Ad Widget .

ಲೆಬನಾನ್: ಇಸ್ರೇಲ್ ವೈಮಾನಿಕ ದಾಳಿಗೆ 492 ಮಂದಿ ಬಲಿ| ಸಾವಿನ ಸಂಖ್ಯೆ ಇನ್ನಷ್ಟು ಏರಿಕೆ ಸಾಧ್ಯತೆ

ಸಮಗ್ರ ನ್ಯೂಸ್: ಲೆಬನಾನ್‌ನಲ್ಲಿ ಹೆಜ್ಬುಲ್ಲಾವನ್ನು ಗುರಿಯಾಗಿಸಿಕೊಂಡು ಸೋಮವಾರ (ಸೆ.23) ಇಸ್ರೇಲ್‌ ನಡೆಸಿದ ವೈಮಾನಿಕ ದಾಳಿಯಲ್ಲಿ 492 ಜನರು ಸಾವನ್ನಪ್ಪಿದ್ದಾರೆ ಎಂದು ದೇಶದ ಆರೋಗ್ಯ ಸಚಿವಾಲಯ ಹೇಳಿದ್ದು, ಕಳೆದ 20 ವರ್ಷಗಳ ಸಂಘರ್ಷದಲ್ಲಿ ಅತಿ ದೊಡ್ಡ ದಾಳಿ ಇದು ಎಂದು ತಿಳಿಸಿದೆ.

Ad Widget . Ad Widget .

ಸೆ.24ರ ಬೆಳಿಗ್ಗಿನವರೆಗೆ 492 ಜನರು ಸಾವನ್ನಪ್ಪಿದ್ದಾರೆ ಎಂದು ಬಿಬಿಸಿ ವರದಿ ಮಾಡಿತ್ತು. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.‌ ಸತ್ತವರಲ್ಲಿ 35 ಮಕ್ಕಳು ಮತ್ತು 58 ಮಹಿಳೆಯರು ಸೇರಿದ್ದಾರೆ. ದಾಳಿಯಲ್ಲಿ 1,645 ಜನರು ಗಾಯಗೊಂಡಿದ್ದಾರೆ ಎಂದು ಲೆಬನಾನ್‌ನ ಆರೋಗ್ಯ ಸಚಿವಾಲಯ ತಿಳಿಸಿದೆ. ಸತ್ತವರಲ್ಲಿ ಎಷ್ಟು ಮಂದಿ ನಾಗರಿಕರು, ಎಷ್ಟು ಮಂದಿ ಯೋಧರಿದ್ದಾರೆ ಎಂಬ ಮಾಹಿತಿ ದೊರೆತಿಲ್ಲ.

Ad Widget . Ad Widget .

ದಾಳಿಯ ಕುರಿತು ಪ್ರತಿಕ್ರಿಯಿಸಿರುವ ಇಸ್ರೇಲ್, 2006ರ ಯುದ್ಧದ ನಂತರ ಸಶಸ್ತ್ರ ಗುಂಪು ಹೆಜ್ಬುಲ್ಲಾ ನಿರ್ಮಿಸಿದ ಮೂಲಸೌಕರ್ಯಗಳನ್ನು ನಾಶಪಡಿಸಲು, ಅದರ 1,300 ತಾಣಗಳನ್ನು ಗುರಿಯಾಗಿಸಲಾಗಿದೆ ಎಂದು ಹೇಳಿದೆ. ಆದ್ದರಿಂದ, ಸಾವಿರಾರು ಕುಟುಂಬಗಳು ತಮ್ಮ ಮನೆಗಳನ್ನು ತೊರೆದಿವೆ ಎಂದು ಬಿಬಿಸಿ ವರದಿ ಹೇಳಿದೆ.

ದಾಳಿಗೆ ಪ್ರತಿರೋಧವಾಗಿ ಉತ್ತರ ಇಸ್ರೇಲ್‌ಗೆ ಹೆಜ್ಬುಲ್ಲಾ 200ಕ್ಕೂ ಹೆಚ್ಚು ರಾಕೆಟ್‌ಗಳನ್ನು
ಉಡಾಯಿಸಿದೆ. ಇದರಿಂದ ಇಬ್ಬರು ಗಾಯಗೊಂಡಿದ್ದಾರೆ. ಎರಡೂ ಕಡೆಯವರು ಸಂಪೂರ್ಣ ಯುದ್ದೋತ್ಸಾಹದಲ್ಲಿರುವುದರಿಂದ ಆತಂಕ ವ್ಯಕ್ತಪಡಿಸಿರುವ ವಿಶ್ವದ ಪ್ರಮುಖ ರಾಷ್ಟ್ರಗಳು ಮತ್ತು ನಾಯಕರು, ಸಂಯಮ ಪಾಲಿಸುವಂತೆ ಆಗ್ರಹಿಸಿದ್ದಾರೆ.

ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಉಲ್ಬಣಗೊಳ್ಳುತ್ತಿರುವ ಯುದ್ಧ ಪರಿಸ್ಥಿತಿಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, “ಲೆಬನಾನ್ ಮತ್ತೊಂದು ಗಾಝಾ ಅಗುವುದನ್ನು ಬಯಸುವುದಿಲ್ಲ” ಎಂದಿದ್ದಾರೆ.

“ನ್ಯೂಯಾರ್ಕ್‌ನಲ್ಲಿ ವಿಶ್ವಸಂಸ್ಥೆಯ ವಿಶ್ವ ನಾಯಕರ ಸಭೆಗೆ ಮುಂಚಿತವಾಗಿ ಸಂಘರ್ಷ ಹೆಚ್ಚುತ್ತಿರುವುದು ಅತ್ಯಂತ ಅಪಾಯಕಾರಿ ಮತ್ತು ಆತಂಕಕಾರಿ. ನಾವು ಬಹುತೇಕ ಪೂರ್ಣ ಪ್ರಮಾಣದ ಯುದ್ಧದಲ್ಲಿದ್ದೇವೆ” ಎಂದು ಯುರೋಪಿಯನ್ ಒಕ್ಕೂಟದ ವಿದೇಶಾಂಗ ವ್ಯವಹಾರಗಳ ಮುಖ್ಯಸ್ಥ ಜೋಸೆಪ್ ಬೊರೆಲ್ ಹೇಳಿದ್ದಾರೆ.

Leave a Comment

Your email address will not be published. Required fields are marked *