Ad Widget .

ಶ್ರೀಲಂಕಾಗೆ ನೂತನ ಅಧ್ಯಕ್ಷರಾಗಿ ಅನುರಾ ಕುಮಾರ ದಿಸ್ಸಾ ನಾಯಕೆ

ಸಮಗ್ರ ನ್ಯೂಸ್: ಶ್ರೀಲಂಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಎಡಪಂಥೀಯ ಒಲವು ಹೊಂದಿರುವ ಅನುರಾ ಕುಮಾರ ದಿಸ್ಸಾನಾಯಕೆ ಅವರು ಹಾಲಿ ಉದಾರವಾದಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರನ್ನು ಸೋಲಿಸಿ ಗೆಲುವು ಸಾಧಿಸಿದ್ದಾರೆ ಎಂದು ಚುನಾವಣಾ ಆಯೋಗದ ಅಂಕಿಅಂಶಗಳನ್ನು ಉಲ್ಲೇಖಿಸಿ ರಾಯಿಟರ್ಸ್ ಭಾನುವಾರ ವರದಿ ಮಾಡಿದೆ.

Ad Widget . Ad Widget .

ಈ ಮೂಲಕ ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ಅನುರಾ ಕುಮಾರ ದಿಸ್ಸಾನಾಯಕ ಆಯ್ಕೆಯಾಗಿದ್ದಾರೆ. ಶನಿವಾರ ಮತದಾನ ನಡೆಯಿತು. ದೇಶವು ತನ್ನ ಇತಿಹಾಸದಲ್ಲೇ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟಿನಿಂದ ಮತ್ತು ಅದರ ಪರಿಣಾಮವಾಗಿ ರಾಜಕೀಯ ವಿಪ್ಲವದಿಂದ ಚೇತರಿಸಿಕೊಳ್ಳಲು ಪ್ರಯತ್ನಿಸುತ್ತಿರುವುದರಿಂದ ಈ ಚುನಾವಣೆ ಶ್ರೀಲಂಕಾಕ್ಕೆ ನಿರ್ಣಾಯಕವಾಗಿದೆ.

Ad Widget . Ad Widget .

ಶ್ರೀಲಂಕಾದ ಮಾರ್ಕ್ಸ್ವಾದಿ ಒಲವುಳ್ಳ ನಾಯಕ ಅನುರಾ ಕುಮಾರ ದಿಸ್ಸಾನಾಯಕೆ ಅವರು ಸಾಲದ ಸುಳಿಯಲ್ಲಿ ಸಿಲುಕಿರುವ ದ್ವೀಪ ರಾಷ್ಟ್ರದ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯಗಳಿಸಿದ್ದಾರೆ ಎಂದು ಚುನಾವಣಾ ಆಯೋಗದ ಅಂಕಿಅಂಶಗಳನ್ನು ಉಲ್ಲೇಖಿಸಿ ಸ್ಥಳೀಯ ಟಿವಿ ಭಾನುವಾರ ತಿಳಿಸಿದೆ.

Leave a Comment

Your email address will not be published. Required fields are marked *