Ad Widget .

ಇಸ್ರೇಲ್ ದಾಳಿಗೆ ಹಿಜ್ಜುಲ್ಲ ಕೇಂದ್ರ ಕಚೇರಿ ಧ್ವಂಸ

ಸಮಗ್ರ ನ್ಯೂಸ್:ಇಸ್ರೇಲ್ ಮತ್ತು ಹಿಜ್ಜುಲ್ಲ ನಡುವಿನ ಸಮರದಿಂದಾಗಿ ಸೆ.20 ರಂದು ಸಂಜೆ ಇಸ್ರೇಲ್ ವಾಯುಪಡೆ ಲೆಬನಾನ್‌ನ ರಾಜಧಾನಿ ಬೈರುತ್‌ನಲ್ಲಿ ಭಾರಿ ದಾಳಿ ನಡೆಸಿ ಹಿಜ್ಜುಲ್ಲದ ಕೇಂದ್ರ ಕಚೇರಿಯನ್ನು ಧ್ವಂಸಗೊಳಿಸಿದೆ.ಅಲ್ಲಿಯ ಮುಖ್ಯಸ್ಥನಾದ ಹಸನ್ ನಸ್ರಲ್ಲಾ ತಪ್ಪಿಸಿಕೊಂಡಿದ್ದಾನೆ.ದಾಳಿಗೆ 8 ಬಲಿಯಾಗಿ 76 ಮಂದಿಗೆ ಗಾಯಗೊಂಡಿದ್ದಾರೆ.

Ad Widget . Ad Widget . Ad Widget . Ad Widget .

ಅವರು ಅಂತಹ ದಾಳಿಯಿಂದ ಬದುಕುಳಿದಿದ್ದಾರೆಂದು ಇಸ್ರೇಲ್ ದಾಳಿಯಲ್ಲಿ ಆರು ಕಟ್ಟಡಗಳು ಧ್ವಂಸಗೊಂಡಿವೆ ಎಂದು ಹಿಜ್ಜುಲ್ಲಗೆ ನಿಕಟವಾದ ಮೂಲವೊಂದು ತಿಳಿಸಿದೆ.ಹಿಜ್ಜುಲ್ಲ ಮತ್ತು ಇಸ್ರೇಲ್ ನಡುವಿನ ಸುಮಾರು ಒಂದು ವರ್ಷದ ಸಂಘರ್ಷದಲ್ಲಿ ಬೈರುತ್‌ನಲ್ಲಿ ನಡೆದ ಅತಿದೊಡ್ಡ ದಾಳಿ ಇದಾಗಿದೆ.ದಾಳಿಯಲ್ಲಿ ಹಿಜ್ಜುಲ್ಲದ ಕ್ಷಿಪಣಿ ಘಟಕದ 2 ಕಮಾಂಡರ್ ಸಾವಿಗೀಡಾಗಿದ್ದಾರೆಂದು ತಿಳಿದುಬಂದಿದೆ.

Ad Widget . Ad Widget .

ಅಲಿ ಇಸ್ಮಾಯಿಲ್ ಇಸ್ರೇಲ್ ವಿರುದ್ಧ ಹಲವಾರು ಭಯೋತ್ಪಾದಕ ದಾಳಿಗಳ ಸೂತ್ರಧಾರನಾಗಿದ್ದ. ಬುಧವಾರ ನಡೆದ ಕ್ಷಿಪಣಿ ದಾಳಿ ಸೇರಿದಂತೆ ಇಸ್ರೇಲ್ ಮೇಲೆ ನಡೆದ ಹಲವು ರಾಕೆಟ್ ದಾಳಿಯಲ್ಲಿ ಪ್ರಮುಖ ಪಾತ್ರಧಾರಿಯಾಗಿದ್ದ. ಹೀಗಾಗಿ ಹಿಜ್ಜುಲ್ಲದ ಕ್ಷಿಪಣಿಗಳು ಮತ್ತು ರಾಕೆಟ್ಸ್ ಫೋರ್ಸ್ ಮುಖ್ಯಸ್ಥ ಮತ್ತು ಈ ಘಟಕದ ಇತರ ಹಿರಿಯ ಕಮಾಂಡರ್‌ಗಳನ್ನು ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್ ಹೇಳಿದೆ.

ಇಸ್ರೇಲ್-ಹಮಾಸ್ ಯುದ್ಧಕ್ಕೆ ಹಿಜ್ಜುಲ್ಲ ಉಗ್ರರು ಪ್ರವೇಶಿಸಿ ಕಾವು ಹೆಚ್ಚಿಸಿರುವ ಹೊತ್ತಿನಲ್ಲೇ ಯೆಮೆನ್‌ನ ಹೌತಿ ಉಗ್ರರು ಕೂಡ ಕದನ ಪ್ರವೇಶ ಮಾಡಿದ್ದಾರೆ. ಇಸ್ರೇಲ್ ದಾಳಿಗೆ ಗುರುವಾರ ಹಿಜ್ಜುಲ್ಲ ಉಗ್ರರ ಮೊಹಮ್ಮದ್ ಸ್ರುರ್ ಹತವಾಗಿದ್ದ.ಇದರ ಪ್ರತಿಯಾಗಿ ಹೌತಿ ಉಗ್ರರು ಗುರುವಾರ ರಾತ್ರಿ ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದಾರೆ.

Leave a Comment

Your email address will not be published. Required fields are marked *