸಿದ್ದರಾಮ್ಯಯ ಅವರು ಇಂದು (ಸೆಪ್ಟೆಂಬರ್ 03) ಮೈಸೂರು ಜಿಲ್ಲಾ ಪ್ರವಾಸ ಕೈಗೊಂಡಿದ್ದು, ಮೊದಲು ನೇರವಾಗಿ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಅಮ್ಮನ ದರ್ಶನ್ ಪಡೆದುಕೊಂಡರು. ಬಳಿಕ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಮೊದಲ ಸಭೆ ನಡೆಸಿದರು. ಈ ಸಭೆಯಲ್ಲಿ ಬೆಟ್ಟದ ಅಭಿವೃದ್ಧಿಯ ಬಗ್ಗೆ ಮಹತ್ವದ ಚರ್ಚೆಗಳು ನಡೆಸಿದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ, ಚಾಮುಂಡಿಬೆಟ್ಟದಲ್ಲಿ ಧೂಮಪಾನ, ಮದ್ಯಪಾನ, ಗುಟ್ಕಾ ನಿಷೇಧಿಸಲಾಗಿದೆ. ಅಲ್ಲದೇ ಚಾಮುಂಡಿ ದರ್ಶನ ವೇಳೆ ಮೊಬೈಲ್​ ನಿಷೇಧ ಮಾಡಲಾಗಿದೆ ಎಂದು

ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ‌ಚಾಮುಂಡೇಶ್ವರಿ‌ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಸಭೆ| ಬೆಟ್ಟದಲ್ಲಿ ಧೂಮಪಾನ, ಗುಟ್ಕಾ, ಮೊಬೈಲ್, ಮದ್ಯಪಾನ ನಿಷೇಧ Read More »

ಮಂಗಳೂರು: ಕ್ರಿಕೆಟ್ ಆಡುತ್ತಿದ್ದಾಗ ಹೃದಯಾಘಾತ; ಯುವಕ ಸಾವು

ಸಮಗ್ರ ನ್ಯೂಸ್: ಕ್ರಿಕೆಟ್ ಆಡುತ್ತಿದ್ದಾಗ ಹೃದಯಾಘಾತಗೊಂಡು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಯುವಕನೋರ್ವ ಸಾವನ್ನಪ್ಪಿದ ಘಟನೆ ಮೂಡುಪೆರಾರ ಕಾಯರಾಣೆಯಲ್ಲಿ ಸೆಪ್ಟೆಂಬರ್ 1 ರಂದು ನಡೆದಿದೆ. ಮೂಡುಪೆರಾರ ಕಾಯರಾಣೆ ನಿವಾಸಿ ದಿ| ಆನಂದ ಪೂಜಾರಿ ಅವರ ಪುತ್ರ ಪ್ರದೀಪ್ ಪೂಜಾರಿ (31) ಮೃತ ದುರ್ದೈವಿ. ಭಾನುವಾರ ಸಂಜೆ ಮೂಡುಪೆರಾರ ಕಾಯಾರಣೆಯಲ್ಲಿ ಕ್ರಿಕೆಟ್ ಆಡುತ್ತಿದ್ದಾಗ ಪ್ರದೀಪ್ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ಮೊದಲಿಗೆ ಕೈಕಂಬದ ಖಾಸಗಿ ಆಸ್ಪತ್ರೆಗೆ ಕರೆದೊಯ್ದು, ನಂತರ ಬಜ್ಪೆಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಪ್ರಾಥಮಿಕಚಿಕಿತ್ಸೆ ನೀಡಲಾಯಿತು. ನಂತರ ಅವರನ್ನು

ಮಂಗಳೂರು: ಕ್ರಿಕೆಟ್ ಆಡುತ್ತಿದ್ದಾಗ ಹೃದಯಾಘಾತ; ಯುವಕ ಸಾವು Read More »

ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ| ಜಾವೆಲಿನ್ ನಲ್ಲಿ ಸುಮಿತ್ ಆಂಟಿಲ್ ಪರಾಕ್ರಮ

ಸಮಗ್ರ ನ್ಯೂಸ್ : ಪ್ಯಾರಿಸ್ ನಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತೀಯರಿಂದ ಇಂದು ಸಹ ಚಿನ್ನದ ಬೇಟೆ ಮುಂದುವರಿದಿದೆ. ಜಾವೆಲಿನ್ ಥ್ರೋ ನಲ್ಲಿ ಇದ್ದಾಗ ಬರೆಯುವ ಮೂಲಕ ಸುಮಿತ್ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ. ಇದೀಗ ಭಾರತಕ್ಕೆ ಚಿನ್ನದ ಪದಕ ಗೆಲ್ಲುವಲ್ಲಿ ಸುಮಿತ್ ಆಂಟಿಲ್ ಮತ್ತೊಮ್ಮೆ ಯಶಸ್ವಿಯಾಗಿದ್ದಾರೆ. ಕಳೆದ ಬಾರಿ ಟೋಕಿಯೊ ಪ್ಯಾರಾಲಿಂಪಿಕ್ಸ್‌ನ ಜಾವೆಲಿನ್‌ನಲ್ಲಿ ಸುಮಿತ್ ಭಾರತಕ್ಕೆ ಚಿನ್ನದ ಪದಕ ಗೆದ್ದು ಕೊಟ್ಟಿದ್ದೂ, ಈ ಬಾರಿಯೂ ದಾಖಲೆಯೊಂದಿಗೆ ಬಂಗಾರದ ಪದಕದ ಬೇಟೆ ಮುಂದುವರಿಸಿದ್ದಾರೆ. ಸುಮಿತ್ ಜಾವೆಲಿನ್ ಥ್ರೋ F64

ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ| ಜಾವೆಲಿನ್ ನಲ್ಲಿ ಸುಮಿತ್ ಆಂಟಿಲ್ ಪರಾಕ್ರಮ Read More »

ಪ್ಯಾರಾಲಿಂಪಿಕ್ಸ್ ನಲ್ಲಿ ಮತ್ತೊಂದು ಚಿನ್ನ ಗೆದ್ದ ಭಾರತ| ಬ್ಯಾಡ್ಮಿಂಟನ್ ನಲ್ಲಿ ಗೆದ್ದು ಬೀಗಿದ ನಿತೇಶ್ ಕುಮಾರ್

ಸಮಗ್ರ ನ್ಯೂಸ್: ಪ್ಯಾರಿಸ್ ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನದ ಪದಕ ಲಭಿಸಿದ್ದು, ಬ್ಯಾಡ್ಮಿಂಟನ್‌ನಲ್ಲಿ ನಿತೇಶ್ ಕುಮಾರ್ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಕ್ರೀಡಾಕೂಟದ ಆರನೇ ದಿನ ಪುರುಷರ ಬ್ಯಾಡ್ಮಿಂಟನ್ ಸಿಂಗಲ್ಸ್ ಎಸ್​ಎಲ್3 ವಿಭಾಗದಲ್ಲಿ ಭಾರತದ ನಿತೇಶ್ ಕುಮಾರ್ 21-14, 18-21, 23-21 ರಿಂದ ಗೆಲುವು ಸಾಧಿಸಿದರು. ಭಾರತ ಈ ಬಾರಿಯ ಪ್ಯಾರಾಲಿಂಪಿಕ್ಸ್‌ನಲ್ಲಿ ಇದುವರೆಗೆ ಒಟ್ಟು 9 ಪದಕಗಳನ್ನು ಗೆದ್ದುಕೊಂಡಿದೆ.

ಪ್ಯಾರಾಲಿಂಪಿಕ್ಸ್ ನಲ್ಲಿ ಮತ್ತೊಂದು ಚಿನ್ನ ಗೆದ್ದ ಭಾರತ| ಬ್ಯಾಡ್ಮಿಂಟನ್ ನಲ್ಲಿ ಗೆದ್ದು ಬೀಗಿದ ನಿತೇಶ್ ಕುಮಾರ್ Read More »

ಕೊಕ್ಕಡ: ಪಟ್ಟೂರು ಶ್ರೀರಾಮ ವಿದ್ಯಾ ಸಂಸ್ಥೆಯಲ್ಲಿ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ

ಸಮಗ್ರ ನ್ಯೂಸ್: ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಛೇರಿ ದಕ್ಷಿಣ ಕನ್ನಡ ಜಿಲ್ಲೆ ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಮತ್ತು ಕ್ಷೇತ್ರ ಸಮನ್ವಯಾಧಿಕಾರಿಯವರ ಕಛೇರಿ ಬೆಳ್ತಂಗಡಿ ತಾಲೂಕು, ಸಮೂಹ ಸಂಪನ್ಮೂಲ ಕೇಂದ್ರ ಕೊಕ್ಕಡ ಇವರ ವತಿಯಿಂದ ಶ್ರೀ ವಿಷ್ಣುಮೂರ್ತಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪಟ್ಟೂರು ( ಶ್ರೀರಾಮ ವಿದ್ಯಾ ಸಂಸ್ಥೆ ) ಇವರ ಸಹಯೋಗದೊಂದಿಗೆ ಬೆಳ್ತಂಗಡಿ ತಾಲೂಕು ಪ್ರಾಥಮಿಕ ಶಾಲಾ ಮಟ್ಟದ ಬಾಲಕರ ಹಾಗೂ ಬಾಲಕಿಯರ ವಾಲಿಬಾಲ್ ಪಂದ್ಯಾಟವು ಸೆ. 2ರಂದು ಉದ್ಘಾಟನೆಗೊಂಡಿತು. ಕಾರ್ಯಕ್ರಮವನ್ನು ಪಟ್ರಮೆ ಗ್ರಾಮ

ಕೊಕ್ಕಡ: ಪಟ್ಟೂರು ಶ್ರೀರಾಮ ವಿದ್ಯಾ ಸಂಸ್ಥೆಯಲ್ಲಿ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ Read More »

ಸುಳ್ಯದಿಂದ‌ ಚಿಕಿತ್ಸೆಗೆ ಮಗುವನ್ನು ಕರೆದೊಯ್ಯತ್ತಿದ್ದ ಅಂಬ್ಯುಲೆನ್ಸ್ ಕುಂಬ್ರದಲ್ಲಿ ಅಪಘಾತ

ಸಮಗ್ರ ನ್ಯೂಸ್: ಆಂಬ್ಯುಲೆನ್ಸ್ ಮತ್ತು ಕಂಟೈನರ್ ಮಧ್ಯೆ ಅಪಘಾತ ಸಂಭವಿಸಿ ಆಂಬ್ಯುಲೆನ್ಸ್‌ನಲ್ಲಿದ್ದ ಐದು ಮಂದಿ ಗಾಯಗೊಂಡ ಘಟನೆ ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಬಳಿ ಸೆ.2ರಂದು ಸಂಜೆ ನಡೆದಿದೆ. ಸುಳ್ಯದಿಂದ ಮಂಗಳೂರು ಆಸ್ಪತ್ರೆಗೆ ಮಗುವೊಂದನ್ನು ಚಿಕಿತ್ಸೆಗೆ ಕರೆದುಕೊಂಡು ಹೋಗುತ್ತಿದ್ದ ಜಯಪ್ರಕಾಶ್ ಎಂಬವರು ಚಲಾಯಿಸುತ್ತಿದ್ದ ಆಂಬ್ಯುಲೆನ್ಸ್ ಹಾಗೂ ಪುತ್ತೂರು ಕಡೆಯಿಂದ ಮಡಿಕೇರಿ ಕಡೆಗೆ ಹೋಗುತ್ತಿದ್ದ ಕಂಟೈನರ್ ಲಾರಿ ಮಧ್ಯೆ ಅಪಘಾತ ಸಂಭವಿಸಿದೆ. ಘಟನೆಯಿಂದ ಆಂಬ್ಯುಲೆನ್ಸ್ ನಲ್ಲಿದ್ದ ಮಗು ಸಹಿತ ಐದು ಮಂದಿಗೆ

ಸುಳ್ಯದಿಂದ‌ ಚಿಕಿತ್ಸೆಗೆ ಮಗುವನ್ನು ಕರೆದೊಯ್ಯತ್ತಿದ್ದ ಅಂಬ್ಯುಲೆನ್ಸ್ ಕುಂಬ್ರದಲ್ಲಿ ಅಪಘಾತ Read More »

ಪ್ರಾಸಿಕ್ಯೂಷನ್ ರದ್ದು ಕೋರಿ ಸಿಎಂ ಸಲ್ಲಿಸಿದ್ದ ಅರ್ಜಿ ವಿಚಾರಣೆ ಸೆ.9ಕ್ಕೆ ಮುಂದೂಡಿಕೆ

ಸಮಗ್ರ ನ್ಯೂಸ್: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ರಾಜ್ಯಪಾಲರು ನೀಡಿರುವ ಪ್ರಾಸಿಕ್ಯೂಷನ್ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಸೆ.9ಕ್ಕೆ ವಿಚಾರಣೆಯನ್ನು ಮುಂದೂಡಿದೆ‌. ಸಿ.ಎಂ ಸಿದ್ಧರಾಮಯ್ಯ ವಿರುದ್ಧದ ಮುಡಾ ಹಗರಣ ಆರೋಪ ಸಂಬಂಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದರು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಗೆ ಸಿಎಂ ಸಿದ್ಧರಾಮಯ್ಯ ರಿಟ್ ಅರ್ಜಿಯನ್ನು ಸಲ್ಲಿಸಿದ್ದರು. ಈ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠವು ಸೆಪ್ಟೆಂಬರ್.2ರ ಇಂದು ಮಧ್ಯಾಹ್ನ 2.30ಕ್ಕೆ ವಿಚಾರಣೆಯನ್ನು ನಡೆಸಬೇಕಿತ್ತು.

ಪ್ರಾಸಿಕ್ಯೂಷನ್ ರದ್ದು ಕೋರಿ ಸಿಎಂ ಸಲ್ಲಿಸಿದ್ದ ಅರ್ಜಿ ವಿಚಾರಣೆ ಸೆ.9ಕ್ಕೆ ಮುಂದೂಡಿಕೆ Read More »