ಸಮಗ್ರ ನ್ಯೂಸ್: ವಿವಾಹ ಸಮಾನತೆಯ ಮಸೂದೆಗೆ ಥೈಲ್ಯಾಂಡ್‌ನಲ್ಲಿ ಅಂಗೀಕಾರ ನೀಡಲಾಗಿದ್ದು, ಸಲಿಂಗಿಗಳು ಕಾನೂನುಬದ್ಧವಾಗಿ ವಿವಾಹವಾಗಲು ಗ್ರೀನ್ ಸಿಗ್ನಲ್ ಕೊಟ್ಟಿದೆ. ರಾಜ ಮಹಾ ವಜಿರಾಲಾಂಗ್ ಕಾರ್ನ್ ಅವರು ಅನುಮೋದಿಸಿದ ನಂತರ ಕಾನೂನನ್ನು ರಾಯಲ್ ಗೆಜೆಟ್‌ನಲ್ಲಿ ಪ್ರಕಟಿಸಲಾಗಿದೆ. 120 ದಿನಗಳಲ್ಲಿ ಕಾನೂನು ಜಾರಿಗೆ ಬರಲಿದೆ.
LGBTQ+ ಜೋಡಿಗಳು ಮುಂದಿನ ವರ್ಷದ ಜನವರಿಯಲ್ಲಿ ತಮ್ಮ ವಿವಾಹವನ್ನು ನೋಂದಾಯಿಸಲು ಸಾಧ್ಯವಾಗುತ್ತದೆ. ತೈವಾನ್ ಮತ್ತು ನೇಪಾಳದ ನಂತರ ಸಲಿಂಗ ವಿವಾಹವನ್ನು ಅನುಮತಿಸಿದ ಏಷ್ಯಾದ ಮೂರನೇ ರಾಷ್ಟ್ರವಾಗಿ ಥೈಲ್ಯಾಂಡ್ ಹೊರಹೊಮ್ಮಿದೆ. ಯಾವುದೇ ಲಿಂಗದ ವಿವಾಹ ಪಾಲುದಾರರಿಗೆ ಸಂಪೂರ್ಣ ಕಾನೂನು, ಆರ್ಥಿಕ ಮತ್ತು ವೈದ್ಯಕೀಯ ಹಕ್ಕುಗಳನ್ನು ನೀಡುವ ಮಸೂದೆಯು ಏಪ್ರಿಲ್ ಮತ್ತು ಜೂನ್‌ನಲ್ಲಿ ಕ್ರಮವಾಗಿ ಹೌಸ್ ಆಫ್ ರೆಪ್ರೆಸೆಂಟೇಟಿನ್ಸ್ ಮತ್ತು ಸೆನೆಟ್ ಎರಡರಲ್ಲೂ ಅನುಮೋದನೆ ಪಡೆದಿದೆ.