Ad Widget .

ಕೆಕೆಆರ್‌ ತಂಡ ಸೇರಿದ ಡ್ವೇನ್‌ ಬ್ರಾವೋ/ ಗಂಭೀರ್‌ ಸ್ಥಾನ ತುಂಬಲಿರುವ ಕೆರೆಬಿಯನ್‌ ಆಟಗಾರ

ಸಮಗ್ರ ನ್ಯೂಸ್‌: ಐಪಿಎಲ್‌ನ ಕಳೆದ ಆವೃತ್ತಿಯ ಚಾಂಪಿಯನ್ ಕೆಕೆಆರ್ ತಂಡಕ್ಕೆ ಹೊಸಬರ ಎಂಟ್ರಿಯಾಗಿದ್ದು, ತಂಡದ ಮೆಂಟರ್ ಆಗಿದ್ದ ಗೌತಮ್ ಗಂಭೀರ್ ಅವರ ಸ್ಥಾನಕ್ಕೆ ಅನುಭವಿ ಕ್ರಿಕೆಟಿಗ ಡ್ರೈನ್ ಬ್ರಾವೋ ಅವರನ್ನು ನೇಮಕ ಮಾಡಲಾಗಿದೆ ಎಂದು ಕೆಕೆಆರ್ ಫ್ರಾಂಚೈಸಿ ತಿಳಿಸಿದೆ.

Ad Widget . Ad Widget .

ಪ್ರಸ್ತುತ ವೆಸ್ಟ್ ಇಂಡೀಸ್‌ನಲ್ಲಿ ನಡೆಯುತ್ತಿರುವ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡುತ್ತಿದ್ದ ಬ್ರಾವೋ, ಗಾಯದ ಕಾರಣದಿಂದಾಗಿ ಎಲ್ಲಾ ಮಾದರಿಯ ಕ್ರಿಕೆಟ್ ಗೆ ವಿದಾಯ ಹೇಳಿದ್ದರು. ಇದೀಗ ಐಪಿಎಲ್‌ ನಲ್ಲಿ ಹೊಸ ತಂಡದೊಂದಿಗೆ ಕಾಣಿಸಿಕೊಳ್ಳಲಿದ್ದು, ಸಿಎಸ್‌ಕೆ ತಂಡದೊಂದಿಗಿನ ಬಹಳ ವರ್ಷಗಳ ಬಂಧವನ್ನು ಬ್ರಾವೋ ಮುರಿದುಕೊಂಡಿದ್ದಾರೆ. ಕಳೆದ ಆವ್ಯತ್ತಿಯವರೆಗೂ ಸಿಎಸ್‌ಕೆ ತಂಡದ ಬೌಲಿಂಗ್ ಕೋಚ್ ಆಗಿ ಸೇವೆ ಸಲ್ಲಿಸುತ್ತಿದ್ದ ಬ್ರಾವೋ, ಇದೀಗ ಕೆಕೆಆರ್ ತಂಡದಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸಲಿದ್ದಾರೆ.

Ad Widget . Ad Widget .

Leave a Comment

Your email address will not be published. Required fields are marked *