Ad Widget .

‘ಹಿಂದೂ ಹಬ್ಬಗಳ ರಕ್ಷಣೆಗೆ ತಲವಾರು ಜೊತೆ ಜನರನ್ನು ಕಳುಹಿಸುತ್ತೇವೆ’| ಮಂಗಳೂರಿನಲ್ಲಿ ಶ್ರೀರಾಮ ಸೇನೆಯ ಕುಲಕರ್ಣಿ ಹೇಳಿಕೆ

ಸಮಗ್ರ ನ್ಯೂಸ್: ‘ರಾಜ್ಯ ಸರ್ಕಾರದಿಂದ ಹಿಂದೂ ಹಬ್ಬಗಳಿಗೆ ರಕ್ಷಣೆ ಇಲ್ಲ ಎಂಬುದು ಸಾಬೀತಾಗಿದೆ. ಹಾಗಾಗಿ ನಾವೇ ಶಸ್ತ್ರ ಹಿಡಿದು ಹಬ್ಬ ಆಚರಿಸಲು ನಿರ್ಧರಿಸಿದ್ದೇವೆ. ಮುಂಬರುವ ಗಣೇಶ ಚತುರ್ಥಿ ಸಂದರ್ಭದಲ್ಲಿ, ಆಯೋಜಕರು ವಿನಂತಿಸಿದರೆ ಮೆರವಣಿಗೆಯ ರಕ್ಷಣೆಗಾಗಿ 50 ಯುವಕರನ್ನು ತಲವಾರುಸಹಿತ ಕಳುಹಿಸಲು ಸಿದ್ಧ’ ಎಂದು ಶ್ರೀರಾಮಸೇನೆಯ ರಾಜ್ಯ ಘಟಕದ ಅಧ್ಯಕ್ಷ ಗಂಗಾಧರ ಕುಲಕರ್ಣಿ ತಿಳಿಸಿದರು.

Ad Widget . Ad Widget .

ಮಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ನಿಮಗಷ್ಟೇ ಕಲ್ಲು ಹಿಡಿಯಲು, ತಲವಾರು ಹಿಡಿಯಲು ಬರುವುದಲ್ಲ. ಹಿಂದೂ ಸಮಾಜಕ್ಕೂ ಗೊತ್ತಿದೆ ಎಂದು ಮುಸ್ಲಿಂ ಗೂಂಡಾಗಳಿಗೆ ಹೇಳಬಯಸುತ್ತೇನೆ’ ಎಂದರು.

Ad Widget . Ad Widget .

‘ನಾಗಮಂಗಲ, ದಾವಣಗೆರೆಗಳಲ್ಲಿ ಗಣೇಶೋತ್ಸವ ಮೆರವಣಿಗೆ ಸಂದರ್ಭದಲ್ಲಿ ಗಲಾಟೆ ಮಾಡಲಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ‘ಜಿಹಾದಿ’ ಶಕ್ತಿಗಳು ಪೆಟ್ರೋಲ್ ಬಾಂಬ್‌ ಎಸೆಯುವ ಮಟ್ಟಕ್ಕೆ ತಲುಪಿದ್ದಾರೆ. ರಾಜ್ಯ ಸರ್ಕಾರ ಸಂಪೂರ್ಣವಾಗಿ ಅವರ ಜೊತೆಗೆ ನಿಂತಿರುವುದೇ ಇದಕ್ಕೆ ಕಾರಣ. ಮುಸ್ಲಿಂ ಗೂಂಡಾಗಳು ‘ನಮ್ಮದೇ ಸರ್ಕಾರ ಇದೆ’ ಎಂದು ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದಾರೆ’ ಎಂದರು.

Leave a Comment

Your email address will not be published. Required fields are marked *