ಸಮಗ್ರ ನ್ಯೂಸ್: ನಿತ್ಯ ಜೀವನದಲ್ಲಿ ಗ್ರಹಗಳು, ರಾಶಿ, ನಕ್ಷತ್ರಗಳು ಸಾಮಾನ್ಯರ ಮೇಲೆ ಅಸಾಮಾನ್ಯ ಪ್ರಭಾವ ಬೀರುತ್ತವೆ ಎಂಬುದು ಶಾಸ್ತ್ರ ನಂಬಿಕೆ. ದಿನಚರಿ ಆರಂಭದಲ್ಲಿ ಜ್ಯೋತಿಷ ಶಾಸ್ತ್ರವು ರಾಶಿಗಳ ಫಲವನ್ನು ತಿಳಿದುಕೊಳ್ಳಲು ಸಲಹೆ ನೀಡುತ್ತದೆ. ಈ ವಾರ (ಸೆ.29-ಅ.05) ಯಾವ ರಾಶಿಗಳಿಗೆ ಶುಭ? ಯಾರಿಗೆ ಲಾಭ? ತರುತ್ತದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಮೇಷ ರಾಶಿ:
ಅಮಾವಾಸ್ಯೆ ನಂತರ ಕಾಲರಾತ್ರಿಯೆಂಬ ದೇವಿಯು ಶರದ್ರುತುವಿನಲ್ಲಿ ಉದಯಿಸಿ ನವರಾತ್ರಿ ಆರಂಭವಾಗುತ್ತದೆ. ಈ ಪರ್ವವು ಮೇಷ ರಾಶಿಯವರಿಗೆ ಅತ್ಯಂತ ಲಾಭವನ್ನು ತರುತ್ತದೆ. ಮಾತಾಪಿತರನ್ನು ವಂದಿಸಿ. ನಿಮ್ಮ ಕುಲಾಚಾರದಂತೆ ಈ ಪಿತೃಪಕ್ಷದಲ್ಲಿ ತಿಲತರ್ಪಣ ನೀಡಿ ಸಜ್ಜನರಿಗೆ ಒಳ್ಳೆಯ ಭೋಜನ ಮಾಡಿಸಿದರೆ ಬಾಳು ಬಂಗಾರವಾಗುತ್ತದೆ. ತೊಡಕುಗಳು ನಿವಾರಣೆಯಾಗುತ್ತದೆ.
ವೃಷಭ ರಾಶಿ:
ಗುರುವು ಲಗ್ನದಲ್ಲಿ ಸ್ಥಿತನಾಗಿದ್ದು ಎಲ್ಲರಿಗೆ ಮೊಟ್ಟ ಮೊದಲ ಗುರು ಈಶ್ವರ ಪಾರ್ವತಿ ಸ್ವರೂಪರಾದ ತಂದೆತಾಯಿಗಳೇ. ಯಶಸ್ಸಿಗೆ ಗುರುವಿನ ಅನುಗ್ರಹವಿರಬೇಕು. ಇಷ್ಟಾರ್ಥ ಪಡೆಯುವ ಕಾಲ. ಅವಶ್ಯವಾಗಿ ದೇವರನ್ನು, ದುರ್ಗೆಯನ್ನು ಪೂಜಿಸಿ. ಪಾರ್ವತಿಯನ್ನು ಕಡ್ಡಾಯವಾಗಿ ಪೂಜಿಸಲೇಬೇಕು.
ಮಿಥುನ ರಾಶಿ:
ಮಿಥುನ ರಾಶಿಯವರಿಗೆ ಬುಧನ ಸಂರಕ್ಷಣೆಯಿದೆ. ಬುಧನು ನ್ಯಾಯವೂ ಧರ್ಮವೂ ಇರುವ ಗ್ರಹ. ಎಲ್ಲ ಗ್ರಹಗಳ ಸಂಪರ್ಕವಿರುವ ಏಕೈಕ ಗ್ರಹ ಬುಧನೇ. ‘ಓಂ ನಮೋ ನಾರಾಯಣ’ ಮಂತ್ರ 1008 ಬಾರಿ ಜಪಿಸಿರಿ. ಅಶ್ವತ್ಥ ಪ್ರದಕ್ಷಿಣೆ ಮಾಡಿ, ಬ್ರಹ್ಮ ವಿಷ್ಣು ಮಹೇಶ್ವರರ ಅನುಗ್ರಹ ಪಡೆಯಿರಿ. ಮೇಲೆ ಹೇಳಿದ್ದನ್ನು ಗಂಭೀರವಾಗಿ ಪರಿಗಣಿಸಿ ಬಾಳನ್ನು ಸುಖಮಯವನ್ನಾಗಿ ಮಾಡಿಕೊಳ್ಳಿ.
ಕಟಕ ರಾಶಿ:
11ರಲ್ಲಿ ಗುರು, ಶುಭ್ರವಾದ, ತಿಳಿಯಾದ ಜಲರಾಶಿಯವರಾದ ನೀವು ಎಲ್ಲವನ್ನೂ ಮಾಡಿಕೊಟ್ಟು, ಯಾರು ಯಾರಿಗೆ ಏನು ಬೇಕೋ ಎಲ್ಲವನ್ನೂ ಕೊಡುತ್ತಾನೆ. ಎಲ್ಲರನ್ನೂ ಸಮಾನರನ್ನಾಗಿ ಕಾಣುವ ನೀವು ಅದೃಷ್ಟವಂತರು. ಚಂದ್ರಚೂಡನನ್ನು ಪೂಜಿಸಿ. ಪಾರ್ವತಿಯಂತೆ ಎಲ್ಲರಿಗೂ ಮಾತೆಯ ಸಮಾನರಾಗಿ ಬಾಳಿರಿ.
ಸಿಂಹ ರಾಶಿ:
ಶುಭವಾದ, ಶುಭಸಮಯ, ಶುಭ ಮುಹೂರ್ತ ಸದಾಕಾಲ ಇರುತ್ತದೆ. ಬಾಳಿಗೆ ಬೆಳಕನ್ನು ಕೊಡುವವನು ಸೂರ್ಯ ನಾರಾಯಣ. ಸೂರ್ಯನಾರಾಯಣನನ್ನು ಪೂಜಿಸಿ ಬಾಳಿನ ಗುರಿಯನ್ನು ಮುಟ್ಟಲು ಸಾಧ್ಯವಾಗುತ್ತದೆ. ಮಖಾ ನಕ್ಷತ್ರದವರು ಷಣ್ಮುಖನನ್ನು ಪೂಜಿಸಿ. ಗುರು ದಶಮದಲ್ಲಿದ್ದು, ನಿಮ್ಮ ಗುರುಗಳನ್ನು ದರ್ಶಿಸಿ, ಅನುಗ್ರಹವನ್ನು ಪಡೆದು ಸುಖ ಶಾಂತಿಯನ್ನು ಪಡೆಯಬಹುದು.
ಕನ್ಯಾ ರಾಶಿ:
ಮನುಷ್ಯನು ತನ್ನ ಕಾಲನ್ನು ತಾನೇ ಕತ್ತರಿಸಿಕೊಂಡರೆ ಅದಕ್ಕೆ ಎಲ್ಲಾದರೂ ಪರಿಹಾರವಿದೆಯೇ? ಸತ್ಪುರುಷರನ್ನು ಬೇಕಾದಾಗ ಬಳಸಿಕೊಂಡು ನಂತರ ಕೈಬಿಟ್ಟು, ಕೆಲಸವನ್ನು ಮಾಡಿಕೊಟ್ಟ ಮನುಷ್ಯನನ್ನು ಅರಿಯದೆ ಬಾಳಿದರೆ ಬಾಳು ವ್ಯರ್ಥವಾಗುವುದು. ಷಷ್ಠದಲ್ಲಿ ಶನಿ ಏನು ಕೇಳಿದರೂ ಕೊಟ್ಟಾನು. ದಾರಿತೋರಿಸಿ ದವರನ್ನು ನೆನಪಿಸಿಕೊಳ್ಳಿ. ಗಣಪತಿಯು ನಿಮ್ಮನ್ನು ಹರಸುತ್ತಾನೆ.
ತುಲಾ ರಾಶಿ:
ಈ ರಾಶಿಯವರು ಯಾವ ಗ್ರಹಗಳ ಬದಲಾವಣೆಗೂ ಕಾಯುವ ಅಗತ್ಯವಿಲ್ಲ. ತಕ್ಕಡಿಯಿಲ್ಲದೆ ಕೃಷ್ಣನ ಅನುಗ್ರಹ ಸಿಗುವುದಿಲ್ಲ. ಕೃಷ್ಣನನ್ನು ಪೂಜಿಸಿ, ಅವನ ಸಹೋದರಿ ದುರ್ಗೆಯು ತಾನಾಗಿಯೇ ಅನುಗ್ರಹ ನೀಡುತ್ತಾಳೆ. ತುಲಾ ರಾಶಿಯ ಅಧಿದೇವತೆ ದುರ್ಗೆ, ಒತ್ತಡ ಕಡಿಮೆ ಮಾಡಿಕೊಂಡು ಜಯ ಗಳಿಸಲು ‘ದುಂ ದುರ್ಗಾಯೈ ನಮಃ’ ಎಂದು ಪಠಿಸಿ.
ವೃಶ್ಚಿಕ ರಾಶಿ:
ಸಪ್ತಮ ಗುರು, ಬಾಳಿಗೆ ಬೆಳಕನ್ನು ನೀಡುತ್ತಾನೆ. ಬ್ರಹ್ಮಗುಣ, ಋಷಿಗುಣ, ಸ್ತ್ರೀಋಣ ಮನುಷ್ಯನನ್ನು ಕಾಡುವುದು ಖಚಿತ. ನಿಮ್ಮ ನೆನಪನ್ನು ಮರುಕಳಿಸಿಕೊಂಡು ಅದರಲ್ಲಿ ಯಾವುದು ಮಾಡಬೇಕೋ ಅದನ್ನು ಮಾಡಿ. ಇನ್ನೂ ಹೆಸರು, ಕೀರ್ತಿ, ಲಾಭ, ಜಯ ಹಣವನ್ನು ಪಡೆಯಬಹುದು. ಒತ್ತಡದ ಕೆಲಸವು ಬೇಡ. ದುಷ್ಟರ ಸಹವಾಸದಿಂದ ದೂರವಿರಿ.
ಧನಸ್ಸು ರಾಶಿ:
ರಾಶಿಯ ಅಧಿಪತಿ ಗುರು ಷಷ್ಟದಲ್ಲಿದ್ದು, ನಮ್ಮ ಮನೆಯ ದೇವರು ನಮ್ಮನ್ನು ಕಾಯದೆ ಇರನು ಎಂದು ಎಲ್ಲರಿಗೂ ಗೊತ್ತಿದೆ. ಗುರುವಿನ ಅನುಗ್ರಹ ಇದ್ದರೆ ಸಾಕು, ಅಪಘಾತ, ರೋಗ, ಅಪವಾದ ಎಂದಿಗೂ ತರುವುದಿಲ್ಲ. ಕೆಲಸದಲ್ಲಿ ಜಯವನ್ನು ಸಾಧಿಸಿಕೊಳ್ಳಿ.
ಮಕರ ರಾಶಿ:
ಹುಯ್ಯೋ ಹುಯ್ಯೋ ಮಳೆರಾಯ, ಹುಯ್ದ ಮಳೆಯು ಭೂಮಿಯಲ್ಲಿ ಇಳಿದು ಸರ್ವ ಸಂಪತ್ತನ್ನು ಕೊಡುವ ಮಹಾಪುರುಷನು ಭೂಮಿಯಲ್ಲಿ ಜಲವನ್ನು ಇರಿಸಿ, ರಾಕ್ಷಸರನ್ನು ಬಡಿದು ಎಲ್ಲ ಜೀವಿಗಳನ್ನು ಪಾರು ಮಾಡುವವನು. ಜಗತ್ತಿಗೆ ಮೂಲ ಪುರುಷ ಶ್ರೀ ಶ್ರೀನಿವಾಸ ದೇವರೇ. ಶ್ರೀ ಎಂದರೆ ಲಕ್ಷ್ಮೀ, ನಿವಾಸ ಎಂದರೆ ವಾಸಸ್ಥಾನ. ಅಂತಹ ದೇವಾದಿದೇವರನ್ನು ಪೂಜಿಸಿ.
ಕುಂಭ ರಾಶಿ:
ಕುಂಭರಾಶಿಯಲ್ಲಿ ಶನಿಯಿದ್ದು 2025ರ ಮಾ. 29ರ ವರೆಗೂ ನೀವು ನಿಮ್ಮ ದೈವಬಲವನ್ನು ಕಾಪಾಡಿಕೊಳ್ಳುವ ಮಾರ್ಗವನ್ನು ಹುಡುಕಿ. ನಿತ್ಯವೂ ಗುರು ಅಷ್ಟೋತ್ತರ ಪಠಿಸಿ. ಸರ್ವಸಂಕಟ ಪರಿಹಾರಕ್ಕಾಗಿ ದತ್ತಾತ್ರೇಯ ಗುರುಚರಿತ್ರೆಯ 14ನೇ ಅಧ್ಯಾಯ ಪಾರಾಯಣ ಮಾಡಿ. ದೇವರು ಕೊಟ್ಟ ಬೆಳಕಲ್ಲಿ ಬಾಳನ್ನು ಸಾಗಿಸಿ. ಆರೋಗ್ಯದ ಬಗ್ಗೆ ಗಮನವಿರಲಿ. ವಿದ್ಯೆಯ ಜೊತೆ ವಿನಯವಿರಲಿ. ಎಚ್ಚರಿಕೆಯಿಂದ ಸಾಗುವುದು ನಿಮ್ಮ ಕರ್ತವ್ಯ.
ಮೀನ ರಾಶಿ:
ಗುರುವೇ ರಾಶಿಯ ಅಧಿಪತಿಯಾಗಿದ್ದು ಯಾವ ಗ್ರಹಗಳಿಗೂ ಹೆಚ್ಚು ಮಾನ್ಯತೆ ಇರುವುದಿಲ್ಲ. ಯಾವ ಗ್ರಹಗಳನ್ನೂ ಒಲಿಸಿಕೊಂಡು ಕಾರ್ಯಸಾಧನೆ ಮಾಡಬಹುದು. ಲಗ್ನದಲ್ಲಿರುವ ರಾಹುವಿಗಾಗಿ ಅನಂತವಾಗಿ ಶಂಕುಲ ನಾಗದೇವರನ್ನು ಪೂಜಿಸಿ. ಕಾಳಹಸ್ತಿಗೆ ಹೋಗಿ ದೇವರನ್ನು ದರ್ಶಿಸಿ. 2025ರ ಮಾ. 29ರಂದು ಶನಿಯು ದ್ವಾದಶವನ್ನು ಬಿಟ್ಟು ಲಗ್ನಕ್ಕೆ ಬಂದಾಗ ದುಃಖ ದೂರವಾಗಿ ಬುದ್ಧಿಯು ಚುರುಕಾಗಿ ಜವಾಬ್ದಾರಿಯಿಂದ ತೀರ್ಮಾನ ತೆಗೆದುಕೊಳ್ಳುವಂತೆ ಮಾಡುತ್ತಾನೆ. ಸಪ್ತಮ ಕೇತುವಿಗೆ, ವರಸಿದ್ಧಿ ವಿನಾಯಕ ವ್ರತವನ್ನು ಚೌತಿಯಂದು ಮಾಡಿ. ಬಾಳು ಶುದ್ಧವಾದ ಬಂಗಾರದಂತೆ ಆಗುತ್ತದೆ.