September 2024

ಟಾಟ ಫ್ಯಾಕ್ಟರಿಯಲ್ಲಿ ಭಾರಿ ಅಗ್ನಿ ಅವಘಡ

ಸಮಗ್ರ ನ್ಯೂಸ್: ತಮಿಳುನಾಡಿನ ಹೊಸೂರು ಸಮೀಪದ ಕೂತನಹಳ್ಳಿಯ ಟಾಟಾ ಫ್ಯಾಕ್ಟರಿಯ ಕೆಮಿಕಲ್ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದೆ.ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಅಗ್ನಿಗಾಹುತಿಯಾದ ಘಟನೆ ನಡೆದಿದೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಕಾರ್ಮಿಕರು, ಸಿಬ್ಬಂದಿಗಳು ಹೊರಗೋಡಿ ಬಂದಿದ್ದಾರೆ. ದಟ್ಟ ಹೊಗೆಯಿಂದಾಗಿ ಕೆಲ ಮಹಿಳಾ ಸಿಬ್ಬಂದಿಗಳಿಗೆ ಉಸಿರಾಟದ ತೊಂದರೆ ಎದುರಾಗಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನಾ ಸ್ಥಳಕ್ಕೆ ರಾಯಕೋಟೆ, ಡಂಕನಿಕೋಟೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದು, ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ.

ಟಾಟ ಫ್ಯಾಕ್ಟರಿಯಲ್ಲಿ ಭಾರಿ ಅಗ್ನಿ ಅವಘಡ Read More »

ಚಿತ್ರ ಕಲಾವಿದ ‘ವಿಜಯ ‘ ಸಿಂಧೂರ ಇನ್ನಿಲ್ಲ

ಸಮಗ್ರ ನ್ಯೂಸ್: ಅಂತರಾಷ್ಟ್ರೀಯ ಖ್ಯಾತಿಯ ಹಿರಿಯ ಕಲಾವಿದ ವಿಜಯ ಸಿಂಧೂ‌ರ್ ವಿಧಿವಶರಾಗಿದ್ದಾರೆ.ಇವರು ಜಮಖಂಡಿಯ ಸ್ವಗೃಹದಲ್ಲಿ ಮುಂಜಾನೆ ನಿಧನರಾಗಿದ್ದಾರೆ. ವಿಜಯ ಸಿಂಧೂರ ಅವರು 1940ರ ಜೂನ್ 7ರಂದು ಬಿಜಾಪುರ ಜಿಲ್ಲೆಯ ಬನಹಟ್ಟಿಯಲ್ಲಿ ಜನಿಸಿದರು. ತಂದೆ ಗಂಗಪ್ಪ, ತಾಯಿ ಬಸಮ್ಮ, ಬಾಲ್ಯದಿಂದಲೇ ಅವರು ಚಿತ್ರಕಲೆಯಲ್ಲಿ ಬಹಳ ಆಸಕ್ತ ವಹಿಸಿದ್ದರು. ಇಂಜಿನಿಯರ್ ಅಥವಾ ಡಾಕ್ಟರ್ ಆಗಬೇಕೆಂದು ಅಂದುಕೊಂಡಿದ್ದ ಅವರ ಮನಸ್ಸು ಚಿತ್ರಕಲೆಯತ್ತ ಸೆಳೆಯಿತು. ಅವರಿಗೆ ಕರ್ನಾಟಕ ಸರ್ಕಾರದ ವರ್ಣಶಿಲ್ಪಿ ವೆಂಕಟಪ್ಪ ಇಂದ್ರ ಲಲಿತ ಕಲಾ ಅಕಾಡೆಮಿ ಪ್ರಶಸ್ತಿ ಬಂದಿವೆ.ಬಾಂಬೆ ಆರ್ಟ್ ಸೊಸೈಟಿ

ಚಿತ್ರ ಕಲಾವಿದ ‘ವಿಜಯ ‘ ಸಿಂಧೂರ ಇನ್ನಿಲ್ಲ Read More »

ಬೆಳ್ತಂಗಡಿ: ರಾಜ್ಯ ಪ್ರಶಸ್ತಿ ‌ಹಿಂತಿರುಗಿಸಿದ ಗ್ರಾಮ ಆಡಳಿತಾಧಿಕಾರಿ| ಪ್ರಶಸ್ತಿ ಹಿಂತಿರುಗಿಸಲು ಅಚ್ಚರಿಯ ಕಾರಣ ನೀಡಿದ ಪ್ರಥ್ವಿರಾಜ್‌

ಸಮಗ್ರ ನ್ಯೂಸ್: ರಾಜ್ಯ ಸರಕಾರದ ಕಂದಾಯ ಇಲಾಖೆಯ ನೀಡುವ ವರ್ಷದ ಅತ್ಯುತ್ತಮ ಕಂದಾಯ ಅಧಿಕಾರಿ ಪ್ರಶಸ್ತಿಯನ್ನು ಬೆಳ್ತಂಗಡಿ ತಾಲೂಕಿನ ನಿಡ್ಲೆ ಗ್ರಾಮ ಪಂಚಾಯತ್ ಗ್ರಾಮ ಆಡಳಿತ ಅಧಿಕಾರಿ ಹಿಂದಿರುಗಿಸಿದ್ದಾರೆ. ಬೆಳ್ತಂಗಡಿ ತಾಲೂಕಿನ ನಿಡ್ಲೆ ಗ್ರಾಮಪಂಚಾಯತ್ ಗ್ರಾಮ ಆಡಳಿತ ಅಧಿಕಾರಿ ಪೃಥ್ವಿರಾಜ್.ಪಿ.ಶೆಟ್ಟಿ ಪ್ರಶಸ್ತಿ ಹಿಂದಿರುಗಿಸಿದ ಅಧಿಕಾರಿ, ರಾಜ್ಯ ಕಂದಾಯ ಇಲಾಖೆ ಪ್ರತಿ ವರ್ಷ ನೀಡುವ ವರ್ಷದ ಅತ್ಯುತ್ತಮ ಕಂದಾಯ ಅಧಿಕಾರಿ -2024 ಪ್ರಶಸ್ತಿ ಈ ಬಾರಿ ಪ್ರಥ್ವಿರಾಜ್ ಅವರಿಗೆ ಸಿಕ್ಕಿದೆ. ಆದರೆ ಅದನ್ನ ನಿರಾಕರಿಸಿ ಕಂದಾಯ ಇಲಾಖೆಯ ಆಯುಕ್ತರಿಗೆ

ಬೆಳ್ತಂಗಡಿ: ರಾಜ್ಯ ಪ್ರಶಸ್ತಿ ‌ಹಿಂತಿರುಗಿಸಿದ ಗ್ರಾಮ ಆಡಳಿತಾಧಿಕಾರಿ| ಪ್ರಶಸ್ತಿ ಹಿಂತಿರುಗಿಸಲು ಅಚ್ಚರಿಯ ಕಾರಣ ನೀಡಿದ ಪ್ರಥ್ವಿರಾಜ್‌ Read More »

ಜೈಲಿನಲ್ಲಿರುವ ಶಾಸಕ ಮುನಿರತ್ನ ಮನೆ ಮೇಲೆ ಎಸ್ಐಟಿ ದಾಳಿ

ಸಮಗ್ರ ನ್ಯೂಸ್: ಅತ್ಯಾಚಾರ, ಜಾತಿ ನಿಂದನೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಬಿಜೆಪಿ ಶಾಸಕ ಮುನಿರತ್ನ ಮನೆ ಮೇಲೆ ವಿಶೇಷ ತನಿಖಾ ತಂಡದ ಅಧಿಕಾರಿಗಳು ಇಂದು ಬೆಳ್ಳಂಬೆಳಗ್ಗೆ ದಾಳಿ ನಡೆಸಿದರು. ಬೆಂಗಳೂರಿನ ವೈಯಾಲಿಕಾವಲ್ ನಿವಾಸದ ಮೇಲೆ ಎಸ್ಐಟಿ ಎಸಿಪಿ ಕವಿತಾ ನೇತೃತ್ವದಲ್ಲಿ ದಾಳಿ ನಡೆಸಿದ ಅಧಿಕಾರಿಗಳ ತಂಡ ದಾಖಲೆಗಳ ಪರಿಶೀಲನೆ ನಡೆಸಿದೆ. ವೈಯಾಲಿಕಾವಲ್ ನಿವಾಸ ಸೇರಿದಂತೆ ಒಟ್ಟು 15 ಕಡೆಗಳಲ್ಲಿ ಎಸ್ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಎಫ್ಎಸ್ಎಲ್ ತಂಡದ ಜತೆಗೇ ಎಸ್ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ

ಜೈಲಿನಲ್ಲಿರುವ ಶಾಸಕ ಮುನಿರತ್ನ ಮನೆ ಮೇಲೆ ಎಸ್ಐಟಿ ದಾಳಿ Read More »

ಬೆಳ್ತಂಗಡಿ: ಅಕ್ರಮ ಕಸಾಯಿಖಾನೆಗೆ ಪೊಲೀಸ್ ದಾಳಿ| ಆರೋಪಿಗಳು ಪರಾರಿ

ಸಮಗ್ರ ನ್ಯೂಸ್: ಕೊಕ್ಕಡ ಗ್ರಾಮದಲ್ಲಿ ನಡೆಯುತ್ತಿದ್ದ ಅಕ್ರಮ ಕಸಾಯಿಖಾನೆಗೆ ಗುರುವಾರ ದಾಳಿ ನಡೆಸಿದ ಧರ್ಮಸ್ಥಳ ಪೊಲೀಸರು ಗೋಮಾಂಸ ವಶಪಡಿಸಿಕೊಂಡಿದ್ದಾರೆ. ಈ ಸಂದರ್ಭ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಬೆಳ್ತಂಗಡಿ ತಾಲೂಕು ಕೊಕ್ಕಡ ಗ್ರಾಮದ ಮಲ್ಲಿಗೆಮಜಲು ಎಂಬಲ್ಲಿನ ಉಸ್ಮಾನ್‌ ಅವರ ಅಡಿಕೆ ತೋಟದಲ್ಲಿ ಗೋಹತ್ಯೆಗೈದು ಮಾಂಸ ಮಾಡಿ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಸುಳಿವು ದೊರೆತ ಪೊಲೀಸರು ದಾಳಿ ನಡೆಸಿದ್ದಾರೆ. ಸ್ಥಳದಲ್ಲಿ ಸುಮಾರು 10 ಕೆ.ಜಿ. ಜಾನುವಾರಿನ ಮಾಂಸ, ಜಾನುವಾರಿನ ದೇಹದ ಇತರ ಭಾಗಗಳು, ಬ್ಯಾಟರಿ ಚಾಲಿತ ತೂಕದ ಯಂತ್ರ-1,

ಬೆಳ್ತಂಗಡಿ: ಅಕ್ರಮ ಕಸಾಯಿಖಾನೆಗೆ ಪೊಲೀಸ್ ದಾಳಿ| ಆರೋಪಿಗಳು ಪರಾರಿ Read More »

ಚುನಾವಣಾ ಬಾಂಡ್ ಗಳ ಮೂಲಕ ಹಣ ಸುಲಿಗೆ ಆರೋಪ| ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ದ ಎಫ್ಐಆರ್ ದಾಖಲಿಸಲು ಕೋರ್ಟ್ ಸೂಚನೆ

ಸಮಗ್ರ ನ್ಯೂಸ್: ಚುನಾವಣಾ ಬಾಂಡ್ ಮೂಲಕ ಹಣ ಸುಲಿಗೆ ಮಾಡಿರುವ ಆರೋಪ ಸಂಬಂಧ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ FIR ದಾಖಲಿಸಲು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಬೆಂಗಳೂರಿನ ತಿಲಕ್ ನಗರ ಪೊಲೀಸರಿಗೆ ಆದೇಶ ನೀಡಿದೆ. ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣದಲ್ಲಿ ಜನಪ್ರತಿನಿಧಿಗಳ ಕೋರ್ಟ್ ನೀಡಿದ್ದ ಆದೇಶದ ಸ್ವರೂಪದಲ್ಲೇ ಕೋರ್ಟ್ ಸೀತಾರಾಮನ್ ಅವರ ವಿಚಾರದಲ್ಲೂ ಆದೇಶ ಕೊಟ್ಟಿದೆ. ಚುನಾವಣಾ ಬಾಂಡ್​​​ ಗಳ ಮೂಲಕ ಬೆದರಿಸಿ ಹಣವನ್ನು ಸುಲಿಗೆ ಮಾಡಲಾಗಿದೆ. ಹೀಗಾಗಿ ನಿರ್ಮಲಾ ಸೀತಾರಾಮನ್ ವಿರುದ್ಧ

ಚುನಾವಣಾ ಬಾಂಡ್ ಗಳ ಮೂಲಕ ಹಣ ಸುಲಿಗೆ ಆರೋಪ| ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ದ ಎಫ್ಐಆರ್ ದಾಖಲಿಸಲು ಕೋರ್ಟ್ ಸೂಚನೆ Read More »

Helth tips: ಕೊತ್ತಂಬರಿ ಸೊಪ್ಪಿನ ಜ್ಯೂಸ್ ಕುಡಿಯುವುದರಿಂದ ಆಗುವ ಲಾಭಗಳೇನು ಗೊತ್ತಾ?

ಇಲ್ಲಿದೆ ಸಂಪೂರ್ಣ ಮಾಹಿತಿ ಸಮಗ್ರ ನ್ಯೂಸ್:ಅಧಿಕ ತೂಕದ ಸಮಸ್ಯೆ ಎಲ್ಲರನ್ನೂ ಕಾಡುತ್ತಿದೆ. ಈ ಸಮಸ್ಯೆಯಿಂದ ಬಳಲುತ್ತಿರುವವರು ಕೊತ್ತಂಬರಿ ಸೊಪ್ಪಿನ ರಸವನ್ನು ಸೇವಿಸುವುದರಿಂದ ಸುಲಭವಾಗಿ ತೂಕವನ್ನು ಕಡಿಮೆಮಾಡಬಹುದು,ಮೂಳೆಯ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದು ಮೆಗ್ನಿಸಿಯಮ್ನಲ್ಲಿ ಸಮೃದ್ಧವಾಗಿದೆ.ಇದರಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದನ್ನು ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ,ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರು ಕೊತ್ತಂಬರಿ ಸೊಪ್ಪಿನ ರಸವನ್ನು ಸೇವಿಸುವುದರಿಂದ ಪ್ರಯೋಜನ ಪಡೆಯಬಹುದು ಹಾಗೂ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜೀರ್ಣಕ್ರಿಯೆ ಸಮಸ್ಯೆ ಇದ್ದಲ್ಲಿ ಹಸಿ ಕೊತ್ತಂಬರಿ ಸೊಪ್ಪಿನ ರಸವನ್ನು

Helth tips: ಕೊತ್ತಂಬರಿ ಸೊಪ್ಪಿನ ಜ್ಯೂಸ್ ಕುಡಿಯುವುದರಿಂದ ಆಗುವ ಲಾಭಗಳೇನು ಗೊತ್ತಾ? Read More »

ಪಂಜ: ಪೋಷಣ್ ಮಾಸಾಚರಣೆ

ಸಮಗ್ರ ನ್ಯೂಸ್:ಪೋಷಣ್‌ ಮಾಸಾಚರಣೆ ಕರ್ನಾಟಕ ಸರ್ಕಾರ ದ.ಕ ಜಿ.ಪಂ ಸುಳ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಸುಳ್ಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪಂಜ, ತುಳಸಿ ಸ್ತ್ರೀ ಶಕ್ತಿ ಗೊಂಚಲು ಸಮಿತಿ ಪಂಜ ಇದರ ಸಂಯುಕ್ತ ಆಶ್ರಯದಲ್ಲಿ ಸೆ.24 ರಂದು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಪಾರ್ವತಿ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್

ಪಂಜ: ಪೋಷಣ್ ಮಾಸಾಚರಣೆ Read More »

ಮುಡಾ ಅಕ್ರಮ ಹಗರಣ| ಸಿಎಂ ಸಿದ್ದರಾಮಯ್ಯ ಸೇರಿ ಐದು ಮಂದಿ ವಿರುದ್ಧ ಎಫ್ಐಆರ್

ಸಮಗ್ರ ನ್ಯೂಸ್: ಮುಡಾದಲ್ಲಿ ನಡೆದಿದೆ ಎನ್ನಲಾಗಿರುವ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ತನಿಖೆಗೆ ಜನಪ್ರತಿನಿಧಿಗಳ ನ್ಯಾಯಾಲಯ ಮೈಸೂರು ಲೋಕಾಯುಕ್ತಕ್ಕೆ ಆದೇಶಿಸಿದೆ. ಕೋರ್ಟ್​ ಆದೇಶದ ಮೇರೆಗೆ ಮೈಸೂರು ಲೋಕಾಯುಕ್ತದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಎಫ್ ​ಐಆರ್ ದಾಖಲಾಗಿದೆ. ಜನಪ್ರತಿನಿಧಿಗಳ ವಿಶೇಷ ಕೋರ್ಟ್​ ಆದೇಶದಂತೆ ಲೋಕಾಯುಕ್ತ ಎಡಿಜಿಪಿ ಮನೀಶ್ ಖರ್ಬೀಕರ್ ಸೂಚನೆ ಮೇರೆಗೆ ಮೈಸೂರು ಲೋಕಾಯುಕ್ತ SP ಉದೇಶ್ ನೇತೃತ್ವದಲ್ಲಿ ಎಫ್ ಐಆರ್ ದಾಖಲಾಗಿದೆ. ಸಿಆರ್‌ ಪಿಸಿ ಅಡಿಯಲ್ಲಿ ಎಫ್ ​ಐಆರ್​ ದಾಖಲಿಸಿ ಎಂದು ಕೋರ್ಟ್​

ಮುಡಾ ಅಕ್ರಮ ಹಗರಣ| ಸಿಎಂ ಸಿದ್ದರಾಮಯ್ಯ ಸೇರಿ ಐದು ಮಂದಿ ವಿರುದ್ಧ ಎಫ್ಐಆರ್ Read More »

ತಿರುಪತಿ ಲಡ್ಡು ವಿವಾದ/ ಇಂದಿನಿಂದ ತಿರುಪತಿ ದೇವಾಲಯದ ಪವಿತ್ರೋತ್ಸವ

ಸಮಗ್ರ ನ್ಯೂಸ್‌: ತಿರುಪತಿ ಲಡ್ಡು ಪ್ರಸಾದಕ್ಕೆ ಪ್ರಾಣಿಗಳ ಕೊಬ್ಬು ಮಿಶ್ರಣ ವಿವಾದಕ್ಕೆ ಸಂಬಂಧಿಸಿದಂತೆ ಇಂದಿನಿಂದ ನಾಲ್ಕು ದಿನ ತಿರುಪತಿ ದೇವಾಲಯದ ಪವಿತ್ರೋತ್ಸವ ನಡೆಯುತ್ತಿದೆ. ಇಂದಿನಿಂದ ಸೋಮವಾರದವರೆಗೆ, ಪ್ರತಿ ದಿನ ಸಂಜೆ 6:30 ರ ಹೊತ್ತಿಗೆ ವೈಯಾಲಿಕಾವಲ್‌ನಲ್ಲಿರುವ ಟಿಟಿಡಿ ದೇವಾಲಯದಲ್ಲಿ ಶುದ್ಧಿಕಾರ್ಯ ನಡೆಯಲಿದೆ. ಮೊದಲ ದಿನ ಆಚಾರ್ಯವರನಮ್, ಎರಡನೇ ದಿನ ಹೋಮ, ಮೂರನೇ ದಿನ ಪವಿತ್ರ ಸಮರ್ಪಣ ಮತ್ತು ನಾಲ್ಕನೇ ದಿನ ಪವಿತ್ರೋತ್ಸವ ನಡೆಸಲಾಗುವುದು. ಈ ಕಾರ್ಯಕ್ರಮಗಳಿಗೆ ತಿರುಪತಿಯಿಂದ 10 ಅರ್ಚಕರು ಬೆಂಗಳೂರಿಗೆ ಆಗಮಿಸಲಿದ್ದಾರೆ. ಅರ್ಚಕರು ಮೂರು ದಿನದ

ತಿರುಪತಿ ಲಡ್ಡು ವಿವಾದ/ ಇಂದಿನಿಂದ ತಿರುಪತಿ ದೇವಾಲಯದ ಪವಿತ್ರೋತ್ಸವ Read More »