ಸಮಗ್ರ ನ್ಯೂಸ್: ಗೃಹಲಕ್ಷ್ಮಿ ಹಣದ ನಿರೀಕ್ಷೆಯಲ್ಲಿರುವ ಮಹಿಳೆಯರಿಗೆ ಈ ತಿಂಗಳು ಮುಗಿಯುವ ಮುನ್ನ ಸಿಹಿಸುದ್ದಿ, ಒಂದು ತಿಂಗಳ ಹಣ ಜಮಾವಣೆ ಮಾಡಲು ಇಲಾಖೆ ಮುಂದಾಗಿದೆ ಎಂದು ತಿಳಿದುಬಂದಿದೆ.
ಸೆಪ್ಟೆಂಬರ್ ತಿಂಗಳು ಕೊನೆಗೆ ಬಂದರೂ ಜುಲೈ, ಆಗಸ್ಟ್ ತಿಂಗಳುಗಳ ಗೃಹಲಕ್ಷ ಹಣ ಮಾತ್ರ ಮಹಿಳೆಯರ ಖಾತೆಯನ್ನು ಸೇರಿಲ್ಲ. ಇದೀಗ ಜುಲೈ ತಿಂಗಳ ಹಣ ಒದಗಿಸಲು ಸಚಿವರು ಹಣಕಾಸು ಇಲಾಖೆಗೆ ತಾಕೀತು ಮಾಡಿದ್ದಾರೆ.ಹಣ ಜಮೆ ಆಗದಿರುವುದಕ್ಕೆ ಕಾರಣ ಹಣಕಾಸು ಇಲಾಖೆಯಿಂದ ಅನುದಾನ ಬಿಡುಗಡೆ ಆಗದಿರುವುದು.
ಸದ್ಯ ಇಲಾಖೆಯಿಂದ ಮೂರು ತಿಂಗಳ ಕಂತಿನ ಹಣ ಕೇಳಲಾಗಿದೆ. ಒಂದೊಂದೇ ತಿಂಗಳ ಹಣವನ್ನು ಹಣಕಾಸು ಇಲಾಖೆ ಬಿಡುಗಡೆ ಮಾಡುತ್ತಿದೆ. ಇತ್ತೀಚೆಗೆ ಜೂನ್ ತಿಂಗಳ ಹಣ ಬಿಡುಗಡೆ ಮಾಡಿತ್ತು. ಪ್ರತಿ ತಿಂಗಳು 1.21 ಕೋಟಿ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಹಣ ಬರಬೇಕು. ಪ್ರತಿ ತಿಂಗಳೂ ಗೃಹಲಕ್ಷ ಯೋಜನೆಗೆ 2500 ಕೋಟಿ ಹಣ ಬೇಕಾಗುತ್ತದೆ.
ಮಹಿಳಾ ಮತ್ತು ಮಕ್ಕಳ ಇಲಾಖೆಯಿಂದ ಸೆಪ್ಟೆಂಬರ್ ಸೇರಿದಂತೆ ಮೂರು ತಿಂಗಳ ಅನುದಾನ ಅಂದರೆ ಒಟ್ಟು 7500 ಕೋಟಿ ಹಣ ಆದರೆ ಒಟ್ಟಿಗೇ ಅಷ್ಟು ಹಣವನ್ನು ಇಲಾಖೆ ಒದಗಿಸುವುದು ಕಷ್ಟ ಎನ್ನಲಾಗಿದೆ. ಹೀಗಾಗಿ ಇದೇ ತಿಂಗಳೇ ಗೃಹಲಕ್ಷ ಹಣ ಬಂದರೂ ಅದು ಒಂದು ತಿಂಗಳಿನದ್ದು ಆಗಿರಬಹುದಷ್ಟೇ ಎಂದೂ ತರ್ಕಿಸಲಾಗುತ್ತಿದೆ.