ಇಲ್ಲಿದೆ ಸಂಪೂರ್ಣ ಮಾಹಿತಿ
ಸಮಗ್ರ ನ್ಯೂಸ್: ನಿಂಬೆಹಣ್ಣಿನ ಬಳಕೆ ಕೊರೊನ ಕಾಲದಿಂದ ಹೆಚ್ಚಾಗಿದೆ. ಏಕೆಂದರೆ ಇದರಲ್ಲಿ ವಿಟಮಿನ್ ‘ಸಿ’ ಇದೆ ಎನ್ನುವ ಕಾರಣಕ್ಕೆ. ಇದರಿಂದ ನಮ್ಮ ದೇಹದ ರೋಗನಿರೋಧಕ ಶಕ್ತಿ ಬಲಗೊಳ್ಳುತ್ತದೆ ಎನ್ನುವ ಮಾತಿದೆ.
ಅದರಲ್ಲೂ ಸಕ್ಕರೆ ಕಾಯಿಲೆ ಇರುವವರಿಗೆ ನಿಂಬೆಹಣ್ಣಿನಿಂದ ಪ್ರಯೋಜನ ಜಾಸ್ತಿ ಎಂದು ತಿಳಿದುಬಂದಿದೆ.ಒಂದು ವೇಳೆ ನೀವು ಕೂಡ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದರೆ ನಿಮ್ಮ ಆಹಾರ ಪದ್ಧತಿಯಲ್ಲಿ ನಿಂಬೆ ಹಣ್ಣನ್ನು ಸೇರಿಸಿಕೊಳ್ಳಿ.
ನಿಂಬೆ ಹಣ್ಣಿನಲ್ಲಿ ಸಿಟ್ರಿಕ್ ಆಮ್ಲ, ಪೊಟಾಸಿಯಂ, ಮತ್ತು ಇನ್ನಿತರ ಆರೋಗ್ಯಕರ ಅಂಶಗಳು ಅಡಗಿವೆ. ಇದರಲ್ಲಿ ಪ್ರಮುಖ ವಾಗಿ ಸಿಟ್ರಿಕ್ ಆಮ್ಲ ಎನ್ನುವುದು ಜೀರ್ಣಾಂಗ ವ್ಯವಸ್ಥೆಗೆ ಹೆಚ್ಚು ಅನುಕೂಲಕರವಾಗಿ ಕೆಲಸ ಮಾಡುತ್ತದೆ. ನಿಂಬೆ ಹಣ್ಣಿನಲ್ಲಿ ಆಮ್ಮಿಯ ಪ್ರಭಾವ ಇರುವುದು ಕೂಡ ಇದರ ಕಾರಣದಿಂದಲೇ.
ನೈಸರ್ಗಿಕವಾದ ರಾಸಾಯನಿಕ ಅಂಶಗಳು ಇರುವುದರಿಂದ ಸಕ್ಕರೆ ಕಾಯಿಲೆಯನ್ನು ಇದು ತಕ್ಕಮಟ್ಟಿಗೆ ನಿಯಂತ್ರಣಕ್ಕೆ ತರುತ್ತದೆ.ನಿಂಬೆಹಣ್ಣಿಗಿಂತಲೂ ಅದರ ಸಿಪ್ಪೆಯೇ ದುಪ್ಪಟ್ಟು ಪವರ್ ಫುಲ್.ಹಣ್ಣುಗಳಲ್ಲಿ ಬಯೋ ಆಕ್ಟಿವ್ ಅಂಶಗಳು ಅಡಗಿದ್ದು, ಇವು ಬೊಜ್ಜು ನಿವಾರಣೆ ಮಾಡುತ್ತದೆ.
ಹೀಗಾಗಿ ಸಕ್ಕರೆ ಕಾಯಿಲೆಯ ಜೊತೆಗೆ ಬಿಪಿ ಇರುವ ಜನರಿಗೂ ಕೂಡ ಇದು ಹೆಚ್ಚು ಅನುಕೂಲವಾಗುತ್ತದೆ.ಈ ಆಹಾರಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಅಧಿಕ ರಕ್ತದೊತ್ತಡವನ್ನು ಕಂಟ್ರೋಲ್‌ನಲ್ಲಿಡಬಹುದು