Ad Widget .

ತಿರುಪತಿ ಲಡ್ಡು ವಿವಾದ/ ಪುರಿಯ ಜಗನ್ನಾಥ ದೇವಸ್ಥಾನದಲ್ಲೂ ತುಪ್ಪದ ಪರೀಕ್ಷೆಗೆ ಸಿದ್ಧತೆ

ಸಮಗ್ರ ನ್ಯೂಸ್‌: ತಿರುಪತಿ ಲಡ್ಡು ಪ್ರಸಾದದ ವಿವಾದದ ಬೆನ್ನಲ್ಲೇ ಒಡಿಶಾದ ಪುರಿಯ ಜಗನ್ನಾಥ ದೇವಸ್ಥಾನದಲ್ಲಿ ಪ್ರಸಾದಕ್ಕೆ ಬಳಸಲಾಗುವ ತುಪ್ಪದ ಪರೀಕ್ಷೆ ನಡೆಸಲು ನಿರ್ಧರಿಸಿದೆ. ಪುರಿಯ ಜಗನ್ನಾಥ ದೇವಸ್ಥಾನದಲ್ಲಿ ನೈವೇದ್ಯ ತಯಾರಿಸಲು ಬಳಸುವ ತುಪ್ಪದ ಗುಣಮಟ್ಟವನ್ನು ಪರೀಕ್ಷಿಸಲು ಒಡಿಶಾ ಸರ್ಕಾರ ನಿರ್ಧರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Ad Widget . Ad Widget .

ಜಗನ್ನಾಥ ದೇಗುಲದಲ್ಲಿ ಕಲಬೆರಕೆಯಂತಹ ಯಾವುದೇ ಆರೋಪಗಳಿಲ್ಲ. ಅದಾಗ್ಯೂ ಆಡಳಿತ ಮಂಡಳಿಯು ‘ಕೋತ ಬೋಗ’ (ದೇವತೆಗಳಿಗೆ ಪ್ರಸಾದ) ಮತ್ತು ‘ಬಾರಾಡಿ ಭೋಗ’ (ಆದೇಶದ ಮೇರೆಗೆ ಪ್ರಸಾದ) ತಯಾರಿಸಲು ಬಳಸುವ ತುಪ್ಪದ ಗುಣಮಟ್ಟವನ್ನು ಪರೀಕ್ಷಿಸಲು ನಿರ್ಧರಿಸಿದೆ ಎಂದು ಪುರಿಯ ಜಿಲ್ಲಾಧಿಕಾರಿ ಸಿದಾರ್ಥ್ ಶಂಕ‌ರ್ ಸ್ಪೇನ್ ಮಾಹಿತಿ ನೀಡಿದರು.

Ad Widget . Ad Widget .

ಅಂತೆಯೇ ಪುರಿ ದೇವಸ್ಥಾನದಲ್ಲಿ ಬಳಕೆಗೆ ತುಪ್ಪದ ಏಕೈಕ ಪೂರೈಕೆದಾರ ಒಡಿಶಾ ಹಾಲು ಒಕ್ಕೂಟ (ಒಂಫೆಡ್)ವಾಗಿದೆ. ಕಲಬೆರಕೆ ಭಯ ಹೋಗಲಾಡಿಸಲು ಓಂಫೆಡ್‌ ನಿಂದ ಪೂರೈಕೆಯಾಗುತ್ತಿರುವ ತುಪ್ಪದ ಗುಣಮಟ್ಟವನ್ನು ಪರಿಶೀಲಿಸಲು ನಿರ್ಧರಿಸಲಾಗಿದೆ. ಈ ಸಂಬಂಧ ಓಂಫೆಡ್ ಹಾಗೂ ಪ್ರಸಾದ ತಯಾರಿಸುವ ದೇವಸ್ಥಾನದ ಸೇವಕರೊಂದಿಗೆ ಚರ್ಚೆ ನಡೆಸಲಾಗುವುದು ಎಂದರು.

Leave a Comment

Your email address will not be published. Required fields are marked *