Ad Widget .

ಕಾವೇರಿ ನೀರು ಮನೆ ಬಾಗಿಲಿಗೆ/ ಶೀಘ್ರದಲ್ಲೆ ನನಸಾಗಲಿದೆ ಬಿಬಿಎಂಪಿಯಲ್ಲಿ ವಿಲೀನಗೊಂಡ 110 ಗ್ರಾಮಗಳ ಜನರ ಕನಸು

ಸಮಗ್ರ ನ್ಯೂಸ್‌: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಕಾವೇರಿ 5ನೇ ಹಂತದ ಯೋಜನೆ ಕಾಮಗಾರಿಯು ಬಹುತೇಕ ಪೂರ್ಣಗೊಂಡಿದ್ದು, ವಿಜಯದಶಮಿ ವೇಳೆ ಉದ್ಘಾಟನೆಗೆ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ ಕೆ. ಶಿವಕುಮಾರ್ ಮಾಹಿತಿ ನೀಡಿದ್ದಾರೆ.

Ad Widget . Ad Widget .

ಕೆಂಗೇರಿಯಲ್ಲಿ ನಡೆಯುತ್ತಿರುವ ಪೈಪ್‌ಲೈನ್ ಕಾಮಗಾರಿ, ಕನಕಪುರ ತಾಲೂಕಿನ ಹಾರೋಹಳ್ಳಿ ಪಂಪ್ ಸ್ಟೇಷನ್, ಮಳವಳ್ಳಿ ತಾಲೂಕಿನ ತೊರೆ ಕಡ್ಡಹಳ್ಳಿಯ ನೀರು ಶುದ್ದೀಕರಣ ಘಟಕ ಸೇರಿದಂತೆ ಹಲವು ಪ್ರಮುಖ ಸ್ಥಳಗಳಿಗೆ ಡಿಕೆ.ಶಿವಕುಮಾರ್ ಅವರು ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿದ ಅವರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ವಿಲೀನಗೊಂಡ 110 ಗ್ರಾಮಗಳ ಜನರ ಕನಸು ಶೀಘ್ರದಲ್ಲೆ ನನಸಾಗಲಿದೆ, ಕಾವೇರಿ ನೀರು ಮನೆ ಬಾಗಿಲಿಗೆ ಸಿಗುತ್ತದೆ ಎಂಬ 15 ವರ್ಷಗಳ ಅವರ ಕನಸು ನನಸಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಕ್ಟೋಬರ್‌ನಲ್ಲಿ ಉದ್ಘಾಟನೆ ಮಾಡಲಿದ್ದಾರೆಂದು ಹೇಳಿದರು.

Ad Widget . Ad Widget .

Leave a Comment

Your email address will not be published. Required fields are marked *