Ad Widget .

ಮಂಗಳೂರು: ಖಾಸಗಿ ಆಸ್ಪತ್ರೆಯ ಪಿಜಿ ವೈದ್ಯ ಕುಡಿದು ಕರ್ತವ್ಯಕ್ಕೆ ಹಾಜರ್| ವಿಡಿಯೋ ವೈರಲ್

ಸಮಗ್ರ ನ್ಯೂಸ್: ಮಂಗಳೂರಿನ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯಲ್ಲಿ ಕೆಲಸದಲ್ಲಿರುವ ಪಿಜಿ ಯುವ ವೈದ್ಯ ರಾತ್ರಿ ವೇಳೆ ಕುಡಿದು ಕರ್ತವ್ಯಕ್ಕೆ ಹಾಜರಾದ ಘಟನೆ ಸೆ.22 ರಂದು ನಡೆದಿದೆ. ರಾತ್ರಿ ವೇಳೆ ಮದ್ಯದ ಅಮಲಿನಲ್ಲಿದ್ದ ವೈದ್ಯನ ವಿಡಿಯೋ ಮಾಡಿ ರೋಗಿಗಳ ಸಂಬಂಧಿಕರು ತರಾಟೆಗೆತ್ತಿಕೊಂಡಿದ್ದಾರೆ.

Ad Widget . Ad Widget .

ವೈರಲ್ ಆಗಿರುವ ವಿಡಿಯೋದಲ್ಲಿ ಯುವ ವೈದ್ಯ ಕುಡಿದು ಎಲ್ಲಿಯೋ ಬಿದ್ದು ಬಟ್ಟೆಯೆಲ್ಲಾ ಸಂಪೂರ್ಣ ಕೆಸರು ಮಣ್ಣು ಮೆತ್ತಿಕೊಂಡಿದೆ. ಅದೇ ರೀತಿಯಲ್ಲಿ ಡಾಕ್ಟರ್ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಈ ವೇಳೆ ಒಳಗಿನ ಮೂಲೆಯಲ್ಲಿ ಕುಳಿತಿದ್ದ ವ್ಯಕ್ತಿಯನ್ನು ರೋಗಿಯ ಸಂಬಂಧಿಕರು ಮೊಬೈಲ್ ನಲ್ಲಿ ವಿಡಿಯೋ ಮಾಡಿ ಪ್ರಶ್ನಿಸಿದ್ದಾರೆ. ಸೆಕ್ಯುರಿಟಿ ಬಳಿ ಕೇಳಿದಾಗ, ಆತ ಡ್ಯೂಟಿ ಡಾಕ್ಟರ್ ಎಂದು ಹೇಳುವುದು ವಿಡಿಯೋದಲ್ಲಿದೆ.

Ad Widget . Ad Widget .

Leave a Comment

Your email address will not be published. Required fields are marked *