ಸಮಗ್ರ ನ್ಯೂಸ್: ಅನಾನಸ್ ತುಂಬಾ ಆರೋಗ್ಯಕರವಾದ ಹಣ್ಣಾಗಿದ್ದು ಇದನ್ನು ಆಹಾರ ಕ್ರಮದಲ್ಲಿ ಸೇರಿಸಿದರೆ ಕೆಮ್ಮು, ಶೀತ, ಅಸ್ತಮಾ ಮುಂತಾದ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟುವುದರ ಜತೆಗೆ ಅನೇಕ ಆರೋಗ್ಯಕರ ಗುಣಗಳನ್ನು ಪಡೆಯಬಹುದು.
ಇದರಲ್ಲಿ ಜೀರೋ ಕೊಲೆಸ್ಟ್ರಾಲ್, ವಿಟಮಿನ್ ಎ, ಬಿ, ಸಿ, ಪೊಟಾಷಿಯಂ, ಮ್ಯಾಂಗನೀಸ್, ಸತು ಹಾಗೂ ದೇಹಕ್ಕೆ ಅಗೃತವಾದ ಇತರ ಖನಿಜಾಂಶಗಳಿದ್ದು. ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದು.
ದೇಹಕ್ಕೆ ವಿಟಮಿನ್ ಸಿ ದೊರೆಯುವುದರಿಂದ ಸಂಧಿವಾತ,ಹೃದಯ ಸಮಸ್ಯೆ ಉಂಟಾಗದಂತೆ ದೇಹವನ್ನು ರಕ್ಷಣೆ ಮಾಡುತ್ತದೆ.ಅನಾನಸ್‌ನಲ್ಲಿ ವಿಟಮಿನ್ ಸಿ ಜತೆಗೆ ಸಾಕಷ್ಟು ಪ್ರಮಾಣದಲ್ಲಿ ಮ್ಯಾಂಗನೀಸ್ ಇರುವುದರಿಂದ ಮೂಳೆಗಳ ಬಲವನ್ನು ಹೆಚ್ಚಿಸುತ್ತದೆ.
ಮೆನೋಪಾಸ್ ಬಳಿಕ ಮಹಿಳೆಯರಲ್ಲಿ ಮಂಡಿನೋವಿನ ಸಮಸ್ಯೆ ಕಂಡು ಬರುತ್ತದೆ, ಇದನ್ನು ತಡೆಗಟ್ಟುವಲ್ಲಿ ಮ್ಯಾಂಗನೀಸ್ ಸಹಕಾರಿ.ದೇಹಕ್ಕೆ ಅಗ್ಯತವಿರುವ ಮ್ಯಾಂಗನೀಸ್‌ನಲ್ಲಿ ಸೇ.70ರಷ್ಟು ಖನಿಜಾಂಶ ಒಂದು ಕಪ್ ಅನಾನಸ್ ರಸ ಕುಡಿಯುವುದರಿಂದ ದೊರೆಯುವುದು.
ಕ್ಯಾನ್ಸರ್ ತಡೆಗಟ್ಟುವಲ್ಲಿ ಸಹಕಾರಿಯಾಗಿದೆ.ಊಟವಾದ ಬಳಿಕ ಒಂದು ಬೌಲ್ ಅನಾನಸ್ ತಿನ್ನಿ, ಇದು ಜೀರ್ಣಕ್ರಿಯೆಗೆ ತುಂಬಾ ಸಹಕಾರಿ.ಹೊಟ್ಟೆ ಉರಿ ಕಡಿಮೆಯಾಗುವುದು ಹಾಗೂ ಅತಿಸಾರ ಉಂಟಾಗದಂತೆ ತಡೆದು ಕರುಳಿನ ಆರೋಗ್ಯ ಹೆಚ್ಚಿಸುವುದು.
ಕೆಲವರಿಗೆ ಪ್ರಯಾಣ ಮಾಡುವಾಗ ತಲೆ ಸುತ್ತುತ್ತದೆ, ಸ್ವಲ್ಪ ಪೈನಾಪಲ್ ತುಂಡುಗಳನ್ನು ತಿನ್ನುವ ಮೂಲಕ ಪ್ರಯಾಣದಲ್ಲಿ ಕಾಡುವ ವಾಂತಿ ಸಮಸ್ಯೆ ತಡೆಗಟ್ಟಬಹುದು.