September 2024

ಮಂಗಳೂರು: ಹೆತ್ತತಾಯಿಯನ್ನು ರಕ್ಷಿಸಲು ‘ಬಾಹುಬಲಿ’ಯಾದ ಮಗಳು| ಅಪಘಾತದಲ್ಲಿ ಗಾಯಗೊಂಡ ತಾಯಿ ಮಗಳ ಕಾರಣ ಬಚಾವ್

ಸಮಗ್ರ ನ್ಯೂಸ್: ರಸ್ತೆ ದಾಟುತ್ತಿದ್ದ ಮಹಿಳೆಗೆ ಆಟೋ ಡಿಕ್ಕಿ ಹೊಡೆದು ಮಹಿಳೆ ಗಂಭೀರವಾಗಿ ಗಾಯಗೊಂಡ ಘಟನೆ ಮಂಗಳೂರು ಹೊರವಲಯದ ಮುಲ್ಕಿ ಬಳಿಯ ಕಿನ್ನಿಗೋಳಿ‌ ರಾಮನಗರದಲ್ಲಿ ನಡೆದಿದೆ. ರಾಜರತ್ನಪುರ ನಿವಾಸಿ 35 ವರ್ಷದ ಚೇತನ ಗಂಭೀರವಾಗಿ ಗಾಯಗೊಂಡಿದ್ದಾರೆ. ಮಹಿಳೆ ಏಕಾಏಕಿ ರಸ್ತೆ ದಾಟಲು ಮುಂದಾಗಿದ್ದು, ಈ ವೇಳೆ ಕಟೀಲಿನಿಂದ ಕಿನ್ನಿಗೋಳಿ‌ ಕಡೆಗೆ ಬರುತ್ತಿದ್ದ ಆಟೋ, ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಪಿಗ್ಮಿ ಕಲೆಕ್ಷನ್ ಮುಗಿಸಿ ಟ್ಯೂಶನ್ ಗೆ ತೆರಳಿದ್ದ ಹೈಸ್ಕೂಲ್ ಓದುವ ಮಗಳನ್ನ ಕರೆತರಲು ಟ್ಯೂಷನ್ ಸೆಂಟರ್ ನತ್ತ […]

ಮಂಗಳೂರು: ಹೆತ್ತತಾಯಿಯನ್ನು ರಕ್ಷಿಸಲು ‘ಬಾಹುಬಲಿ’ಯಾದ ಮಗಳು| ಅಪಘಾತದಲ್ಲಿ ಗಾಯಗೊಂಡ ತಾಯಿ ಮಗಳ ಕಾರಣ ಬಚಾವ್ Read More »

ಪಶ್ಚಿಮದಿಂದ ಪೂರ್ವಕ್ಕೆ ಹರಿದ ನೇತ್ರಾವತಿ| ಎತ್ತಿನಹೊಳೆ ಯೋಜನೆಗೆ ಅಧಿಕೃತ ಚಾಲನೆ

ಸಮಗ್ರ ನ್ಯೂಸ್: ಸಕಲೇಶಪುರ ತಾಲೂಕಿನ ಹೆಬ್ಬನಹಳ್ಳಿ ದೊಡ್ಡನಗರದ ಪಂಪ್ ಹೌಸ್‌ನಲ್ಲಿ ನೀರೆತ್ತುವ ಪಂಪ್‌ಗಳಿಗೆ ಶುಕ್ರವಾರ ಚಾಲನೆ ದೊರಕಿದ ಕೆಲ ಹೊತ್ತಿನಲ್ಲಿ ಸುಮಾರು 6 ಕಿಲೋಮೀಟರ್‌ ದೂರದ ಹೆಬ್ಬನಹಳ್ಳಿಯಲ್ಲಿರುವ ನೀರು ವಿತರಣೆಯ ನಾಲ್ಕು ತೊಟ್ಟಿಗಳಲ್ಲಿ ನೀರು ಉಕ್ಕೇರಿತು. ಇದರೊಂದಿಗೆ ಬಯಲುಸೀಮೆಯ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆಯ ದಶಕದ ಕನಸು ನನಸಾದ ಸಂಭ್ರಮ ಜನರಲ್ಲಿ ಉಕ್ಕಿ ಹರಿಯಿತು. ಪಶ್ಚಿಮಕ್ಕೆ ಹರಿದು ನೇತ್ರಾವತಿ ನದಿಯಾಗಿ ಕರಾವಳಿಯಲ್ಲಿ ಸಾಗುತ್ತಿದ್ದ ಎತ್ತಿನ ಹೊಳೆ, ಕಾಡುಮನೆ ಹೊಳೆ, ಹೊಂಗಡ ಹಳ್ಳ, ಕೇರಿ ಹೊಳೆ ಶುಕ್ರವಾರದಿಂದ

ಪಶ್ಚಿಮದಿಂದ ಪೂರ್ವಕ್ಕೆ ಹರಿದ ನೇತ್ರಾವತಿ| ಎತ್ತಿನಹೊಳೆ ಯೋಜನೆಗೆ ಅಧಿಕೃತ ಚಾಲನೆ Read More »

‘ಲಕ್ಕಿ ಕೃಷ್ಣ’ ಫೋಟೋ ಸ್ಪರ್ಧೆ ಇಂದು ಫಲಿತಾಂಶ

ಸಮಗ್ರ ನ್ಯೂಸ್: ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ‘ಸಮಗ್ರ ಮೀಡಿಯಾ ನೆಟ್ವರ್ಕ್’ ಹಾಗೂ ‘ಸಮಗ್ರ ಸಮಾಚಾರ’ ಆಯೋಜಿಸಿದ್ದ ‘ಲಕ್ಕಿ ಕೃಷ್ಣ’ ಫೋಟೋ ಸ್ಪರ್ಧೆಯ ಫಲಿತಾಂಶ ಇಂದು ಪ್ರಕಟಗೊಳ್ಳಲಿದೆ. ಸಮಗ್ರ ಸಮಾಚಾರ ಪೇಸ್ ಬುಕ್ ಪೇಜ್ ನಲ್ಲಿ ಸಂಜೆ 6 ಗಂಟೆಗೆ ಸ್ಪರ್ಧೆಯ ಫಲಿತಾಂಶ ನೇರಪ್ರಸಾರಗೊಳ್ಳಲಿದೆ.

‘ಲಕ್ಕಿ ಕೃಷ್ಣ’ ಫೋಟೋ ಸ್ಪರ್ಧೆ ಇಂದು ಫಲಿತಾಂಶ Read More »

ಜಮ್ಮು ಕಾಶ್ಮೀರ ವಿಧಾನಸಭಾ ಚುನಾವಣೆ/ ಪ್ರಣಾಳಿಕೆ ಬಿಡುಗಡೆ ಮಾಡಿದ ಬಿಜೆಪಿ

ಸಮಗ್ರ ನ್ಯೂಸ್: ಜಮ್ಮು ಕಾಶ್ಮೀರ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ತನ್ನ ಪ್ರಣಾಳಿಕೆಯನ್ನು ಬಿಡುಗೊಳಿಸಿದೆ. ಪ್ರಣಾಳಿಕೆ ಬಿಡುಗಡೆ ಮಾಡಿದ ನಂತರ ಕೇಂದ್ರ ಗೃಹ ಸಚಿವ ಅಮಿತ್ ಷಾ ಮಾತನಾಡಿ, ಜಮ್ಮು ಮತ್ತು ಕಾಶ್ಮೀರವು ನಮ್ಮ ಪಕ್ಷಕ್ಕೆ ಅಗತ್ಯವಾಗಿದೆ. ನಾವು ಯಾವಾಗಲೂ ಈ ಪ್ರದೇಶವನ್ನು ಭಾರತದೊಂದಿಗೆ ಇರಲು ಬಯಸುತ್ತೇವೆ ಎಂದು ಹೇಳಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಅಧಿಕಾರಕ್ಕೆ ಬಂದರೆ ‘ಮಾ ಸಮ್ಮಾನ್ ಯೋಜನೆ’ ಅಡಿಯಲ್ಲಿ ಪ್ರತಿ ಕುಟುಂಬದ ಹಿರಿಯ ಮಹಿಳೆಗೆ ವರ್ಷಕ್ಕೆ ₹ 18,000 ನೀಡುವುದಾಗಿ ಬಿಜೆಪಿ ಭರವಸೆ

ಜಮ್ಮು ಕಾಶ್ಮೀರ ವಿಧಾನಸಭಾ ಚುನಾವಣೆ/ ಪ್ರಣಾಳಿಕೆ ಬಿಡುಗಡೆ ಮಾಡಿದ ಬಿಜೆಪಿ Read More »

ಇನ್ಸ್ಟಾಗ್ರಾಮ್ ಸೆಲೆಬ್ರಿಟಿ ಯೂನೀಸ್ ಪೊಲೀಸರ ವಶ

ಸಮಗ್ರ ನ್ಯೂಸ್: ಇನ್ಸ್ಟಾಗ್ರಾಮ್ ಸ್ಟಾರ್ ಯೂನೀಸ್ ಝರೂರಾ ಎಂಬಾತನನ್ನು ಬೆಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇತ ಬೇರೆ ಬೇರೆ ದೇಶಗಳಿಗ ತೆರಳಿ ಸರ್ಪ್ರೈಸ್ ಗಿಫ್ಟ್ಗಳನ್ನ ಕೊಡುತ್ತಿದ್ದ. ಹೀಗಾಗಿ ಬೆಂಗಳೂರಿನ ಎಂಜಿ ರಸ್ತೆಗೂ ಬಂದಿದ್ದ. ಸರಿಯಾದ ಉತ್ತರ ನೀಡಿದವರಿಗೆ ದುಬಾರಿ ಬೆಲೆಯ ಐಫೋನ್ನನ್ನು ಗಿಫ್ಟ್ ಕೊಡುತ್ತಿದ್ದ. ಅಷ್ಟೇ ಅಲ್ಲದೆ ಎಂಜಿ ರಸ್ತೆಯಲ್ಲಿ ದಿ.ಪುನೀತ್ ರಾಜ್ ಕುಮಾರ್ ಅವರ ಫೋಟೋ ಅನಾವರಣ ಮಾಡಿದ್ದ. ಇದೀಗ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈತ ಬೆಂಗಳೂರಿಗೆ ಬಂದಿದರಿಂದ ಇತನ ಅಭಿಮಾನಿಗಳು ನಡು ರಸ್ತೆಯಲ್ಲಿಯೇ ಗುಂಪು

ಇನ್ಸ್ಟಾಗ್ರಾಮ್ ಸೆಲೆಬ್ರಿಟಿ ಯೂನೀಸ್ ಪೊಲೀಸರ ವಶ Read More »

ದ.ಕ ಜಿಲ್ಲೆಯ 386 ಕಡೆ ಸಾರ್ವಜನಿಕ ಗಣೇಶೋತ್ಸವ ಆಚರಣೆ| 30 ಕಡೆ ಅತಿ ಸೂಕ್ಷ್ಮ ಮೆರವಣಿಗೆ ಗುರುತು| ಪೊಲೀಸ್ ಇಲಾಖೆಯಿಂದ ಕಟ್ಟುನಿಟ್ಟಿನ ಮಾರ್ಗಸೂಚಿ

ಸಮಗ್ರ ನ್ಯೂಸ್: ದ.ಕ. ಜಿಲ್ಲೆಯಲ್ಲಿ ಈ ಬಾರಿ ಒಟ್ಟು 386 ಕಡೆ ಸಾರ್ವಜನಿಕ ಗಣೇಶೋತ್ಸವ ಜರಗಲಿದ್ದು ಇದರಲ್ಲಿ 30 ಕಡೆಗಳ ಗಣೇಶೋತ್ಸವ ಮೆರವಣಿಗೆಗಳನ್ನು ಅತೀ ಸೂಕ್ಷ್ಮವೆಂದು ಪೊಲೀಸ್‌ ಇಲಾಖೆ ಗುರುತಿಸಿದೆ. ಮಂಗಳೂರು ನಗರ ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿಯಲ್ಲಿ ಸೆ. 6ರಿಂದ ಸೆ.17ರ ವರೆಗೆ ಒಟ್ಟು 165 ಕಡೆ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿ ವಿಸರ್ಜನೆ ಮಾಡಲಾಗುತ್ತದೆ. ಇದರಲ್ಲಿ 22 ಅತೀ ಸೂಕ್ಷ್ಮ, 64 ಸೂಕ್ಷ್ಮ ಮತ್ತು 79 ಸಾಮಾನ್ಯ ಗಣೇಶ ಪ್ರತಿಷ್ಠಾಪನಾ ಮೆರವಣಿಗೆಯೆಂದು ಪರಿಗಣಿಸಲಾಗಿದೆ. ದ.ಕ ಜಿಲ್ಲಾ

ದ.ಕ ಜಿಲ್ಲೆಯ 386 ಕಡೆ ಸಾರ್ವಜನಿಕ ಗಣೇಶೋತ್ಸವ ಆಚರಣೆ| 30 ಕಡೆ ಅತಿ ಸೂಕ್ಷ್ಮ ಮೆರವಣಿಗೆ ಗುರುತು| ಪೊಲೀಸ್ ಇಲಾಖೆಯಿಂದ ಕಟ್ಟುನಿಟ್ಟಿನ ಮಾರ್ಗಸೂಚಿ Read More »

ನಾನು ಪವಿತ್ರಾಗೌಡ ಮದುವೆ ಆಗಿಲ್ಲ, ಆದರೆ ಇಬ್ಬರು ಜತೆಯಲ್ಲಿ ಇದ್ದೀವಿ: ದರ್ಶನ್

ಸಮಗ್ರ ನ್ಯೂಸ್: ಬಳ್ಳಾರಿ ಜೈಲಿನಲ್ಲಿ ಇರುವ ದರ್ಶನ್ ಇದೀಗ ನಾನು ಪವಿತ್ರಾಗೌಡ ಮದುವೆ ಆಗಿಲ್ಲ, ಆದರೆ ಇಬ್ಬರು ಜತೆಯಲ್ಲಿ ಇದ್ದೀವಿ ಎಂದು ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್‌, ಗೆಳತಿ ಪವಿತ್ರಾಗೌಡ ಸೇರಿ 17 ಮಂದಿ ಜೈಲು ಪಾಲಾಗಿದ್ದಾರೆ. ರೇಣುಕಾಸ್ವಾಮಿ ಪವಿತ್ರಾಗೌಡಗೆ ಅಶ್ಲೀಲ ಮಸೇಜ್‌ಗಳನ್ನು ಮಾಡಿದ್ದಕ್ಕೆ, ಆತನನ್ನು ಕಿಡ್ನ್ಯಾಪ್‌ ಮಾಡಿ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಲಾಗಿತ್ತು. ಇದೀಗ ಇದೇ ಪ್ರಕರಣದಲ್ಲಿ ನಟ ದರ್ಶನ್‌ ಗ್ಯಾಂಗ್‌ ಕಂಬಿ ಎಣಿಸುತ್ತಿದ್ದಾರೆ. ಡಿಸಿಪಿಯಿಂದ

ನಾನು ಪವಿತ್ರಾಗೌಡ ಮದುವೆ ಆಗಿಲ್ಲ, ಆದರೆ ಇಬ್ಬರು ಜತೆಯಲ್ಲಿ ಇದ್ದೀವಿ: ದರ್ಶನ್ Read More »

ವಿನೇಶ್ ಪೋಗಟ್ ಮತ್ತು ಬಜರಂಗ್ ಪೂನಿಯಾ ಕಾಂಗ್ರೆಸ್ ಸೇರ್ಪಡೆ

ಸಮಗ್ರ ನ್ಯೂಸ್: ಕುಸ್ತಿಪಟುಗಳಾದ ವಿನೇಶ್ ಪೋಗಟ್ ಮತ್ತು ಬಜರಂಗ್ ಪೂನಿಯಾ ಇಂದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಪಕ್ಷಕ್ಕೆ ಸೇರ್ಪಡೆಯಾಗುವ ತಮ್ಮ ರೈಲ್ವೆ ಇಲಾಖೆಯ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ. ಮುಂದೆ ನಡೆಯಲಿರುವ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಇವರಿಬ್ಬರೂ ಸ್ಪರ್ಧಿಸುವ ಸಾಧ್ಯತೆ ಇದೆ.

ವಿನೇಶ್ ಪೋಗಟ್ ಮತ್ತು ಬಜರಂಗ್ ಪೂನಿಯಾ ಕಾಂಗ್ರೆಸ್ ಸೇರ್ಪಡೆ Read More »

ಕಡಬ: ಮನೆಯೊಂದರ ಪಕ್ಕ‌ ಅಕ್ರಮ ಕಸಾಯಿಖಾನೆ| ಗೋ ವಧೆ ನಡೆಸುತ್ತಿದ್ದವರ ಮೇಲೆ ಪೊಲೀಸರ ದಿಢೀರ್ ದಾಳಿ; ಇಬ್ಬರು ವಶಕ್ಕೆ

ಸಮಗ್ರ ನ್ಯೂಸ್: ಮನೆಯೊಂದರ ಹಿಂಬದಿ ಅಕ್ರಮವಾಗಿ ‌ನಡೆಯುತ್ತಿದ್ದ ಕಸಾಯಿಖಾನೆಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿದ್ದು ಇಬ್ಬರನ್ನು ವಶಕ್ಕೆ ಪಡೆದ ಘಟನೆ ಸೆ.6 ರ ಮುಂಜಾನೆ ನಡೆದಿದೆ. ತಾಲೂಕಿನ ಕುಟ್ರುಪ್ಪಾಡಿ ಗ್ರಾ.ಪಂ ವ್ಯಾಪ್ತಿಯ ಕಾರ್ಕಳ ಎಂಬಲ್ಲಿ ಮನೆಯೊಂದರಲ್ಲಿ ಜಾನುವಾರು ವಧೆ ಮಾಡುತ್ತಿರುವ ಕುರಿತು ಬಜರಂಗದಳಕ್ಕೆ ಮಾಹಿತಿ ಲಭಿಸಿತ್ತು. ಪೊಲೀಸರಿಗೆ ಮಾಹಿತಿ ರವಾನಿಸಿದ ಮೇರೆಗೆ ಕಡಬ ಠಾಣಾ ಎಸ್.ಐ ನೇತೃತ್ವದ ಪೊಲೀಸರು ದಾಳಿ ಮಾಡಿರುವುದಾಗಿ ತಿಳಿದು ಬಂದಿದೆ.ಸ್ಥಳದಲ್ಲಿ ಗೋವಧೆ ಮಾಡಲು ಬಳಸಿದ ಸಾಧನ, ದನದ ರುಂಡ, ಸುಮಾರು

ಕಡಬ: ಮನೆಯೊಂದರ ಪಕ್ಕ‌ ಅಕ್ರಮ ಕಸಾಯಿಖಾನೆ| ಗೋ ವಧೆ ನಡೆಸುತ್ತಿದ್ದವರ ಮೇಲೆ ಪೊಲೀಸರ ದಿಢೀರ್ ದಾಳಿ; ಇಬ್ಬರು ವಶಕ್ಕೆ Read More »

ಮಂಗಳೂರು: ಯೆಯ್ಯಾಡಿ ಬಳಿ ಬೈಕ್ ಸ್ಕಿಡ್| ಯುವಕರಿಬ್ಬರು ದಾರುಣ ಸಾವು

ಸಮಗ್ರ ನ್ಯೂಸ್: ಬೈಕ್ ಸ್ಕಿಡ್ ಆಗಿ ಇಬ್ಬರು ಯುವಜರು ಸಾವನ್ನಪ್ಪಿರುವ ಘಟನೆ ಮಂಗಳೂರು ನಗರದ ಯೆಯ್ಯಾಡಿ ಏರ್ಪೋರ್ಟ್ ರೋಡಲ್ಲಿ ಸೆ.5ರ ತಡರಾತ್ರಿ ನಡೆದಿದೆ. ಗುರುವಾರ ತಡರಾತ್ರಿ ಯೆಯ್ಯಾಡಿ ಸಮೀಪದ ಹರಿಪದವು ಎಂಬಲ್ಲಿ ಅನಾಹುತ ನಡೆದಿದೆ. ಕೋಡಿಕಲ್ ನಿವಾಸಿ ಕಾಶೀನಾಥ್(17) ಮತ್ತು ಉಪ್ಪಿನಂಗಡಿಯ ಚೇತನ್(24) ಮೃತ ದುರ್ದೈವಿ. ಇವರಿಬ್ಬರಿದ್ದ ಬೈಕ್ ಲಾರಿಯೊಂದಕ್ಕೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದಾಗ ಚಾಲಕನ ನಿಯಂತ್ರಣ ತಪ್ಪಿ ಬೈಕ್ ಉರುಳಿಬಿದ್ದಿದೆ. ಇದರಿಂದ ರಸ್ತೆಗೆ ಎಸೆಯಲ್ಪಟ್ಟ ಇಬ್ಬರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಸಂಚಾರಿ ಪೊಲೀಸರು ಪ್ರಕರಣ ದಾಖಲು

ಮಂಗಳೂರು: ಯೆಯ್ಯಾಡಿ ಬಳಿ ಬೈಕ್ ಸ್ಕಿಡ್| ಯುವಕರಿಬ್ಬರು ದಾರುಣ ಸಾವು Read More »