Ad Widget .

ಬಿಗ್ ಬಾಸ್ 11ಗೆ ಮೂವರು ಅಭ್ಯರ್ಥಿಗಳ ಹೆಸರು ರಿವೀಲ್| ದೊಡ್ಮನೆಗೆ ಎಂಟ್ರಿ ಕೊಟ್ಟ ಕೊಡಲಿದ್ದಾರೆ ಚೈತ್ರಾ ಕುಂದಾಪುರ

ಸಮಗ್ರ ನ್ಯೂಸ್: ಬಿಗ್‌ ಬಾಸ್‌ ಸೀಸನ್‌ 11ರ ಲಾಂಚ್‌ಗೆ ಕೇವಲ ಒಂದೇ ದಿನ ಬಾಕಿ ಇದೆ. ರಾಜಾ ರಾಣಿ ರೀಲೋಡೆಡ್ನ ಗ್ರ್ಯಾಂಡ್ ಫಿನಾಲೆಯಲ್ಲಿ ಸ್ಪರ್ಧಿಗಳ ಹೆಸರು ರಿವೀಲ್‌ ಆಗುತ್ತಿದೆ. ಈಗಾಗಲೇ ಎರಡು ಸ್ಪರ್ಧಿಗಳು ಅನೌನ್ಸ್‌ ಆಗಿದ್ದಾರೆ. ಬಿಗ್‌ ಬಾಸ್‌ ಸೀಸನ್‌ 11ರ ಲಾಂಚ್‌ಗೆ ಕೇವಲ ಒಂದೇ ದಿನ ಬಾಕಿ ಇದೆ. ರಾಜಾ ರಾಣಿ ರೀಲೋಡೆಡ್ನ ಗ್ರ್ಯಾಂಡ್ ಫಿನಾಲೆಯಲ್ಲಿ ಸ್ಪರ್ಧಿಗಳ ಹೆಸರು ರಿವೀಲ್‌ ಆಗುತ್ತಿದೆ. ಮೊದಲ ಸ್ಪರ್ಧಿಯಾಗಿ ಗೌತಮ್‌ ಜಾದವ್‌ ಎಂಟ್ರಿ ಕೊಟ್ಟಿದ್ದಾರೆ.

Ad Widget . Ad Widget .

ಗೌತಮಿ ಜಾಧವ್ ‘ನಾಗಪಂಚಮಿ’ ಎಂಬ ಧಾರಾವಾಹಿ ಮೂಲಕ ಕಿರುತೆರೆ ಲೋಕಕ್ಕೆ ಪಾದರ್ಪಣೆ ಮಾಡಿದರು. ಸತ್ಯ ಧಾರಾವಾಹಿಯಲ್ಲಿ ರಗಡ್ ಲುಕ್ ಮೂಲಕ ಜನಪ್ರಿಯತೆ ಪಡೆದಿರುವ ಗೌತಮಿ ಜಾಧವ್ ಅಭಿನಯಕ್ಕೆ ಮನಸೋಲದವರಿಲ್ಲ. ಇನ್ನು ಗೌತಮಿ ಮದುವೆಯಾಗಿರುವುದು ಸಿನಿಮಾ ಲೋಕದಲ್ಲಿರುವವರನ್ನೇ. ಆದರೆ ಗೌತಮಿ ಜಾಧವ್ ಪತಿ ನಟರಲ್ಲ. ಬದಲಿಗೆ ಸಿನಿಮಾಟೋಗ್ರಫರ್.

Ad Widget . Ad Widget .

ಎರಡನೇ ಸ್ಪರ್ಧಿಯಾಗಿ ಲಾಯರ್‌ ಜಗದೀಶ್‌ ಎಂಟ್ರಿ ಕೊಟ್ಟಿದ್ದಾರೆ. ಒಂದಲ್ಲ ಒಂದು ಹೇಳಿಕೆಗಳ ಮೂಲಕ ಸುದ್ದಿಯಲ್ಲಿರುವ ಲಾಯರ್‌ ಜಗದೀಶ್‌ ಅವರಿಗೆ ʼಬಿಗ್‌ಬಾಸ್‌ʼ ಆಫರ್‌ ಸಿಕ್ಕಿದೆ. ಮೂರನೇ ಸ್ಪರ್ಧಿಯಾಗಿ ಚೈತ್ರಾ ಕುಂದಾಪುರ ಬಿಗ್‌ ಬಾಸ್‌ಗೆ ಎಂಟ್ರಿ ಕೊಟ್ಟಿದ್ದಾರೆ.

ಕುಂದಾಪುರ ಮೂಲದ ಚೈತ್ರಾ ಈ ಬಾರಿ ಬಿಗ್‌ ಬಾಸ್‌ ಮನೆಯೊಳಗೆ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಕಳೆದ ಕೆಲ ಸಮಯದ ಹಿಂದಷ್ಟೇ ಉದ್ಯಮಿಯೊಬ್ಬರಿಗೆ ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ ಹೇಳಿ ವಂಚನೆ ಮಾಡಿದ ಆರೋಪ ಅವರ ಮೇಲೆ ಕೇಳಿ ಬಂದಿತ್ತು. ಈ ಪ್ರಕರಣದಲ್ಲಿ ಅವರನ್ನು ಬಂಧಿಸಲಾಗಿತ್ತು.

ಕುಂದಾಪುರದ ತೆಕ್ಕಟ್ಟೆಯಲ್ಲಿ ಪಿಯುಸಿವರೆಗೆ ವ್ಯಾಸಂಗ ಮಾಡಿದ ಚೈತ್ರಾ, ಕೊಣಾಜೆಯಲ್ಲಿ ಪದವಿ ಪೂರ್ಣಗೊಳಿಸಿದರು. ಮಂಗಳೂರು ವಿಶ್ವ ವಿದ್ಯಾಲಯದ ಪದವೀಧರೆಯಾದ ಚೈತ್ರಾ ಕುಂದಾಪುರ, ಕೆಲ ಕಾಲ ಬೆಂಗಳೂರಿನಲ್ಲಿ ಸಮಯ ಸುದ್ದಿವಾಹಿನಿಯಲ್ಲಿ ಕೆಲಸ ಮಾಡಿದ್ದರು.

ಉಡುಪಿ ಜಿಲ್ಲೆ ಬೈಂದೂರಿನ ಉದ್ಯಮಿ ಹಾಗೂ ಸಮಾಜ ಸೇವಕ ಗೋವಿಂದ ಬಾಬು ಪೂಜಾರಿ ಅವರಿಗೆ ಚೈತ್ರಾ ಕುಂದಾಪುರ ಮೋಸ ಮಾಡಿರುವ ಬಗ್ಗೆ ಆರೋಪ ಇತ್ತು.

Leave a Comment

Your email address will not be published. Required fields are marked *