Ad Widget .

ಪುತ್ತೂರು: ಪ್ರತಿಷ್ಠಿತ ತಿರುಮಲ‌ ಹೊಂಡಾ ಶೋರೂಂ ಮಾಲೀಕರ ದರ್ಬಾರ್| 2 ಕೋಟಿ ಸಾಲ ಬಾಕಿ ಕೇಳಲು ಹೋದ ಬ್ಯಾಂಕ್ ಸಿಬ್ಬಂದಿಗೆ ಗನ್ ತೋರಿಸಿ ಜೀವ ಬೆದರಿಕೆ| ಶಸ್ತ್ರಾಸ್ತ್ರ ಕಾಯ್ದೆಯಡಿ‌ ಪ್ರಕರಣ ದಾಖಲು

ಸಮಗ್ರ ನ್ಯೂಸ್: ಪುತ್ತೂರಿನ ಪ್ರತಿಷ್ಠಿತ ಶೋರೂಂ ಗಳಲ್ಲಿ ಒಂದಾದ ತಿರುಮಲ ಹೊಂಡಾ ಮಾಲಕರ 2 ಕೋಟಿ ಸಾಲ ಬಾಕಿಯಾಗಿದ್ದು ಮರುಪಾವತಿಗಾಗಿ ಮನೆಗೆ ಹೋದ SBI ಬ್ಯಾಂಕ್ ಸಿಬ್ಬಂದಿಗಳಿಗೆ ಪಿಸ್ತೂಲ್ ತೋರಿಸಿ ಬೆದರಿಕೆ ಹಾಕಿದ ಘಟನೆ ನಡೆದಿದ್ದು, ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

Ad Widget . Ad Widget .

ಪುತ್ತೂರು ಕೋರ್ಟ್ ರೋಡ್ ನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ರಿಲೇಷನ್ ಶಿಪ್ ಮ್ಯಾನೇಜರ್ ಆದ ಚಿಕ್ಕಮಗಳೂರು ಕೊಪ್ಪ ತಾಲೂಕು ನಿವಾಸಿಯಾದ ಶ್ರೀ ಚೈತನ್ಯ ಹೆಚ್.ಸಿ (40)ರವರ ದೂರಿನಂತೆ ಪ್ರಕರಣ ದಾಖಲಾಗಿದೆ.

Ad Widget . Ad Widget .

ಈ ಬ್ಯಾಂಕ್‌ ನಲ್ಲಿ ಪುತ್ತೂರು ತಾಲೂಕು, ಬಲ್ನಾಡು ಗ್ರಾಮದ ಉಜಿರ್‌ಪಾದೆ ನಿವಾಸಿ ಶ್ರೀಮತಿ ಕೀರ್ತಿ ಅಖಿಲೇಶ್‌ ಎಂಬವರು ರೂ 2 ಕೋಟಿ ಸಾಲ ಮಾಡಿದ್ದು, ಸದ್ರಿ ಸಾಲ ಮರುಪಾವತಿ ಮಾಡದೇ NPA ಆಗಿರುತ್ತದೆ.

ಸಾಲ ಬಾಕಿಯ ಬಗ್ಗೆ ಹಲವಾರು ಬಾರಿ ವಕೀಲರ ಮುಖಾಂತರ ಲೀಗಲ್‌ ನೋಟೀಸ್‌ ಮಾಡಿದರೂ, ತಿಳಿಸಿ ಹೇಳಿದ್ದರೂ ಸಾಲ ಮರುಪಾವತಿ ಮಾಡಿರುವುದಿಲ್ಲ. ಈ ಬಗ್ಗೆ ಮೇಲಾಧಿಕಾರಿಗಳ ಮೌಖಿಕ ಆದೇಶದಂತೆ, ದಿನಾಂಕ 25.09.2024 ರಂದು ಮಧ್ಯಾಹ್ನ, ದೂರುದಾರರು ಸಹೋದ್ಯೋಗಿಗಳಾದ ಆಕಾಶ್‌ ಚಂದ್ರಬಾಬು ಮತ್ತು ಶ್ರೀಮತಿ ದಿವ್ಯಶ್ರೀರವರೊಂದಿಗೆ ಪುತ್ತೂರು ತಾಲೂಕು ಬಲ್ನಾಡು ಗ್ರಾಮದ ಉಜಿರ್‌ಪಾದೆಯಲ್ಲಿರುವ ಶ್ರೀಮತಿ ಕೀರ್ತಿ ಅಖಿಲೇಶ್‌ ರವರ ಮನೆಗೆ ಹೋಗಿದ್ದಾರೆ. ಮನೆಯಲ್ಲಿದ್ದ ಶ್ರೀಮತಿ ಅರುಣ್‌ ಕಿಶೋರ್‌ ರವರು ದೂರುದಾರರನ್ನು ಮನೆ ಒಳಗೆ ಬರಮಾಡಿಕೊಂಡಿರುತ್ತಾರೆ.

ಬಳಿಕ ಅಖಿಲೇಶ್‌ ರವರಿಗೆ ಕರೆ ಮಾಡಿ ವಿಚಾರ ತಿಳಿಸಿರುತ್ತಾರೆ. ಅಖಿಲೇಶ್‌ ರವರು ಮನೆಗೆ ಬಂದು ಪಿರ್ಯಾದಿದಾರರಲ್ಲಿ ಮನೆಗೆ ಬಂದ ಬಗ್ಗೆ ತಕರಾರು ತೆಗೆದು ಗದರಿಸಿರುವುದಲ್ಲದೇ, ತಂದೆ ಬರುವ ತನಕ ಕೂರುವಂತೆ ಮನೆಯ ಬಾಗಿಲು ಹಾಕಿ ಬಲವಂತವಾಗಿ ಕೂರಿಸಿರುತ್ತಾರೆ.

ಬಳಿಕ ಕೃಷ್ಣ ಕಿಶೋರ್‌ ರವರು ಕೂಡಾ ಮನೆಗೆ ಬಂದು ಪಿರ್ಯಾದಿದಾರರಲ್ಲಿ ಮನೆಗೆ ಬಂದ ಬಗ್ಗೆ ತಕರಾರು ತೆಗೆದು, ಗದರಿಸಿ
ಪಿಸ್ತೂಲ್‌ ತೋರಿಸಿ ಶೂಟ್‌ ಮಾಡುತ್ತೇನೆ ಎಂದು ಜೀವ ಬೆದರಿಕೆ ಹಾಕಿರುತ್ತಾರೆ ಎಂಬುದಾಗಿ ಸೆ.26ರಂದು ಪುತ್ತೂರು ಗ್ರಾಮಾಂತರ ಪೊಲೀಸ್‌ ಠಾಣೆಗೆ ದೂರು ನೀಡಿದ್ದು 109/2024, ಕಲಂ:- ‌ 132, 127(2),351(2),r/w 3(5)ಬಿ.ಎನ್.ಎಸ್ ಮತ್ತು ಕಲಂ 27 ARMS Act ರಂತೆ ಪ್ರಕರಣ ದಾಖಲಾಗಿರುತ್ತದೆ.

Leave a Comment

Your email address will not be published. Required fields are marked *