ಇಲ್ಲಿದೆ ಸಂಪೂರ್ಣ ಮಾಹಿತಿ
ಸಮಗ್ರ ನ್ಯೂಸ್: ಬಾರ್ಲಿಯಲ್ಲಿ ಯಥೇಚ್ಛವಾದ ವಿಟಮಿನ್ ಗಳು, ಖನಿಜಾಂಶಗಳು ಮತ್ತು ಕಾರ್ಬೋಹೈಡ್ರೆಟ್ ಅಂಶಗಳು ಅಡಗಿವೆ.ಆಂಟಿ – ಆಕ್ಸಿಡೆಂಟ್ ಗಳ ಮಹಾ ಪೂರವೇ ತುಂಬಿರುವ ಬಾರ್ಲಿ ನೀರಿನಲ್ಲಿ ಕ್ಯಾನ್ಸರ್ ರೋಗಕ್ಕೆ ಕಾರಣವಾಗುವ ಫ್ರೀ ರಾಡಿಕಲ್ ಗಳ ಜೊತೆ ಹೋರಾಡುವ ಶಕ್ತಿ ಇದೆ.
ಮಧುಮೇಹಿಗಳಿಗೆ ಬಾರ್ಲಿ ನೀರು ಅಮೃತ ಇದ್ದಂತೆ ಸಕ್ಕರೆ ಅಂಶವನ್ನು ಸಮತೋಲನವಾಗಿ ಕಾಪಾಡುವುದಲ್ಲದೆ, ಅವರ ದೇಹ ಹೆಚ್ಚಿನ ಕಾರ್ಬೋಹೈಡ್ರೆಟ್ ಅಂಶಗಳನ್ನು ಹೀರಿಕೊಳ್ಳುವುದನ್ನು ತಡೆಯುತ್ತದೆ.ನಿಮ್ಮ ಹೃದಯದ ಆರೋಗ್ಯ ಕಾಪಾಡುತ್ತದೆ.ಕಿಡ್ನಿ ಕಲ್ಲುಗಳ ಸಮಸ್ಯೆಯಿಂದ ಮುಕ್ತಿ ನೀಡುತ್ತದೆ.
ವಿಟಮಿನ್ ‘ಸಿ’ ಅಂಶ ಇದು ಸಹಜವಾಗಿಯೇ ನಿಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ನಿಮಗೆ ಆಗಾಗ ಎದುರಾಗುವ ಶೀತ ಮತ್ತು ಕೆಮ್ಮು ಗಳಂತಹ ಸಮಸ್ಯೆಗಳನ್ನು ದೂರವಿಡುತ್ತದೆ. ನೀವು ಆಗಾಗ ಹುಷಾರು ತಪ್ಪುವುದು ಕಡಿಮೆಯಾಗುತ್ತದೆ.ಕ್ಯಾಲ್ಸಿಯಂ, ಕಾಪರ್ ಮತ್ತು ಫೋಸ್ಫೋರ್ಸ್, ಮ್ಯಾಂಗನೀಸ್ ಅಂಶ ಇರುವುದರಿಂದ ನಿಮ್ಮ ಮೂಳೆಗಳ ಬೆಳವಣಿಗೆಗೂ ಸಹಕಾರಿ.
ಮೂತ್ರ ನಾಳದ ಸೋಂಕುಗಳಿಂದ ತಡೆಗಟ್ಟುತ್ತದೆ.ನಯಾಸಿನ್, ಥಯಾಮಿನ್ ಮತ್ತು ಪ್ರೊ ಸಿಯಾನೈಡಿನ್ ಬಿ ೩ ಅಂಶಗಳು ನಿಮ್ಮ ಕೂದಲಿನ ಆರೋಗ್ಯಕ್ಕೆ ಬಹಳ ಸಹಕಾರಿಯಾಗಿರುತ್ತವೆ.ಇದರಲ್ಲಿರುವ ಕಬ್ಬಿಣ ಮತ್ತು ಕಾಪರ್ ಅಂಶದಿಂದ ಕೆಂಪು ರಕ್ತ ಕಣಗಳು ಬಹಳ ಬೇಗನೆ ವೃದ್ಧಿಗೊಂಡು ನಿಮ್ಮ ಕೂದಲು ಸೊಂಪಾಗಿ ಮತ್ತು ಸೊಗಸಾಗಿ ಬೆಳೆಯಲು ಸಹಾಯವಾಗುತ್ತದೆ.