ಬೆಳ್ತಂಗಡಿ: ರಾಜ್ಯ ಪ್ರಶಸ್ತಿ ‌ಹಿಂತಿರುಗಿಸಿದ ಗ್ರಾಮ ಆಡಳಿತಾಧಿಕಾರಿ| ಪ್ರಶಸ್ತಿ ಹಿಂತಿರುಗಿಸಲು ಅಚ್ಚರಿಯ ಕಾರಣ ನೀಡಿದ ಪ್ರಥ್ವಿರಾಜ್‌

ಸಮಗ್ರ ನ್ಯೂಸ್: ರಾಜ್ಯ ಸರಕಾರದ ಕಂದಾಯ ಇಲಾಖೆಯ ನೀಡುವ ವರ್ಷದ ಅತ್ಯುತ್ತಮ ಕಂದಾಯ ಅಧಿಕಾರಿ ಪ್ರಶಸ್ತಿಯನ್ನು ಬೆಳ್ತಂಗಡಿ ತಾಲೂಕಿನ ನಿಡ್ಲೆ ಗ್ರಾಮ ಪಂಚಾಯತ್ ಗ್ರಾಮ ಆಡಳಿತ ಅಧಿಕಾರಿ ಹಿಂದಿರುಗಿಸಿದ್ದಾರೆ.

Ad Widget ... ..

ಬೆಳ್ತಂಗಡಿ ತಾಲೂಕಿನ ನಿಡ್ಲೆ ಗ್ರಾಮಪಂಚಾಯತ್ ಗ್ರಾಮ ಆಡಳಿತ ಅಧಿಕಾರಿ ಪೃಥ್ವಿರಾಜ್.ಪಿ.ಶೆಟ್ಟಿ ಪ್ರಶಸ್ತಿ ಹಿಂದಿರುಗಿಸಿದ ಅಧಿಕಾರಿ, ರಾಜ್ಯ ಕಂದಾಯ ಇಲಾಖೆ ಪ್ರತಿ ವರ್ಷ ನೀಡುವ ವರ್ಷದ ಅತ್ಯುತ್ತಮ ಕಂದಾಯ ಅಧಿಕಾರಿ -2024 ಪ್ರಶಸ್ತಿ ಈ ಬಾರಿ ಪ್ರಥ್ವಿರಾಜ್ ಅವರಿಗೆ ಸಿಕ್ಕಿದೆ.

Ad Widget

ಆದರೆ ಅದನ್ನ ನಿರಾಕರಿಸಿ ಕಂದಾಯ ಇಲಾಖೆಯ ಆಯುಕ್ತರಿಗೆ ಮನವಿ ಮಾಡಿದ್ದಾರೆ. ಈ ಮನವಿಯಲ್ಲಿ ಪ್ರಶಸ್ತಿ ಹಿಂದಿರುಗಿಸಿದಕ್ಕೆ ವಿಭಿನ್ನ ಕಾರಣವನ್ನು ಪ್ರಥ್ವಿರಾಜ್ ನೀಡಿದ್ದು, ನನಗೆ ನೀಡಿರುವ ಪ್ರಶಸ್ತಿಯಲ್ಲಿ ಸಾರ್ವಜನಿಕರ ಬೈಗುಳವಿದೆ, ನನ್ನ ವೇತನದ ಖರ್ಚಿನ ಹೊರೆಯಿದೆ. ಆದ್ದರಿಂದ ಪ್ರಶಸ್ತಿ ಹಿಂದಿರುಗಿಸುತ್ತಿದ್ದೇನೆ ಎಂದಿದ್ದಾರೆ.

ಸೆಪ್ಟಂಬರ್ 27 ರಂದು ಬೆಂಗಳೂರಿನಲ್ಲಿ ಕಂದಾಯ ಸಚಿವರು ಆಯೋಜಿಸಿರುವ ಅಭಿನಂದನಾ ಸಮಾರಂದಲ್ಲಿ ಈ ಪ್ರಶಸ್ತಿಯನ್ನು ಪ್ರಥ್ವಿರಾಜ್ ಅವರು ಪಡೆಯಬೇಕಾಗಿತ್ತು. ರಾಜ್ಯದ ಒಟ್ಟು 36 ಪಿಡಿಒಗಳಿಗೆ ಈ ಪ್ರಶಸ್ತಿ ನೀಡಲಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯಿಂದ ಪ್ರಶಸ್ತಿ ಪಡೆದಿರುವ ಏಕೈಕ ಪಿಡಿಒ ಆಗಿದ್ದಾರೆ.

Leave a Comment

Your email address will not be published. Required fields are marked *